ಆ್ಯಪ್ನಗರ

ನಾಗರಾಜ್‌ ನಾಯ್ಕ ಸಾಂಸ್ಕೃತಿಕ ರಾಯಭಾರಿ

ಅಂಕೋಲಾ : ಒಬ್ಬ ಪ್ರಗತಿಪರ ಕೃಷಿಕ, ತನ್ನ ಕೃಷಿ ಚಟುವಟಿಕೆಯ ನಡುವೆಯೂ ಅಲ್ಪ ಪ್ರಮಾಣದ ವಿದ್ಯೆ ಕಲಿತು ಯಕ್ಷ ಗಾನದಂತಹ ಕಲೆಯನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮುನ್ನುಡಿ ಬರೆದ ನಾಗರಾಜ್‌ ನಾಯ್ಕ ಅವರು ಸಮಾಜದ ಸಾಂಸ್ಕೃತಿಕ ಲೋಕಕ್ಕೆ ರಾಯಭಾರಿಯಾಗಿದ್ದಾರೆ ಎಂದು ನಿಲಗೋಡ ಯಕ್ಷ ಚೌಡೇಶ್ವರಿ ದೇವಾಲಯದ ಮುಖ್ಯ ಅರ್ಚಕ ಮಾದೇವ ಅಂಬಿಗ ಹೇಳಿದರು.

Vijaya Karnataka 28 Mar 2019, 5:00 am
ಅಂಕೋಲಾ : ಒಬ್ಬ ಪ್ರಗತಿಪರ ಕೃಷಿಕ, ತನ್ನ ಕೃಷಿ ಚಟುವಟಿಕೆಯ ನಡುವೆಯೂ ಅಲ್ಪ ಪ್ರಮಾಣದ ವಿದ್ಯೆ ಕಲಿತು ಯಕ್ಷ ಗಾನದಂತಹ ಕಲೆಯನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮುನ್ನುಡಿ ಬರೆದ ನಾಗರಾಜ್‌ ನಾಯ್ಕ ಅವರು ಸಮಾಜದ ಸಾಂಸ್ಕೃತಿಕ ಲೋಕಕ್ಕೆ ರಾಯಭಾರಿಯಾಗಿದ್ದಾರೆ ಎಂದು ನಿಲಗೋಡ ಯಕ್ಷ ಚೌಡೇಶ್ವರಿ ದೇವಾಲಯದ ಮುಖ್ಯ ಅರ್ಚಕ ಮಾದೇವ ಅಂಬಿಗ ಹೇಳಿದರು.
Vijaya Karnataka Web KWR-27ANK1


ಅವರು ತಾಲೂಕಿನ ತೆಂಕಣಕೇರಿಯಲ್ಲಿ ನಾಗರಾಜ ನಾಯ್ಕ ವಿರಚಿತ 6ನೇ ಕೃತಿ 'ಬೊಮ್ಮಯ್ಯ ದೇವ ಮಹಾತ್ಮೆ' ಯಕ್ಷ ಗಾನ ಕೃತಿ ಬಿಡುಗಡೆ ಮಾಡಿ ಆಶೀರ್ವಚನ ನೀಡಿ ಮಾತನಾಡಿದರು.

ಸಮಾಜಕ್ಕೆ ನಮ್ಮಿಂದ ಒಳ್ಳೆಯದನ್ನು ಮಾಡಲಾಗದಿದ್ದರೂ, ಕೆಟ್ಟದ್ದನ್ನು ಮಾತ್ರ ಮಾಡಬೇಡಿ ಎಂದರು.

ಅರ್ಬನ್‌ ಬ್ಯಾಂಕಿನ ನಿರ್ದೇಶಕ ಗೋವಿಂದರಾಯ ನಾಯ್ಕ ಅಧ್ಯಕ್ಷ ತೆ ವಹಿಸಿ ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಜ್ಯ ಕೃಷಿ ಸಾಧಕ ಪ್ರಶಸ್ತಿ ಪಡೆದಿರುವ ನಾಗರಾಜ ನಾಯ್ಕ ನೇರ ಮಾತುಗಳ ಮೂಲಕ ಇದ್ದದ್ದನ್ನು ಇದ್ದ ಹಾಗೆ ಹೇಳುವವರು. ಇಂಥವರನ್ನು ಸಮಾಜ ಗುರುತಿಸಿ ಗೌರವಿಸಬೇಕಾದ ಅವಶ್ಯಕತೆ ಇದೆ ಎಂದರು.

ಕೃತಿಕಾರ ನಾಗರಾಜ್‌ ನಾಯ್ಕ ಮಾತನಾಡಿ, ಎಲ್ಲ ಜಾತಿ ಸಮುದಾಯದ ಜನತೆ ಒಂದೆಡೆ ಸೇರಿದರೆ ಮಾತ್ರ ಧರ್ಮ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ ಎಂದರು.

ನೀಲಗೋಡ ಯಕ್ಷ ಚೌಡೇಶ್ವರಿ ದೇಗುಲದ ಮುಖ್ಯ ಅರ್ಚಕ ಮಾದೇವ ಅಂಬಿಗ, ಹೊಸಗದ್ದೆಯ ಬೊಮ್ಮಯ್ಯ ದೇವಸ್ಥಾನದ ಮುಖ್ಯ ಅರ್ಚಕ ದೇವಪ್ಪ ಗುನಗಾ, ವೆಂಕಟ್ರಮಣ ಗುನಗ, ಕೊಗ್ರೆ, ನಾಗರಾಜ ಗುನಗಾ ಅಲಗೇರಿ, ನಾಗರಾಜ ಗುನಗಾ. ಸೂರ್ವೇ, ಗಣಪತಿ ಗುನಗಾ ಹೊನ್ನೆಬೈಲ, ಡಾ.ಗೀತಾ ಬಿ ನಾಯಕ, ಡಾ.ಅರ್ಚನಾ ನಾಯಕ, ಪಿಡಿಓ ರವೀಂದ್ರ ಬಾಬು, ಹೂವಿನ ವ್ಯಾಪಾರಿ ಮಾಸ್ತಿ ಗೊಂಡ ಅವರನ್ನು ಸನ್ಮಾನಿಸಲಾಯಿತು.

ಜ್ಞಾನದೇವ ನಾಯಕ. ಸೂರ್ವೆ, ಶೆಟಗೇರಿಯ ವರ ಮಹಾ ಗಣಪತಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ನಾಯಕ, ಸಿಪಿಐ ಪ್ರಮೋದ್‌ ಕುಮಾರ್‌ ಜೈನ್‌, ಕೃಷಿ ವಿಜ್ಞಾನಿ ಸತೀಶ ಗುನಗಾ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರಾಚಾರ್ಯ ರಾಮಕೃಷ್ಣ ನಾಯಕ, ಮಾಲಾ ನಾಗರಾಜ್‌ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲೇಖಕ ನಾಗರಾಜ ನಾಯ್ಕ ಸ್ವಾಗತಿಸಿದರು. ಸುಭಾಷ ಕಾರೇಬೈಲ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಅಗಲಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ