ಆ್ಯಪ್ನಗರ

ಬೇಕಿರುವುದು 12 ಉಪನ್ಯಾಸಕರು, ಇರುವುದು 8 ಜನ

ಸಿದ್ದಾಪುರ : ಪಟ್ಟಣದ ಸೊರಬಾ ರಸ್ತೆಯ ಹಾಳದಕಟ್ಟಾದಲ್ಲಿರುವ ಪದವಿ ಪೂರ್ವ ಕಾಲೇಜ್‌ಗೆ ಕಂಪೌಂಡ್‌ ಇಲ್ಲ, ಉಪನ್ಯಾಸಕರಿಲ್ಲ, ಪ್ರಯೋಗಾಲಯವಿಲ್ಲ. ಈ ಎಲ್ಲಇಲ್ಲಗಳ ಮಧ್ಯೆಯೂ ಕಾಲೇಜ್‌ ಉತ್ತಮ ಫಲಿತಾಂಶವನ್ನು ಪಡೆಯುತ್ತ ಗ್ರಾಮೀಣ ಮಕ್ಕಳಿಗೆ ಆಸರೆಯಾಗಿದೆ.

Vijaya Karnataka 29 Sep 2019, 5:00 am
ಸಿದ್ದಾಪುರ : ಪಟ್ಟಣದ ಸೊರಬಾ ರಸ್ತೆಯ ಹಾಳದಕಟ್ಟಾದಲ್ಲಿರುವ ಪದವಿ ಪೂರ್ವ ಕಾಲೇಜ್‌ಗೆ ಕಂಪೌಂಡ್‌ ಇಲ್ಲ, ಉಪನ್ಯಾಸಕರಿಲ್ಲ, ಪ್ರಯೋಗಾಲಯವಿಲ್ಲ. ಈ ಎಲ್ಲಇಲ್ಲಗಳ ಮಧ್ಯೆಯೂ ಕಾಲೇಜ್‌ ಉತ್ತಮ ಫಲಿತಾಂಶವನ್ನು ಪಡೆಯುತ್ತ ಗ್ರಾಮೀಣ ಮಕ್ಕಳಿಗೆ ಆಸರೆಯಾಗಿದೆ.
Vijaya Karnataka Web need 12 lecturers 8 people
ಬೇಕಿರುವುದು 12 ಉಪನ್ಯಾಸಕರು, ಇರುವುದು 8 ಜನ


2007ರಲ್ಲಿಸರಕಾರಿ ಪ್ರೌಢಶಾಲೆಯ ಕಟ್ಟಡದಲ್ಲಿಆರಂಭವಾದ ಈ ಕಾಲೇಜಿಗೆ 2010-11ರ ಸಾಲಿನಲ್ಲಿಸ್ವಂತ ಕಟ್ಟಡ ನಿರ್ಮಾಣವಾಯಿತು. ಉತ್ತಮ ಪ್ರಾಚಾರ್ಯರು, ಉಪನ್ಯಾಸಕರೂ ದೊರೆತಿದ್ದರಿಂದ ಪಿಯುಸಿಯಲ್ಲಿಉತ್ತಮ ಫಲಿತಾಂಶವನ್ನು ಪಡೆಯುತ್ತ ಬಂದಿದೆ. ಇಲ್ಲಿಕಲೆ, ವಿಜ್ಞಾನ, ವಾಣಿಜ್ಯ ಶಾಸ್ತ್ರಗಳನ್ನು ಕಲಿಸಲಾಗುತ್ತಿದ್ದು, ಕನ್ನಡ, ಸಂಸ್ಕೃತ, ಇತಿಹಾಸ, ವ್ಯವಹಾರ ಅಧ್ಯಯನ ವಿಷಯಗಳಿಗೆ ಉಪನ್ಯಾಸಕರು ಇಲ್ಲ.

ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳ ನಂತರ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇಲ್ಲಿದ್ವಿತೀಯ ದರ್ಜೆ ಗುಮಾಸ್ತ ಹಾಗೂ ಡಿ ಗ್ರೂಪ್‌ ಹುದ್ದೆ ಇದ್ದರೂ, ಇಲ್ಲಿಯ ವರೆಗೆ ನೇಮಕ ಮಾಡಿಲ್ಲ. ಉಪನ್ಯಾಸಕರೇ ಈ ಕೆಲಸವನ್ನು ಮಾಡಬೇಕಾಗಿದೆ. ಒಟ್ಟು 12 ಉಪನ್ಯಾಸಕರ ಹುದ್ದೆ ಇದ್ದು, ಕೇವಲ 8 ಜನ ಉಪನ್ಯಾಸಕರಿದ್ದಾರೆ. 4 ಜನರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ.

299 ವಿದ್ಯಾರ್ಥಿಗಳು ಇದ್ದು, ಹೆಣ್ಣುಮಕ್ಕಳಿಗೊಂದು, ಗಂಡು ಮಕ್ಕಳಿಗೊಂದು ಶೌಚಾಲಯವಿದೆ. ಹೆಚ್ಚುವರಿ ಬೇಕು ಎಂದಾದರೆ ಪಕ್ಕದಲ್ಲಿರುವ ಗೇರುತೋಪಿಗೆ ಹೋಗಬೇಕು. 9 ಬೋಧನಾ ಕೊಠಡಿಗಳಿದ್ದು ಹೆಚ್ಚುವರಿ ಕೊಠಡಿಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಾಲೇಜಿಗೆ ಕಂಪೌಂಡ ಇಲ್ಲ. ಇದರಿಂದ ನಾಯಿಗಳು, ದನ-ಕರುಗಳು ಆವರಣದೊಳಗೆ ಬರುತ್ತಲೇ ಇರುತ್ತವೆ.

ವಿಜ್ಞಾನ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಶ್ಯವಿರುವಷ್ಟು ಮಾತ್ರ ಪ್ರಯೋಗಾಲಯ ವಿಷಯವನ್ನು ಕಲಿಸಲಾಗುತ್ತದೆ. ಕಾರಣ ಇಲ್ಲಿವ್ಯವಸ್ಥಿತ ಪ್ರಯೋಗಾಲಯವಿಲ್ಲ. ಸರಕಾರ ಕೇವಲ ಕಟ್ಟಡ ಕಾಮಗಾರಿಗೆ ಆದ್ಯತೆ ನೀಡುತ್ತಿದೆ. ಉಳಿದ ಮೂಲಭೂತ ಸೌಲಭ್ಯಗಳನ್ನೂ ನೀಡಿದರೆ ಮಾತ್ರ ಇಂತಹ ಕಾಲೇಜ್‌ಗಳಲ್ಲಿಓದುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ