ಆ್ಯಪ್ನಗರ

ರಾಮರಾಜ್ಯವಲ್ಲ, ಮೋದಿ ರಾಜ್ಯ: ನಾಗರಾಜ ಟೀಕೆ

ಕುಮಟಾ : ಬಿಜೆಪಿಯವರು ರಾಮರಾಜ್ಯವಲ್ಲ, ಮೋದಿ ರಾಜ್ಯ ಕಟ್ಟಲು ಹೊರಟಿದ್ದಾರೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಸಂಭಾವನ ಪಾರ್ಟಿಯ ಅಭ್ಯರ್ಥಿ ನಾಗರಾಜ ಶೇಟ್‌ ಟೀಕಿಸಿದರು.

Vijaya Karnataka 22 Apr 2019, 5:00 am
ಕುಮಟಾ : ಬಿಜೆಪಿಯವರು ರಾಮರಾಜ್ಯವಲ್ಲ, ಮೋದಿ ರಾಜ್ಯ ಕಟ್ಟಲು ಹೊರಟಿದ್ದಾರೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಸಂಭಾವನ ಪಾರ್ಟಿಯ ಅಭ್ಯರ್ಥಿ ನಾಗರಾಜ ಶೇಟ್‌ ಟೀಕಿಸಿದರು.
Vijaya Karnataka Web narendra modi nagaraja criticism
ರಾಮರಾಜ್ಯವಲ್ಲ, ಮೋದಿ ರಾಜ್ಯ: ನಾಗರಾಜ ಟೀಕೆ


ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಳಗುಪ್ಪ-ಸಿದ್ದಾಪುರ ಕೇವಲ 16 ಕಿ.ಮೀ. ರೈಲು ಮಾರ್ಗ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಮಾಡಲು ಕಳೆದ 25 ವರ್ಷಗಳಿಂದ ಅನಂತಕುಮಾರ ಹೆಗಡೆಗೆ ಸಾಧ್ಯವಾಗಿಲ್ಲ. ಸದಾ ಕೋಮುವಾದ ಆಧಾರದ ರಾಜಕಾರಣ ನಡೆಸಿಕೊಂಡು ಬಂದಿರುವ ಅನಂತಕುಮಾರ ಅಭಿವೃದ್ಧಿಯ ಬಗ್ಗೆ ಹೇಳಲು ಏನೂ ಉಳಿದುಕೊಂಡಿಲ್ಲ. ಶಾಂತಿ ನೆಮ್ಮದಿಯ ನೆಲೆಯಾಗಿದ್ದ ಕುಮಟಾದಲ್ಲಿ ಕೋಮು ಭಾವನೆಯ ಕೊಳ್ಳಿ ಇಟ್ಟಿದ್ದೇ ದೊಡ್ಡ ಸಾಧನೆ. ಕೇವಲ ಅಪ್ಪ, ಅಮ್ಮ, ರಕ್ತ ಮುಂತಾದ ಅಸಂಬದ್ಧ ಪದಗಳ ಬಳಕೆಯಿಂದ ಸಂಸ್ಕಾರಕ್ಕೆ ಕುತ್ತು ತರುತ್ತಿದ್ದಾರೆ. ಅನಂತಕುಮಾರ ಎಲ್ಲ ತಪ್ಪು ನಡೆಗಳಿಗೆ ಪ್ರಧಾನಿ ಮೋದಿ ಸಹಕರಿಸುತ್ತಾರೆ ಎಂದು ದೂರಿದರು.

ಮತದಾರರು ಅತ್ಯಂತ ಪ್ರಭುದ್ಧತೆಯಿಂದ ಇಂತಹ ಅಭ್ಯರ್ಥಿಯ ಠೇವಣಿ ಜಪ್ತು ಮಾಡಿ ಸೋಲಿಸಿದರೆ ಈ ಜಿಲ್ಲೆಗೆ ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ. ಧರ್ಮದ ಹೆಸರಿನಲ್ಲಿ ಬೆಂಕಿ ಹಾಕುವುದರಲ್ಲಿ ಅನಂತಕುಮಾರ ಎತ್ತಿದ ಕೈ. ಕುಮಟಾ ಗಲಭೆಯಲ್ಲಿ ನೂರಾರು ಮುಗ್ಧ ಯುವಕರ ಮೇಲೆ ಪ್ರಕರಣ ದಾಖಲಾಗಿದ್ದು, ಅವರು ದಿನನಿತ್ಯ ಕೋರ್ಟ್‌ ಕಚೇರಿಗೆ ಅಲೆದಾಡುತ್ತಿದ್ದಾರೆ. ಅವರನ್ನು ಬಳಸಿಕೊಂಡು ಅಧಿಕಾರಕ್ಕೇರಿದ ಅನಂತಕುಮಾರ ನಿಶ್ಚಿಂತರಾಗಿದ್ದಾರೆ.

ಸಂವಿಧಾನದ ಮೇಲೆ ಅನಂತಕುಮಾರ ಹೆಗಡೆಗೆ ಗೌರವ ಇಲ್ಲ. ಅಭಿವೃದ್ಧಿಯ ಚಿಂತನೆ ಇಲ್ಲ. ಸಂಸದರ ಪ್ರದೇಶ ಅಭಿವೃದ್ಧಿ ಅನುದಾನ ವಾಪಸ್‌ ಕಳಿಸಿದ್ದೇ ಇವರ ದೊಡ್ಡ ಸಾಧನೆ. ಧರ್ಮದ ಬಗ್ಗೆ ಮಾತನಾಡುವ ಇವರಲ್ಲಿ ರಾಮನ ಆದರ್ಶವೂ ಇಲ್ಲ, ಕೃಷ್ಣನ ನಿರ್ದಾಕ್ಷಿಣ್ಯ ಕ್ರಮವೂ ಕಾಣಲು ಸಿಗುವುದಿಲ್ಲ ಎಂದು ಟೀಕಿಸಿದರು.

ಪಕ್ಷ ಕಾರ್ಯಕರ್ತರ ಮೇಲೆ ಅನಂತಕುಮಾರ ಹೆಗಡೆಗೆ ಅಭಿಮಾನ ಇದೆ ಎಂದಾದರೆ ಅನಿಲ ದುರಂತದಲ್ಲಿ ಸಾವನ್ನಪ್ಪಿದ ಪಕ್ಷ ದ ಹಿರಿಯ ಮುಖಂಡೆ ಜಯಶ್ರೀ ಪಟಗಾರ ಅವರ ಮನೆಗೆ ಅನಂತ ಸೌಜನ್ಯಕ್ಕೂ ಭೇಟಿ ನೀಡಿಲ್ಲ. ಧರ್ಮ, ಜಾತಿ ಎಲ್ಲವನ್ನೂ ಸ್ವಾರ್ಥಕ್ಕೆ ಬಳಸಲಾಗುತ್ತಿದೆ ಎಂದು ಅವರು ದೂರಿದರು.

ಜಾತಿ, ಧರ್ಮದ ರಾಜಕಾರಣದಿಂದ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಛೇ ದಿನ್‌ ಘೋಷಣೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲೂ ಕಾಣಲು ಸಿಗುತ್ತಿಲ್ಲ ಎಂದು ನಾಗರಾಜ ಶೇಟ್‌ ಅಣಕವಾಡಿದರು.

ಸುದ್ದಿಗೋಷ್ಠಿಯಲ್ಲಿ ಸೈಯದ್‌ ಯುಸುಫ್‌, ವಸಂತ ಕುಮಟಾಕರ್‌, ಶೇಖರ ನಾಯ್ಕ, ಲಕ್ಷ ್ಮಣ ಅಂಬಿಗ, ಗಣಪತಿ ಶೇಟ್‌ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ