ಆ್ಯಪ್ನಗರ

ಮುಂಡಗೋಡ ಸರಕಾರಿ ನೌಕರರ ಸಂಘಕ್ಕೆ ಆಯ್ಕೆ

ಮುಂಡಗೋಡ : ಸರಕಾರಿ ನೌಕರರ ಸಂಘದ ತಾಲೂಕು ಸಮಿತಿಗೆ ಸದಸ್ಯರ ಆಯ್ಕೆ ಚುನಾವಣೆ ಜರುಗಿದ್ದು, 18 ಜನರು ಅವಿರೋಧವಾಗಿ ಆಯ್ಕೆಯಾದರೆ 12 ಜನರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.

Vijaya Karnataka 15 Jun 2019, 5:00 am
ಮುಂಡಗೋಡ : ಸರಕಾರಿ ನೌಕರರ ಸಂಘದ ತಾಲೂಕು ಸಮಿತಿಗೆ ಸದಸ್ಯರ ಆಯ್ಕೆ ಚುನಾವಣೆ ಜರುಗಿದ್ದು, 18 ಜನರು ಅವಿರೋಧವಾಗಿ ಆಯ್ಕೆಯಾದರೆ 12 ಜನರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.
Vijaya Karnataka Web KWR-14MND4=


ಐದು ವರ್ಷದ ಅವಧಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ತಾಲೂಕು ಸಮಿತಿಗೆ 30 ಜನರ ಆಯ್ಕೆ ಮಾಡಬೇಕಿದ್ದು, ಈ ಕುರಿತು ಸರಕಾರಿ ನೌಕರರ ಸಭೆ ನಡೆಸಲಾಯಿತು. ನಂತರ ವಿವಿಧ ಇಲಾಖೆಗಳಿಂದ 18 ಜನರನ್ನು ತಾಲೂಕು ಸಮಿತಿಗೆ ಅವಿರೋಧವಾಗಿ ಆಯ್ಕೆ ಮಾಡಿದರೆ ಉಳಿದ ಹನ್ನೆರಡು ಕ್ಷೇತ್ರಗಳಿಗೆ ಗುರುವಾರ ಚುನಾವಣೆ ನಡೆಸಲಾಯಿತು.

ಪ್ರಾಥಮಿಕ ಶಾಲಾ ಶಿಕ್ಷ ಕರ ಕ್ಷೇತ್ರ, ಪ್ರೌಢ ಶಾಲಾ ಶಿಕ್ಷ ಕರ ಕ್ಷೇತ್ರ ಸೇರಿದಂತೆ ವಿವಿಧ ಇಲಾಖೆಗಳ ಒಂಬತ್ತು ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಯಿತು.

ಅವಿರೋಧವಾಗಿ ಆಯ್ಕೆಯಾದವರು: ಜಿ.ಬಿ.ಭಟ್ಟ, ವಿ.ಪಿ.ಶೆಟ್ಟೆಪ್ಪನವರ, ರಾಘವೇಂದ್ರ ಗಿರಡ್ಡಿ, ರಜೀಯಾ ಬೇಗಂ, ಅಶೋಕ ಕುಮಾರ, ಮಹೇಶ ತಳವಾರ, ಶಿವಾಜಿ ವಾಸಂಬಿ,ಎಫ್‌.ಎಸ್‌.ಜನಗೇರಿ,ಎನ್‌.ಎಚ್‌. ದೊಡ್ಡಮನಿ, ಜಿ.ಎಚ್‌.ಗಡೇದ್‌, ನಾಗಯ್ಯ ಹಿರೇಮಠ, ವೀಣಾ ರಾಠೋಡ, ಶ್ರೀಶೈಲಪ್ಪಾ ಪಟ್ಟಣಶೇಟ್ಟಿ, ನಾಗರಾಜ ವಾಲ್ಮೀಕಿ, ಪರಿಯಪ್ಪ ಎ.ಎಚ್‌, ಪದ್ಮಾ ಬಿ.ಎಚ್‌, ನರೇಂದ್ರ ನಾಯ್ಕ, ಎಸ್‌.ಎಫ್‌.ಪಾಟೀಲ, ಹೀಗೆ 18ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ನಡೆದ ಚುನಾವಣೆಯಲ್ಲಿ 12 ಜನರು ಆಯ್ಕೆಯಾದರು. ವಿವರ ಇಂತಿದೆ. ಸೋಮಶೇಖರ ಗದಿಗೆಪ್ಪನವರ, ಗಣೇಶ ಗಬ್ಬೂರ, ಶ್ರೀಧರ ಭಜಂತ್ರಿ, ಶ್ರೀಶೈಲ್‌ ಐನಾಪುರ, ದಯಾನಂದ ನಾಯ್ಕ, ಸಿದ್ಧಾರೂಢ ಶಬಾನಿ, ಸುರೇಶ ಪೂಜಾರ, ವಸಂತಕುಮಾರ ರಾಠೋಡ, ವೀರಯ್ಯ ಕುರಹಟ್ಟಿಮಠ, ಎಚ್‌.ಎಲ್‌.ತಳವಾರ, ನಿಸ್ಸಾರ ಅಹ್ಮದ್‌ ಬೇಗ್‌, ಪ್ರಸನ್ನ ಶೆಟ್ಟಿ ಆಯ್ಕೆಯಾಗಿದ್ದಾರೆ. ಮುಂದಿನ ವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ