ಆ್ಯಪ್ನಗರ

ನಾರಾಯಣ ಭಾಗವತರಿಗೆ ತಾಳಮದ್ದಳೆ ಮೂಲಕ ನುಡಿನಮನ

ಶಿರಸಿ : ತಾಲೂಕಿನ ಸೋಂದಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಸುಭದ್ರಾ ರಾಯಭಾರ ಆಖ್ಯಾನದ ತಾಳಮದ್ದಳೆ ಮೂಲಕ ನೆಬ್ಬೂರ ನಾರಾಯಣ ಭಾಗವತರಿಗೆ ನುಡಿನಮನ ಸಲ್ಲಿಸಲಾಯಿತು.

Vijaya Karnataka 20 May 2019, 5:00 am
ಶಿರಸಿ : ತಾಲೂಕಿನ ಸೋಂದಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಸುಭದ್ರಾ ರಾಯಭಾರ ಆಖ್ಯಾನದ ತಾಳಮದ್ದಳೆ ಮೂಲಕ ನೆಬ್ಬೂರ ನಾರಾಯಣ ಭಾಗವತರಿಗೆ ನುಡಿನಮನ ಸಲ್ಲಿಸಲಾಯಿತು.
Vijaya Karnataka Web SRS-19SRS5


ಇಲ್ಲಿಯ ಸಹೃದಯೀ ಸಾಹಿತ್ಯ ಕೂಟದಿಂದ ದಿವಂಗತ ನಾರಾಯಣ ಭಟ್ಟ ಸೋಂದಾ ಅವರ ಸಂಸ್ಮರಣಾರ್ಥ ಸಂಘಟಿಸಿದ್ದ ತಾಳಮದ್ದಳೆಯನ್ನು ನೆಬ್ಬೂರು ಭಾಗವತರಿಗೆ ಅರ್ಪಿಸಲಾಯಿತು.

ನುಡಿನಮನ ಸಲ್ಲಿಸಿದ ಯಕ್ಷ ಶುಭೋದಯದ ಅಧ್ಯಕ್ಷ ಪ್ರೊ. ಜಿ.ಎ. ಹೆಗಡೆ ಸೋಂದಾ, ನೆಬ್ಬೂರರ ಕಂಠಸಿರಿಯಿಂದ ಹೊರಟ ಭಾಗವತಿಕೆ ಎಂಬ ನಾದ, ನಿನಾದವಾಗಿ ರಾಜ್ಯದೆಲ್ಲೆಡೆ ವ್ಯಾಪಿಸಿ ವಿದೇಶದಲ್ಲಿರುವ

ಯಕ್ಷಾಭಿಮಾನಿಗಳನ್ನು ಸಂತೃಪ್ತಪಡಿಸಿದೆ. ನೆಬ್ಬೂರರಿಗೆ ನೆಬ್ಬೂರರೇ ಸಾಟಿ ಎಂಬುದು ಯಕ್ಷ ಪ್ರಿಯರ ಆತ್ಮೀಯ ಅನಿಸಿಕೆಯಾಗಿದೆ. ಅವರು ಯಕ್ಷ ಗಾನ ಪ್ರಪಂಚದಲ್ಲಿ ಮನೆ ಮಾತಾಗಿದ್ದನ್ನು

ಯಾರೂ ಮರೆಯುವ ಹಾಗಿಲ್ಲ ಎಂದರು. ಇಡಗುಂಜಿ ಮೇಳಕ್ಕೆ ಜೀವಧ್ವನಿಯಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಭಾವಪೂರ್ಣ ರಸವತ್ತಾದ ತಾಳಮದ್ದಲೆಗಳಿಗೂ ಜೀವಂತಿಕೆ ತುಂಬಿ ನಿಜಾರ್ಥದಲ್ಲಿ ತುಂಬಿದ ಕೊಡವಾಗಿ, ಭಾಗವತ ಶ್ರೇಷ್ಠರಾಗಿ ಈಗ ರಂಗದಿಂದ ನಿರ್ಗಮಿಸಿದ್ದಾರೆ ಎಂದರು. ಯಕ್ಷಾಭಿಮಾನಿಗಳ ಮನೆ ಮನೆಯಲ್ಲಿ ಅವರ ರಾಮ ನಿರ್ಯಾಣದ ಪದ್ಯಗಳು ಸದಾ ರಿಂಗುಣಿಸುತ್ತಾ ಅವರ ಭಾಗವತಿಕೆಯ ಸಾರಸರ್ವಸ್ವವನ್ನು ಸಾರುತ್ತಲೇ ಇರುತ್ತವೆ. ನೆಬ್ಬೂರ ಶೈಲಿಯ ಭಾಗವತರು ಈ ಕ್ಷೇತ್ರಕ್ಕೆ ಬರುವಂತಾಗಲಿ ಎಂದು ಆಶಿಸಿದರು. ನೆಬ್ಬೂರರ ಒಡನಾಡಿ ಆರ್‌. ಎಂ. ಹೆಗಡೆ ಹಂದೀಮನೆ, ಒಡಾಬಡಗಿನಲ್ಲಿ ನೆಬ್ಬೂರರ ಹಾಡುಗಾರಿಕೆಯ ಶೈಲಿಯನ್ನು ಅನುಕರಿಸಿ ಕಲಿತು ರಂಗದಲ್ಲಿ ಅದನ್ನು ಚಿರಸ್ಥಾಯಿಯಾಗಿರಿಸುವುದು ಮುಂಬರುವ ಭಾಗವತರ ಹೊಣೆಗಾರಿಕೆಯಾಗಿದೆ ಎಂದರು. ಸೋಂದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಿ.ವಿ. ಹೆಗಡೆ, ಅಧ್ಯಕ್ಷ ತೆ ವಹಿಸಿದ್ದರು. ಸೋಂದಾ ಭಾಗದಲ್ಲಿ ನಾಣೀ ಭಾಗವತರ ಭಾಗವತಿಕೆಯಲ್ಲಿ ನಡೆದ ಕೆಲವು ಪ್ರಸಂಗಗಳನ್ನು ನೆನಪಿಸಿದರು. ರಾಜೇಶ ಶಾಸ್ತ್ರಿ ಹುಲದೇವನಸರ ನಿರೂಪಿಸಿದರು.

ನಂತರ ನಡೆದ ತಾಳಮದ್ದಳೆ ಸುಭದ್ರಾ ರಾಯಭಾರದಲ್ಲಿ ಉಮ್ಮಚಗಿ ನಾರಾಯಣ ಭಾಗವತರ ಸುಶ್ರಾವ್ಯ ಭಾಗವತಿಕೆಗೆ ಗಾಣಗದ್ದೆ ಸುಬ್ರಾಯ ಭಟ್ಟರ ಮದ್ದಳೆ ಸಾಂಗತ್ಯ ಒದಗಿ ಮೆರಗು ನೀಡಿತು. ಕೃಷ್ಣನಾಗಿ ರಾಜೇಶ ಶಾಸ್ತ್ರಿ ಗಯಗಂದರ್ವನನ್ನು ಎಂಟು ದಿನದಲ್ಲಿ ಸಂಹರಿಸುವ ಪ್ರತಿಜ್ಞೆ ಈಡೇರಿಸುವಲ್ಲಿಯ ಸಂದಿಗ್ದತೆಯನ್ನು ನಾರದ ಪಾತ್ರಧಾರಿ ಶ್ರೀಧರ ಹೆಗಡೆ ನಕ್ಷೆಯವರಲ್ಲಿ ಪರಿಣಾಮಕಾರಿಯಾಗಿ ತಿಳಿಸಿ ಪೂರಕ ಸಂಭಾಷಣೆ ನಡೆಸಿದರು. ಅಭಿಮನ್ಯುವಾಗಿ ಸುದೀಪ ಹೆಗಡೆ ಸಿರಸಿಮಕ್ಕಿ ಅರ್ಜುನನ ಪಾತ್ರವನ್ನು ಪ್ರೊ. ಜಿ. ಎ. ಹೆಗಡೆ, ಸೋಂದಾ ಚಿತ್ರಿಸಿದರು. ಸುಭದ್ರೆಯಾಗಿ ಶೇಷಗಿರಿ ಭಟ್‌ ಸೋಂದಾ , ಭೀಮನಾಗಿ ಶ್ರೀಧರ ಹೆಗಡೆ ನಕ್ಷೆ ಪಾಲ್ಗೊಂಡು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ