ಆ್ಯಪ್ನಗರ

ಪ.ಪೂ. ಕಾಲೇಜ್‌ ತಾಲೂಕು ಮಟ್ಟದ ಕ್ರೀಡಾಕೂಟ

ಗೋಕರ್ಣ: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಹಿರೇಗುತ್ತಿಯ ಸೆಕೆಂಡರಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿನಡೆಯಿತು.

Vijaya Karnataka 1 Sep 2019, 5:00 am
ಗೋಕರ್ಣ: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಹಿರೇಗುತ್ತಿಯ ಸೆಕೆಂಡರಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿನಡೆಯಿತು.
Vijaya Karnataka Web p o college taluk level sports
ಪ.ಪೂ. ಕಾಲೇಜ್‌ ತಾಲೂಕು ಮಟ್ಟದ ಕ್ರೀಡಾಕೂಟ


ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಕೆ. ಶೆಟ್ಟಿಯವರು, ಹಿರೇಗುತ್ತಿಯ ಈ ಊರು ದಾನಿಗಳ ಊರು, ಅಲ್ಲದೇ ಉತ್ತಮ ವಾತಾವರಣವಿರುವ ಈ ಕ್ರೀಡಾಂಗಣದಲ್ಲಿಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಹಿರೇಗುತ್ತಿ ಪ.ಪೂ. ಕಾಲೇಜು ಕೂಡಾ ಉತ್ತಮ ಸಂಘಟನೆಯನ್ನು ಮಾಡಿದೆ. ಪಠ್ಯದ ಜತೆಗೆ ಕ್ರೀಡೆಗಳು ಕೂಡಾ ವ್ಯಕ್ತಿತ್ವ ಬೆಳವಣಿಗೆಗೆ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದರು.

ಜಿ.ಪಂ. ಸದಸ್ಯ ಪ್ರದೀಪ ಡಿ. ನಾಯಕ ಮಾತನಾಡಿ, ತಮ್ಮಲ್ಲಿಅಡಗಿರುವ ಪ್ರತಿಭೆಯನ್ನು ಹೊರಹಾಕುವಲ್ಲಿಕ್ರೀಡೆಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸತತ ಪ್ರಯತ್ನದ ಮೂಲಕ ಯಶಸ್ಸು ಸಾಧ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿವಿದ್ಯಾರ್ಥಿಗಳು ಆಟೋಟಗಳಲ್ಲಿಭಾಗವಹಿಸಿ ಸಾಧಕರಾಗಬೇಕು ಎಂದರು.

ಇನ್ನೊಬ್ಬ ಅತಿಥಿ ಮಹಾತ್ಮ ಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೊನ್ನಪ್ಪ ಎನ್‌. ನಾಯಕ ಮಾತನಾಡಿ, ನಮ್ಮ ಊರಿನಲ್ಲಿನಡೆಯುವ ಕಾರ‍್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ. ತಾಲೂಕು ಮಟ್ಟದ ಕ್ರೀಡಾಕೂಟ ಹಿರೇಗುತ್ತಿಯಂತಹ ಗ್ರಾಮೀಣ ಭಾಗದಲ್ಲಿನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ವೇದಿಕೆಯ ಮೇಲೆ ಗ್ರಾ.ಪಂ. ಅಧ್ಯಕ್ಷ ಸಣ್ಣಪ್ಪ ನಾಯಕ, ಸೆಕೆಂಡರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ್‌, ಬ್ರಹ್ಮ ಜಟಕ ಯುವಕ ಸಂಘದ ಅಧ್ಯಕ್ಷÜ ರಾಜು ಗಾಂವಕರ್‌, ಆಶ್ರಯ ಪೌಂಢೇಶನ್‌ ಅಧ್ಯಕ್ಷ ರಾಜೀವ್‌ ಗಾಂವಕರ್‌, ಮತ್ತು ಕುಮಟಾ ತಾಲೂಕಿನ ಎಲ್ಲಪ್ರಾಚಾರ್ಯರು ಹಾಜರಿದ್ದರು. ಹಿರೇಗುತ್ತಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೇಮಾನಂದ ಗಾವಂಕರ್‌ ಸ್ವಾಗತಿಸಿದರು. ಉಪನ್ಯಾಸಕ ಅರುಣ ಹೆಗಡೆ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ