ಆ್ಯಪ್ನಗರ

ದಂಡ ಪಾವತಿಸಲು ನಗರಸಭೆಗೆ ಆದೇಶ

ಕಾರವಾರ : ಇಲ್ಲಿನ ಸಂತೆ ಮಾರುಕಟ್ಟೆ ಶುಲ್ಕ ವಸೂಲಿ ಗುತ್ತಿಗೆದಾರನಿಗೆ 2 ಲಕ್ಷ ರೂ. ಗೂ ಹೆಚ್ಚಿನ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಲು ನಗರಸಭೆಗೆ ನ್ಯಾಯಾಲಯ ಆದೇಶ ನೀಡಿದೆ. ನಗರದ ಮಾರುಕಟ್ಟೆಯ ಕರ ವಸೂಲಿಗೆ ಟೆಂಡರ್‌ ಪಡೆದ ದೀಪಕ್‌ ಕಳಸ ಎಂಬುವವರ ಟೆಂಡರ್‌ ಅವಧಿ ಮುಕ್ತಾಯದ ಬಳಿಕ ಠೇವಣಿ

Vijaya Karnataka 19 Feb 2019, 5:00 am
ಕಾರವಾರ : ಇಲ್ಲಿನ ಸಂತೆ ಮಾರುಕಟ್ಟೆ ಶುಲ್ಕ ವಸೂಲಿ ಗುತ್ತಿಗೆದಾರನಿಗೆ 2 ಲಕ್ಷ ರೂ. ಗೂ ಹೆಚ್ಚಿನ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಲು ನಗರಸಭೆಗೆ ನ್ಯಾಯಾಲಯ ಆದೇಶ ನೀಡಿದೆ. ನಗರದ ಮಾರುಕಟ್ಟೆಯ ಕರ ವಸೂಲಿಗೆ ಟೆಂಡರ್‌ ಪಡೆದ ದೀಪಕ್‌ ಕಳಸ ಎಂಬುವವರ ಟೆಂಡರ್‌ ಅವಧಿ ಮುಕ್ತಾಯದ ಬಳಿಕ ಠೇವಣಿ ಹಣವನ್ನು ನಗರಸಭೆ ವಾಪಸ್‌ ಮಾಡಬೇಕಿತ್ತು. ಆದರೆ ನಗರಸಭೆ ಹಣ ಮರಳಿಸದ ಕಾರಣ ಗುತ್ತಿಗೆದಾರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಗುತ್ತಿಗೆ ಮೊತ್ತ 14,68,000 ರೂ. ಅದಕ್ಕೆ 15 ತಿಂಗಳ ಅವಧಿಯ ಶೇ. 12 ಬಡ್ಡಿ 2,26,354 ರೂ. ಬಡ್ಡಿ ಹಾಗೂ ನ್ಯಾಯಾಲಯದ ಶುಲ್ಕ 1,20,948 ರೂ. ಸೇರಿ. ಒಟ್ಟೂ 18,15,302 ರೂ. ವನ್ನು ದೀಪಕ್‌ ಅವರಿಗೆ ಪಾವತಿಸಲು ನ್ಯಾಯಾಲಯ ಆದೇಶ ನೀಡಿದೆ.
Vijaya Karnataka Web order to municipality to pay penalties
ದಂಡ ಪಾವತಿಸಲು ನಗರಸಭೆಗೆ ಆದೇಶ


ಯಾವ ಗುತ್ತಿಗೆ ?

ನಗರದಲ್ಲಿರುವ ಗೂಡಂಗಡಿ ಹಾಗೂ ಹೂ ಹಣ್ಣು ತರಕಾರಿ ವ್ಯಾಪಾರಸ್ಥರು, ಸಂತೆ ಮಾರುಕಟ್ಟೆ ನಿತ್ಯ ಸ್ಥಳ ಬಾಡಿಗೆ ಹಣ ವಸೂಲಿ ಮಾಡಲು ನಗರಸ ಟೆಂಡರ್‌ ಈ ಹಿಂದೆ ಕರೆದಿತ್ತು. ಸಂದೇಶ ಎನ್ನುವವರು ಗರಿಷ್ಟ ಮೊತ್ತ ದಾಖಲಿಸಿ ಟೆಂಡರ್‌ ಪಡೆದಿದ್ದರು.

ಟೆಂಡರ್‌ ಮೊತ್ತದ ಶೇ. 50ರಷ್ಟನ್ನು ನಗರಸಭೆಗೆ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಅವಧಿ ಮೀರಿದರೂ ಸಂದೇಶ ಮುಂಗಡ ಹಣ ಪಾವತಿಸದ ಕಾರಣ ಅವರ ಟೆಂಡರ್‌ ಅನ್ನು ರದ್ದುಪಡಿಸಲಾಗಿತ್ತು. ಬಳಿಕ ಟೆಂಡರ್‌ನಲ್ಲಿ ಎರಡನೇ ಗರಿಷ್ಠ ಮೊತ್ತ ನಮೂದಿಸಿದ್ದ ದೀಪಕ ಕಳಸ ಅವರಿಗೆ ಟೆಂಡರ್‌ ನೀಡಲಾಗಿತ್ತು. ಬಳಿಕ ಈ ಟೆಂಡೆರ್‌ ಕೂಡ ರದ್ದುಪಡಿಸಲಾಯಿತು. ಆದರೆ ಅಷ್ಟರೊಳಗೆ ದೀಪಕ್‌ ಅವರು ಟೆಂಡರ್‌ ಮೊತ್ತದ ಶೇ. 50ರಷ್ಟು ಹಣವನ್ನು ಮುಂಗಡವಾಗಿ ನೀಡಿದ್ದರು. ಈ ಹಣವನ್ನು ನಗರಸಭೆ ದೀಪಕ್‌ ಅವರಿಗೆ ಮರುಪಾವತಿ ಮಾಡಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ