ಆ್ಯಪ್ನಗರ

ಚಿತ್ರಕಲೆ, ದೇಶಭಕ್ತಿ ಗೀತೆ ಸ್ಪರ್ಧೆ

ಕಾರವಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಬಾಲಭವನ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲೆ ಮತ್ತು ದೇಶಭಕ್ತಿ ಗೀತೆ ಸ್ಪರ್ಧಾ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಭವನದಲ್ಲಿಆಯೋಜಿಸಲಾಗಿತ್ತು.

Vijaya Karnataka 22 Sep 2019, 5:00 am
ಕಾರವಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಬಾಲಭವನ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲೆ ಮತ್ತು ದೇಶಭಕ್ತಿ ಗೀತೆ ಸ್ಪರ್ಧಾ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಭವನದಲ್ಲಿಆಯೋಜಿಸಲಾಗಿತ್ತು.
Vijaya Karnataka Web painting patriotic song contest
ಚಿತ್ರಕಲೆ, ದೇಶಭಕ್ತಿ ಗೀತೆ ಸ್ಪರ್ಧೆ


ಅತಿಥಿ ಜಿ.ಪಂ. ಸಿಇಒ ಎಂ.ರೋಷನ್‌ ಮಾತನಾಡಿ ಕಲಾ ಸ್ಪರ್ಧೆಗಳು ಮಕ್ಕಳ ವಿಶೇಷ ಕಲೆಗಳಿಗೆ ಪ್ರೋತ್ಸಾಹ ನೀಡುತ್ತವೆ. ಮಕ್ಕಳ ಬೆಳೆವಣಿಗೆಗೆ ಶಿಕ್ಷಕರ ಮತ್ತು ಪಾಲಕರ ಪಾತ್ರ ಪ್ರಮುಖ ಎಂದು ಹೇಳಿದರು.

ಕೈಗಾ ಯೋಜನಾಧಿಕಾರಿ ಸತ್ಯನಾರಾಯಣ ಮಾತನಾಡಿ, ಇಲ್ಲಿನ ಮಕ್ಕಳಿಗೆ ಕಲೆ, ಸಾಹಿತ್ಯದ ಬಗ್ಗೆ ತುಂಬಾ ಆಸಕ್ತಿ ಇರುವುದು ಕಂಡುಬರುತ್ತಿದೆ. ಕಾರಣ ಮುಂದೆ ಮಕ್ಕಳನ್ನು ಕಲಾವಿದರಾಗಿ ಬೆಳೆಸಿ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಉಪನಿರ್ದೇಶಕ ರಾಜೇಂದ್ರ ಬೈಕಲ್‌ ಮಾತನಾಡಿ, ಜಿಲ್ಲಾಬಾಲಭವನ ಸೊಸೈಟಿಯ ಮೂಲಕ ಮಕ್ಕಳಿಗಾಗಿ ಪ್ರತಿ ಭಾನುವಾರ, ಶನಿವಾರ ವಿವಿಧ ಕಾರ್ಯಕ್ರಮ, ತರಬೇತಿಗಳನ್ನು ನಡೆಸುತ್ತಿರುವ ಕುರಿತು ವಿವರಿಸಿದರು.

ಪ್ರತಿ ಸ್ಪರ್ಧೆಯಲ್ಲಿ3 ಗುಂಪಿನಂತೆ, ಅಂದರೆ 5ರಿಂದ 8 ವರ್ಷ, 9ರಿಂದ 12 ವರ್ಷ ಹಾಗೂ 13ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ