ಆ್ಯಪ್ನಗರ

ನವಚೇತನ ಸಂಘಟನೆಯಿಂದ ಹಿರಿಯರಿಗೆ ಸನ್ಮಾನ

ದಾಂಡೇಲಿ : ನಗರದ ನವಚೇತನ ಕೋಮಾರಪಂತ ಸ್ವ-ಸಹಾಯ ಸಂಘದ ನಾಲ್ಕನೆಯ ವಾರ್ಷಿಕೋತ್ಸವದ ಪ್ರಯುಕ್ತ ಸಮಾಜದ ಹಿರಿಯ ಹಾಗೂ ಆದರ್ಶ ದಂಪತಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಜತೆಗೆ ಪ್ರತಿಭೆಗಳನ್ನು ಪುರಸ್ಕರಿಸಿ ಬಹುಮಾನ ನೀಡುವ ಕಾರ್ಯುಕ್ರಮ ಅರ್ಥಪೂರ್ಣವಾಗಿ ನಡೆಯಿತು.

Vijaya Karnataka 30 Jul 2019, 5:00 am
ದಾಂಡೇಲಿ : ನಗರದ ನವಚೇತನ ಕೋಮಾರಪಂತ ಸ್ವ-ಸಹಾಯ ಸಂಘದ ನಾಲ್ಕನೆಯ ವಾರ್ಷಿಕೋತ್ಸವದ ಪ್ರಯುಕ್ತ ಸಮಾಜದ ಹಿರಿಯ ಹಾಗೂ ಆದರ್ಶ ದಂಪತಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಜತೆಗೆ ಪ್ರತಿಭೆಗಳನ್ನು ಪುರಸ್ಕರಿಸಿ ಬಹುಮಾನ ನೀಡುವ ಕಾರ್ಯುಕ್ರಮ ಅರ್ಥಪೂರ್ಣವಾಗಿ ನಡೆಯಿತು.
Vijaya Karnataka Web KWR-28DND4
ದಾಂಡೇಲಿ ನವಚೇತನ ಕೋಮಾರಪಂತ ಸ್ವ-ಸಹಾಯ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು, ಆದರ್ಶ ದಂಪತಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಅಖಿಲ ಕೋಮಾರಪಂತ ಸಮಾಜದ ಕೇಂದ್ರ ಸಮಿತಿ ಅಧ್ಯಕ್ಷ ಆರ್‌.ಎಸ್‌.ನಾಯ್ಕ ಮಾತನಾಡಿ, ಸಮಾಜದ ಯುವಕರು ಸೇರಿ ಪ್ರತಿ ವರ್ಷ ಇಂತಹ ಮಾದರಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಸಂತಸ ತಂದಿದೆ. ಇದು ಮಾದರಿ ಸಂಘಟನೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಅತಿಥಿಗಳಾಗಿದ್ದ ದಾಂಡೇಲಿ ಪ್ರೆಸ್‌ ಕ್ಲಬ್‌ನ ಅಧ್ಯಕ್ಷ ಬಿ.ಎನ್‌.ವಾಸರೆ ಮಾತನಾಡಿ, ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಸಮಾಜ ಯಾವುದೇ ಇರಲಿ. ಆ ಸಮಾಜ ತನ್ನ ನಿಜ ಸಂಸ್ಕೃತಿಯನ್ನು ಉಳಿಸಿಕೊಳ್ಳುವ, ಮುಂದಿನ ತಲೆಮಾರಿಗೆ ಅದನ್ನು ತಿಳಿಸಿಕೊಡುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ನವಚೇತನ ಸಂಘಟನೆ ಮಾಡುತ್ತಿರುವುದು ಶ್ಲಾಘನಾರ್ಹ. ನಾವು ಜಾತಿ ಪ್ರತಿನಿಧಿಗಳಾಗುವುದಕ್ಕಿಂತ ಸಮುದಾಯದ ಪ್ರತಿನಿಧಿಯಾಗಿ ಮನುಷ್ಯ ಪ್ರೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದೇ ನಿಜವಾದ ಜೀವನ ಎಂದರು.

ಅತಿಥಿಗಳಾಗಿದ್ದ ನಗರಸಭಾ ಸದಸ್ಯ ಮೋಹನ ಹಲವಾಯಿ ಮಿನಿ ಇಂಡಿಯಾದಂತಿರುವ ದಾಂಡೇಲಿಯಲ್ಲಿ ಹಲವು ಜಾತಿ ಧರ್ಮದವರು ಸಹಬಾಳ್ವೆಯಿಂದ ಇದ್ದಾರೆ. ಅಂತಹ ಸಹಬಾಳ್ವೆಯ ಕೆಲಸವನ್ನು ನವಚೇತನ ಸಂಘಟನೆ ಮಾಡುತ್ತಿದೆ ಎಂದರು. ಮಹಾದೇವ ಹವ್ಯಾಸಿ ಯಕ್ಷ ಗಾನ ಮಂಡಳಿ ಅಧ್ಯಕ್ಷ ಸುರೇಶ ಸಿ. ನಾಯ್ಕ ಮಾತನಾಡಿದರು.

ಅಧ್ಯಕ್ಷ ತೆ ವಹಿಸಿದ್ದ ನವಚೇತನ ಕೋಮಾರಪಂತ ಸ್ವ ಸಹಾಯ ಸಂಘದ ಸಂಸ್ಥಾಪಕ ಅಧ್ಯಕ್ಷ , ಹುಬ್ಬಳ್ಳಿಯ ಫಾಚ್ರ್ಯೂನ್‌ ಪ್ರಾಪರ್ಟೀಸ್‌ನ ಮಾಲಿಕ ಪ್ರಶಾಂತ ಎಸ್‌. ನಾಯಕ ಮಾತನಾಡಿ, ನವಚೇತನ ಸಂಸ್ಥೆಯು ಸಮಾಜ ಸೇವೆಗಾಗಿಯೇ ಸ್ಥಾಪನೆಗೊಂಡಿದ್ದು, ನಾವು ನಮ್ಮ ನಾಡಿನ ಎಲ್ಲರೊಂದಿಗೆ ಬೆರೆಯಲು ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿದ ಗಣ್ಯರನ್ನು ನಮ್ಮ ವೇದಿಕೆಗೆ ಕರೆತರುವ ವಿಚಾರ ಹೊಂದಿದ್ದೇವೆ ಎಂದರು.

ಪ್ರಮುಖರಾದ ಶಿವಾನಂದ ಎಸ್‌. ನಾಯ್ಕ, ಗಜಾನನ ಎನ್‌. ನಾಯ್ಕ, ಪ್ರಕಾಶ ಪಿ. ನಾಯ್ಕ, ಅಶೋಕ ಎಸ್‌. ನಾಯ್ಕ, ಆನಂದ ಟಿ. ನಾಯ್ಕ, ಅಕ್ಷ ಯ ಡಿ. ನಾಯ್ಕ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸನ್ಮಾನ: ನವಚೇತನ ಸಂಘಟನೆಯ ವಾರ್ಷಿಕೋತ್ಸವದಲ್ಲಿ ಹಿರಿಯರಾದ ಶಿವಾನಂದ ಎಸ್‌.ನಾಯ್ಕ ಹಾಗೂ ದಾಮೋದರ ಪಿ ನಾಯ್ಕ ದಂಪತಿಗಳನ್ನು, ಕೋಮಾರಪಂತ ಕೇಂದ್ರ ಸಮಿತಿ ಅಧ್ಯಕ್ಷ ಆರ್‌.ಎಸ್‌.ನಾಯ್ಕ, ಪತ್ರಕರ್ತ ಬಿ.ಎನ್‌.ವಾಸರೆ, ನಗರಸಭಾ ಸದಸ್ಯ ಮೋಹನ ಹಲವಾಯಿ, ಸುರೇಶ ಸಿ. ನಾಯ್ಕ, ಮಂಜುಳಾ ಸಿ. ನಾಯ್ಕರನ್ನು ಸನ್ಮಾನಿಸಿದರು. ಕಿಡ್ಸ್‌ ಇಂಟ್ರ್ಯಾಕ್ಟ್ ಕ್ಲಬ್‌ನ ಪ್ರತಿಭೆಗಳಿಗೆ ಬಹುಮಾನ ನೀಡಿ ಪುರಸ್ಕರಿಸಿದರು.

ಗುರುವಂದನಾ ಕಾರ್ಯಕ್ರಮವನ್ನು ಮಂಜುನಾಥ ಪಿ ಕಳಸ ನಡೆಸಿಕೊಟ್ಟರು. ದಿವ್ಯಾ ನಾಯ್ಕ ಪ್ರಾರ್ಥಿಸಿದರು. ಅಂಕಿತಾ ಎಸ್‌. ನಾಯ್ಕ ಸ್ವಾಗತಿಸಿದರು. ಪೂರ್ವಿ ನಾಯ್ಕ ಪರಿಚಯಿಸಿದರು. ಪ್ರಶಾಂತ ಬಿ. ನಾಯ್ಕ ವಂದಿಸಿದರು. ಚೇತನ ಜಿ. ನಾಯ್ಕ ನಿರೂಪಿಸಿದರು. ಕಿಡ್ಸ್‌ ಇಂಟ್ರ್ಯಾಕ್ಟ ಕ್ಲಬ್‌ನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ