ಆ್ಯಪ್ನಗರ

ನಾಣಿಕಟ್ಟಾ ಕಾಲೇಜಿನಲ್ಲಿಪೋಷಣ ಅಭಿಯಾನ

ಸಿದ್ದಾಪುರ : ತಾಲೂಕಿನ ನಾಣಿಕಟ್ಟಾ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಗುರುವಾರ ಪೋಷಣ ಅಭಿಯಾನವನ್ನು ಏರ್ಪಡಿಸಲಾಗಿತ್ತು.

Vijaya Karnataka 23 Sep 2019, 5:00 am
ಸಿದ್ದಾಪುರ : ತಾಲೂಕಿನ ನಾಣಿಕಟ್ಟಾ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಗುರುವಾರ ಪೋಷಣ ಅಭಿಯಾನವನ್ನು ಏರ್ಪಡಿಸಲಾಗಿತ್ತು.
Vijaya Karnataka Web 340421SDPR2_24


ಕಾನಸೂರ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ಸಾವಿತ್ರಿ ಬಿರಾದಾರ ಮಾತನಾಡಿ, ಇಂದಿನ ದಿನಗಳಲ್ಲಿನಮ್ಮ ಆರೋಗ್ಯ ಹದಗೆಡುತ್ತಿರುವುದಕ್ಕೆ ಆಹಾರವೂ ಕಾರಣವಾಗಿದೆ. ನಮ್ಮ ಆಹಾರ ಪದ್ಧತಿ ಸರಿಯಾಗಿಲ್ಲದ ಕಾರಣ ವಿದ್ಯಾರ್ಥಿಗಳಲ್ಲಿಯುವಕರಲ್ಲಿಅನಾರೋಗ್ಯ ಕಾಣಿಸುತ್ತಿದೆ. ಅಧಿಕ ಪ್ರೊಟೀನ್‌ಯುಕ್ತ ಆಹಾರ ಸೇವನೆ ಬೆಳೆಯುವ ಮಕ್ಕಳಿಗೆ ಅವಶ್ಯಕವಾಗಿದ್ದು, ಮೊಳಕೆ ಬರಿಸಿರುವ ಕಾಳುಗಳ ಸೇವನೆ ಮಾಡಬೇಕು. ಬಹುಪಾಲು ಹೆಣ್ಣುಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದು, ಹಸಿರು ಸೊಪ್ಪು, ಕಾಯಿಪಲ್ಲೆಸೇವಿಸಿ ರಕ್ತಹೀನತೆಯನ್ನು ನಿವಾರಿಸಿಕೊಳ್ಳಬಹುದು. ಸೆ.25ರಂದು ಜಂತುಹುಳು ನಿವಾರಣ ದಿನವಾಗಿದ್ದು, ಆ ದಿನ ಎಲ್ಲರೂ ಜಂತುಮಾತ್ರೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಸ್ವಚ್ಛತೆಯ ಕಡೆಗೆ ವಿಶೇಷ ಗಮನ ನೀಡುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.

ಆರೋಗ್ಯದ ರಕ್ಷಣಾ ಪದ್ಧತಿ ಹಾಗೂ ಓಆರ್‌ಎಸ್‌ ತಯಾರಿಸುವ ಕುರಿತು ಸಮಗ್ರ ಮಾಹಿತಿಯನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಕೆ.ನಾಯ್ಕ ಮಾತನಾಡಿ, ನಾವು ವಸ್ತ್ರಕ್ಕೆ ಕೊಡುವ ಮಹತ್ವವನ್ನು ಆಹಾರಕ್ಕೆ ಕೊಡುತ್ತಿಲ್ಲ. ಇದು ಬದಲಾಗಬೇಕು. ನಮ್ಮ ಆರೋಗ್ಯಕ್ಕೆ ನಾವು ಸೇವಿಸುವ ಆಹಾರ ಮುಖ್ಯ. ಸಮಯಕ್ಕೆ ಸರಿಯಾಗಿ ಹಸಿವಾದಾಗ ಆಹಾರ ಸೇಸಿದರೆ ರೋಗದಿಂದ ದೂರವಿರಬಹುದು ಎಂದು ಹೇಳಿದರು. ಉಪನ್ಯಾಸಕ ಎಂ.ಐ.ಹೆಗಡೆ ಸ್ವಾಗತಿಸಿ ನಿರೂಪಿಸಿದರು. ನಾಗವೇಣಿ ನಾಯ್ಕ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ