ಆ್ಯಪ್ನಗರ

ಉದ್ಧವ ಠಾಕ್ರೆ ಹೇಳಿಕೆಗೆ ವಿರೋಧ

ಹಳಿಯಾಳ : ಹಳಿಯಾಳ : ಇಲ್ಲಿಯ ಕರ್ನಾಟಕ ನವ ನಿರ್ಮಾಣ ಸೇನೆ ಘಟಕದವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿಕೆಯನ್ನು ವಿರೋಧಿಸಿ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 26 Dec 2019, 5:00 am
ಹಳಿಯಾಳ : ಹಳಿಯಾಳ : ಇಲ್ಲಿಯ ಕರ್ನಾಟಕ ನವ ನಿರ್ಮಾಣ ಸೇನೆ ಘಟಕದವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿಕೆಯನ್ನು ವಿರೋಧಿಸಿ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web opposition to uddhava thackerays statement
ಉದ್ಧವ ಠಾಕ್ರೆ ಹೇಳಿಕೆಗೆ ವಿರೋಧ


ಮಹಾರಾಷ್ಟ್ರದ ಸಿಎಂ ಠಾಕ್ರೆ ಅವರು ಬೆಳಗಾವಿ, ಕಾರವಾರ ಜಿಲ್ಲೆಗಳ ಗಡಿಯನ್ನು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುವುದರ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ದ್ರೋಹಿ ಉದ್ಧವ ನಿಲುವನ್ನು ತ್ರೀವವಾಗಿ ಖಂಡಿಸುವುದರ ಮೂಲಕ ನೀಡಿದ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದಾರೆ. ಗಂಡು ಮೆಟ್ಟಿನ ನಾಡು ಬೆಳಗಾವಿ ಮತ್ತು ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿರುವ ಕಾರವಾರ ಕನ್ನಡದ ನೆಲಗಳು. ಇಲ್ಲಿಯ ಒಂದು ಹಿಡಿ ಮಣ್ಣನ್ನೂ ಮುಟ್ಟಲು ಕರ್ನಾಟಕ ನವ ನಿರ್ಮಾಣ ಸೇನೆ ಬಿಡುವುದಿಲ್ಲಎಂದರು.

ಮುಂದಿನ ದಿನಗಳಲ್ಲಿಇಂತಹ ಹೇಳಿಕೆ ನೀಡುವ ಮೊದಲು ನೂರಾರು ಬಾರಿ ಯೋಚಿಸುವಂತೆ ಮಾಡಲು ಸೇನೆಯು ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದೆ.

ಜಿಲ್ಲಾಧ್ಯಕ್ಷ ಶಿವಾನಂದ ಕಮ್ಮಾರ, ಧಾರವಾಡ ಜಿಲ್ಲಾಧ್ಯಕ್ಷ ಗಿರೀಶ್‌ ಪೂಜಾರ, ತಾಲೂಕಾಧ್ಯಕ್ಷ ಲಕ್ಷತ್ರ್ಮಣ ಘಾಡಿ ಮತ್ತು ದೇವೇಂದ್ರ ಶಿಂಧೆ, ವೆಂಕಟೇಶ್‌ ಮಿರಾಶಿ, ನಾಗರಾಜ ಕೊಡ್ಲಿಕೊಪ್ಪ, ದೇಮು ಮಿರಾಶಿ, ನಾಗರಾಜ ಗೌಡ, ಮಂಜುನಾಥ್‌ ಗೌಡ,ಸಂಜು ಪಾಟೀಲ್‌, ರಾಹುಲ್‌ ಮಾಚಕ ಮತ್ತು ದಯಾನಂದ ಗೌಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ