ಆ್ಯಪ್ನಗರ

ವಿಜಯೋತ್ಸವದಲ್ಲಿ ಶಾಸಕಿ ರೂಪಾಲಿ ಡ್ಯಾನ್ಸ್‌

ಕಾರವಾರ : ನಗರದಲ್ಲಿ ಶುಕ್ರವಾರ ಬಿಜೆಪಿಯಿಂದ ನಡೆದ ವಿಜಯೋತ್ಸವದಲ್ಲಿ ಶಾಸಕಿ ರೂಪಾಲಿ ನಾಯ್ಕ ಕಾರ್ಯಕರ್ತರೊಂದಿಗೆ ನರ್ತಿಸಿ ಗಮನ ಸೆಳೆದರು.

Vijaya Karnataka 25 May 2019, 5:00 am
ಕಾರವಾರ : ನಗರದಲ್ಲಿ ಶುಕ್ರವಾರ ಬಿಜೆಪಿಯಿಂದ ನಡೆದ ವಿಜಯೋತ್ಸವದಲ್ಲಿ ಶಾಸಕಿ ರೂಪಾಲಿ ನಾಯ್ಕ ಕಾರ್ಯಕರ್ತರೊಂದಿಗೆ ನರ್ತಿಸಿ ಗಮನ ಸೆಳೆದರು.
Vijaya Karnataka Web mrs rupali dance in victory day
ವಿಜಯೋತ್ಸವದಲ್ಲಿ ಶಾಸಕಿ ರೂಪಾಲಿ ಡ್ಯಾನ್ಸ್‌


ದೇಶದಲ್ಲಿ ಬಿಜೆಪಿಯ ಜಯಭೇರಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ದಾಖಲೆಯ ಮತಗಳ ಅಂತರದಿಂದ ಆಯ್ಕೆಯಾಗಿರುವ ನಿಮಿತ್ತ ಬಿಜೆಪಿ ಕಾರ್ಯಕರ್ತರು ಕಾರವಾರದಲ್ಲಿ ವಿಜಯೋತ್ಸವ ಆಚರಿಸಿದರು.

ನಗರದ ಬಿಜೆಪಿ ಕಾರ್ಯಾಲಯದ ಎದುರು ಪಟಾಕಿ ಸಿಡಿಸಿದ ಬಿಜೆಪಿ ಕಾರ್ಯಕರ್ತರು ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಈ ವೇಳೆ ಶಾಸಕಿ ರೂಪಾಲಿ ನಾಯ್ಕ ಅವರ ಸಂತಸ ಮುಗಿಲು ಮುಟ್ಟಿತ್ತು. ಪಕ್ಷದ ಕಾರ್ಯಕರ್ತೆಯರೊಂದಿಗೆ ವಾದ್ಯದ ಸದ್ದಿಗೆ ನರ್ತನ ಮಾಡಿದ ಅವರು ತಮ್ಮ ಖುಷಿ ವ್ಯಕ್ತಪಡಿಸಿದರು. ಬಳಿಕ ಪಕ್ಷದ ನೂರಾರು ಕಾರ್ಯಕರ್ತರು ನರೇಂದ್ರ ಮೋದಿ ಮತ್ತು ಅನಂತಕುಮಾರ ಹೆಗಡೆ ಪರ ಘೋಷಣೆ ಕೂಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ