ಆ್ಯಪ್ನಗರ

ಮಂಗನಖಾಯಿಲೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂ

ಸಿದ್ದಾಪುರ : ಕಳೆದ ವರ್ಷ ತಾಲೂಕಿನ 62 ಜನರಲ್ಲಿ ಶಂಕಿತ ಮಂಗನಕಾಯಿಲೆ ಕಾಣಿಸಿಕೊಂಡಿದ್ದು ಎರಡು ಜನರು ಮೃತಪಟ್ಟಿದ್ದಾರೆ. ಈ ಬಾರಿ ಬೇಸಿಗೆ ಪ್ರಾರಂಭವಾಗುವ ಮೊದಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷಿತ್ರ್ಮೕಕಾಂತ ನಾಯ್ಕ ಹೇಳಿದರು.

Vijaya Karnataka 18 Oct 2019, 5:00 am
ಸಿದ್ದಾಪುರ : ಕಳೆದ ವರ್ಷ ತಾಲೂಕಿನ 62 ಜನರಲ್ಲಿ ಶಂಕಿತ ಮಂಗನಕಾಯಿಲೆ ಕಾಣಿಸಿಕೊಂಡಿದ್ದು ಎರಡು ಜನರು ಮೃತಪಟ್ಟಿದ್ದಾರೆ. ಈ ಬಾರಿ ಬೇಸಿಗೆ ಪ್ರಾರಂಭವಾಗುವ ಮೊದಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷಿತ್ರ್ಮೕಕಾಂತ ನಾಯ್ಕ ಹೇಳಿದರು.
Vijaya Karnataka Web 17SDPR-2_24


ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿತಹಸೀಲ್ದಾರ್‌ ಮಂಜುಳಾ ಭಜಂತ್ರಿ ಅಧ್ಯಕ್ಷತೆಯಲ್ಲಿನಡೆದ ಮಂಗನಕಾಯಿಲೆ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಕಾರ್ಯಪಡೆಯ ಸಭೆಯಲ್ಲಿಅವರು ಮಾತನಾಡಿದರು.

ಮಂಗನಕಾಯಿಲೆ ವೈರಸ್‌ನಿಂದ ಬರುತ್ತದೆ. ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣಕ್ಕೆ ಅವಶ್ಯವಿರುವ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ರೋಗ ಬರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಮನೆಯ ಸುತ್ತಲಿನ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಜಾನುವಾರು ಕಾಡಿಗೆ ಹೋಗಿ ಬರುವುದರಿಂದ ಉಣ್ಣೆಗಳು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಾನುವಾರುಗಳಿಗೆ ಔಷಧ ಸಿಂಪಡಿಸಬೇಕು. ಕೊಟ್ಟಿಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲಾಖೆಯಿಂದ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಈಗಾಗಲೇ ಒಂದು ಮತ್ತು ಎರಡು ಲಸಿಕೆ ತೆಗೆದುಕೊಂಡವರು ಈಗ ಬೂಸ್ಟರ್‌ ಡೋಸ್‌ ಪಡೆದುಕೊಳ್ಳಬೇಕು. ಇದರಿಂದ ಶೇ.90ರಷ್ಟು ಮಂಗನ ಕಾಯಿಲೆಯನ್ನು ತಡೆಗಟ್ಟಬಹುದು ಎಂದು ಹೇಳಿದರು.

ಈಗಾಗಲೇ ಮುಗುದೂರು,ಕಂಚಿಕೈ,ಹಾಲದಕಟ್ಟಾ,ಇಟಗಿ,ನರಮುಂಡಿಗೆ ಹಳ್ಳಿಗಳಲ್ಲಿಮಂಗಗಳು ಸತ್ತಿರುವ ವರದಿ ಬಂದಿದೆ. ಆದರೆ ಕಾಯಿಲೆ ಲಕ್ಷಣವಿರುವುದು ಕಂಡುಬಂದಿಲ್ಲ. ಆರೋಗ್ಯ ಇಲಾಖೆ ಜನರಿಗೆ ಕಾಯಿಲೆ ಕುರಿತು ಮಾಹಿತಿ ಹಾಗೂ ಲಸಿಕೆ ನೀಡುತ್ತದೆ. ಪಶುಸಂಗೋಪನಾ ಇಲಾಖೆ ಸತ್ತಿರುವ ಮಂಗಗಳ ಪೋಸ್ಟ್‌ಮಾರ್ಟ್‌ಂ ಮಾಡಬೇಕಾಗುತ್ತದೆ. ಅರಣ್ಯ ಇಲಾಖೆಯವರು ಮಂಗ ಸತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅದರ ವಿಲೇವಾರಿ ಮಾಡುವ ಜವಾಬ್ದಾರಿ ಹೊರಬೇಕು. ತಾಲೂಕಿನಲ್ಲಿಎರಡು ಡೆಂಗೆ ಪ್ರಕರಣ ಹಾಗೂ ಒಂದು ಇಲಿಜ್ವರದ ಪ್ರಕರಣ ಕಂಡುಬಂದಿದೆ. ಇದರ ಹೊರತು ಬೇರೆ ಯಾವುದೇ ಸಾಂಕ್ರಾಮಿಕ ರೋಗಗಳು ಕಂಡುಬಂದಿಲ್ಲಎಂದು ಹೇಳಿದರು.

ಸಭೆಯಲ್ಲಿತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರಾವ್‌,ದೈಹಿಕ ಶಿಕ್ಷಣ ಪರಿವೀಕ್ಷಕ ಕಮಲಾಕರ ನಾಯಕ,ಸಿಡಿಪಿಒ ಸುಶೀಲಾ ಮೊಗೆರ ಮುಂತಾದವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ