Please enable javascript.ಒಡ್ಡೋಲಗ ಹಿತ್ಲಕೈ ಗಣಪತಿ ಹೆಗಡೆಗೆ ನಾಟಕ ಅಕಾಡೆಮಿ ಪ್ರಶಸ್ತಿ - oddolaga hithlakai ganapathi hegade drama academy award - Vijay Karnataka

ಒಡ್ಡೋಲಗ ಹಿತ್ಲಕೈ ಗಣಪತಿ ಹೆಗಡೆಗೆ ನಾಟಕ ಅಕಾಡೆಮಿ ಪ್ರಶಸ್ತಿ

Vijaya Karnataka 6 Jan 2020, 5:00 am
Subscribe

ಸಿದ್ದಾಪುರ : ದಿಲ್ಲಿ, ಉದಯಪುರ, ಮುಂಬಯಿ, ಜೈಪುರ ಮುಂತಾದೆಡೆ ಗೊಂಬೆ ನಾಟಕ ಪ್ರದರ್ಶನ -ಕಿರುತೆರೆಯ ಹಲವು ಧಾರಾವಾಹಿಗಳಲ್ಲಿನಟನೆ

oddolaga hithlakai ganapathi hegade drama academy award
ಒಡ್ಡೋಲಗ ಹಿತ್ಲಕೈ ಗಣಪತಿ ಹೆಗಡೆಗೆ ನಾಟಕ ಅಕಾಡೆಮಿ ಪ್ರಶಸ್ತಿ
ಸಿದ್ದಾಪುರ : ದಿಲ್ಲಿ, ಉದಯಪುರ, ಮುಂಬಯಿ, ಜೈಪುರ ಮುಂತಾದೆಡೆ ಗೊಂಬೆ ನಾಟಕ ಪ್ರದರ್ಶನ -ಕಿರುತೆರೆಯ ಹಲವು ಧಾರಾವಾಹಿಗಳಲ್ಲಿನಟನೆ

ತಾಲೂಕಿನ ಹಿತ್ಲಕೈನ ಒಡ್ಡೋಲಗ ಸಂಸ್ಥೆಯ ಗಣಪತಿ ಹೆಗಡೆಯವರಿಗೆ 2019-20ರ ಸಾಲಿನ ನಾಟಕ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ ಘೋಷಿಸಲಾಗಿದೆ. ಒಟ್ಟು 15 ಸಾಧಕರಿಗೆ ಜೀವಮಾನ ಪ್ರಶಸ್ತಿ ದೊರೆತಿದ್ದು, ಇದರಲ್ಲಿಗಣಪತಿ ಹೆಗಡೆಯವರೂ ಒಬ್ಬರು.

1989-90ರ ಸಾಲಿನಲ್ಲಿಹೆಗ್ಗೋಡಿನ ನಿನಾಸಂ ರಂಗ ಶಿಕ್ಷಣದಲ್ಲಿನಟನೆ, ರಂಗಸಿದ್ಧತೆ, ಬೆಳಕು, ವಸ್ತ್ರವಿನ್ಯಾಸ, ನಿರ್ದೇಶನ ಮುಂತಾದ ವಿಷಯಗಳಲ್ಲಿಅಧ್ಯಯನ ಹಾಗೂ ಪ್ರಾಯೋಗಿಕ ಅನುಭವ ಪಡದಿದ್ದಾರೆ. ಸತತ ಆರು ವರ್ಷಗಳ ಕಾಲ ನೀನಾಸಂ ತಿರುಗಾಟದ ಕಲಾವಿದರಾಗಿ ಪ್ರಮುಖ ಪಾತ್ರಗಳಲ್ಲಿಅಭಿನಯಿಸಿದ್ದಾರೆ. ನಾಡಿನ ಅನೇಕ ಹವ್ಯಾಸಿ ತಂಡಗಳಿಗೆ ನಾಟಕ ನಿರ್ದೇಶಿಸಿದಲ್ಲದೇ ಹಾಗೂ ಮಕ್ಕಳಿಗೆ ರಂಗ ತರಬೇತಿ ನೀಡಿರುವುದಲ್ಲದೆ ಚಿತ್ರದುರ್ಗ ನಾಟಕ ಶಾಲೆಯಲ್ಲಿಅಭಿನಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಕುಂದಾಪುರ ನಮ್ಮ ಭೂಮಿಯಲ್ಲಿದುಡಿಯುವ ಮಕ್ಕಳಿಗೆ ನಾಟಕ ಶಿಬಿರ ಹಾಗೂ ಯಕ್ಷಗಾನ ಶಿಬಿರ ನಡೆಸಿ ಎರಡು ವರ್ಷಗಳ ಕಾಲ ದುಡಿಯುವ ಮಕ್ಕಳ ರಂಗಭೂಮಿಗೆ ಹೊಸ ಆಯಾಮ ನೀಡಿರುವುದು. ದಿಲ್ಲಿ, ಉದಯಪುರ, ಮುಂಬಯಿ, ಜೈಪುರ ಮುಂತಾದೆಡೆ ಗೊಂಬೆ ನಾಟಕ ಪ್ರದರ್ಶನ ನೀಡಿರುವುದು. ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯ 'ಭಾರತ್‌ ರಂಗಮಹೋತ್ಸವ'ದಲ್ಲಿಎರಡನೇ ಬಾರಿ ಗೋಕುಲ ನಿರ್ಗಮನ ಪ್ರದರ್ಶನಗೊಂಡು ಅದರಲ್ಲಿಕೃಷ್ಣನ ಪಾತ್ರ ನಿರ್ವಹಣೆ ಮಾಡಿದ್ದಾರೆ.

1998-99ರಲ್ಲಿತಾಲೂಕಿನ ಹಿತ್ಲಕೈಯಲ್ಲಿಹುಟ್ಟೂರಿನ ರಂಗಾಭಿವೃದ್ಧಿಗಾಗಿ ಒಡ್ಡೋಲಗ ಸಂಘ ಸ್ಥಾಪಿಸಿದ್ದಾರೆ. ಒಡ್ಡೋಲಗ ರಂಗಪರ್ಯಟನ, ಶ್ರಾವಣ ಸಂಜೆ ಸಂಸ್ಕೃತಿ ಉತ್ಸವ ಹಾಗೂ ಪ್ರತಿವರ್ಷ ಏಪ್ರಿಲ್‌ನಲ್ಲಿಮಕ್ಕಳಿಗೆ ರಂಗ ತರಬೇತಿ ಶಿಬಿರ-ರಂಗಗೋಷ್ಠಿ, ನಾಟ್ಯಗೋಷ್ಠಿ, ಶತಮಾನ ಸಂಭ್ರಮ ಹಾಗೂ ನಾಟಕೋತ್ಸವ ಮುಂತಾದ ಕಾರ್ಯಕ್ರಮಗಳನ್ನು ಈ ಸಂಸ್ಥೆಯ ಅಡಿಯಲ್ಲಿನಡೆಸುತ್ತಿದ್ದಾರೆ.

ಕಿರುತೆರೆಯಲ್ಲಿಖ್ಯಾತ ನಿರ್ದೇಶಕರಾದ ಗಿರೀಶ್‌ ಕಾಸರವಳ್ಳಿಯವರ ಗೃಹಭಂಗ ಧಾರಾವಾಹಿಯಲ್ಲಿಅಪ್ಪಣ್ಣನ ಪಾತ್ರ, ಆರ್‌.ನಾಗೇಶ ನಿರ್ದೇಶನದ ಸರಸಮ್ಮನ ಸಮಾಧಿಯಲ್ಲಿಹಿರಣ್ಣಯ್ಯನಾಗಿ, ನಟರಾಜ ಏಣಗಿ ನಿರ್ದೇಶನದ 'ಎಂಥ ಲೋಕವಯ್ಯ'ದಲ್ಲಿಝೇಂಕಾರಿಯಾಗಿ ಇನ್ನೂ ಅನೇಕ ಧಾರಾವಾಹಿಗಳಲ್ಲಿನಟಿಸಿದ್ದಾರೆ. ಈ ಟಿವಿಯ ನಮ್ಮೂರ ಸವಿರುಚಿ ಕಾರ್ಯಕ್ರಮದ ನಿರೂಪಕರಾಗಿ ಭಾಗವಹಿಸಿದ್ದಾರೆ.

ಇಂತಹ ರಂಗ ಸಾಧಕನಿಗೆ ಈಗ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿರುವುದು ರಂಗಾಸಕ್ತರಿಗೆ ಹರುಷ ತಂದಿದೆ.


ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ