ಆ್ಯಪ್ನಗರ

ನಾಟಿ ಪಶು ವೈದ್ಯಕೀಯ ತರಬೇತಿ

ಶಿರಸಿ : ನಾಟಿ ಪಶು ವೈದ್ಯಕೀಯ ತರಬೇತಿ ಕಾರ್ಯಕ್ರಮ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿನಡೆಯಿತು.

Vijaya Karnataka 13 Oct 2019, 5:00 am
ಶಿರಸಿ : ನಾಟಿ ಪಶು ವೈದ್ಯಕೀಯ ತರಬೇತಿ ಕಾರ್ಯಕ್ರಮ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿನಡೆಯಿತು.
Vijaya Karnataka Web 12SRS3_26


ಧಾನ್‌ ಫೌಂಡೇಷನ್‌ ಸಹಯೋಗದಲ್ಲಿಎರಡು ದಿನಗಳ ಕಾಲ ನಡೆದ ತರಬೇತಿ ಕಾರ್ಯಕ್ರಮವನ್ನು ನಬಾರ್ಡ್‌ನ ಜಿಲ್ಲಾಅಭಿವೃದ್ಧಿ ವ್ಯವಸ್ಥಾಪಕ ರೆಜಿಸ್‌ ಇಮ್ಯಾನುವಲ್‌ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ನಾಟಿ ಪಶು ವೈದ್ಯಕೀಯ ಪದ್ಧತಿ ಮಹತ್ವ ಮತ್ತು ಅವಶ್ಯಕತೆ ಕುರಿತು ತಿಳಿಸಿದರು.

ಭೈಫ್‌ ಸಂಸ್ಥೆಯ ನಿವೃತ್ತ ನಿರ್ದೇಶಕ ಜಿ.ವಿ.ಹೆಗಡೆ, ನಾಟಿ ಪಶು ವೈದ್ಯಕೀಯ ಪದ್ಧತಿ ಬೆಳೆಸಲು ಇಂತಹ ಕಾರ್ಯಕ್ರಮಗಳ ಅಗತ್ಯತೆಯಿದೆ ಎಂದರು. ಕೃಷಿ ವಿಜ್ಞಾನ ಕೇಂದ್ರದ ಮಂಜು ಎಂ.ಜೆ., ತರಬೇತಿದಾರರಾಗಿ ಪ್ರಾದೇಶಿಕ ಪಶು ಸಂಶೋಧನಾ ಅಧಿಕಾರಿ ಡಾ.ಗಣೇಶ ಹೆಗಡೆ, ಧಾನ್‌ ಫೌಂಡೇಷನ್‌ ವಲಯ ಸಂಯೋಜಕರಾದ ಗಜಾನನ ಹೆಗಡೆ, ಭಾರತಿ ಭಟ್ಟ ಪಾಲ್ಗೊಂಡಿದ್ದರು. ನಾಟಿ ವೈದ್ಯರಿಂದ ನಾಟಿ ವೈದ್ಯಕೀಯ ಪದ್ಧತಿಗಳ ವಿನಿಮಯ ನಡೆಯಿತು. ರಂಗನಾಥ ಜಿ. ಜೆ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ