ಆ್ಯಪ್ನಗರ

ಪಂಚಗಾನ ಭವನ ಮುಚ್ಚಲಾಗುವುದು

ದಾಂಡೇಲಿ: ನಗರದ ಕರ್ನಾಟಕ ಸಂಘದ ಪಂಚಗಾನ ಭವನವನ್ನು ಅನಿರ್ದಿಷ್ಟ ಕಾಲದ ವರೆಗೆ ಮುಚ್ಚಲಾಗುವುದು ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ, ಉಪಾಧ್ಯಕ್ಷರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

Vijaya Karnataka 29 Sep 2019, 5:00 am
ದಾಂಡೇಲಿ: ನಗರದ ಕರ್ನಾಟಕ ಸಂಘದ ಪಂಚಗಾನ ಭವನವನ್ನು ಅನಿರ್ದಿಷ್ಟ ಕಾಲದ ವರೆಗೆ ಮುಚ್ಚಲಾಗುವುದು ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ, ಉಪಾಧ್ಯಕ್ಷರು ಪ್ರಕಟಣೆಯಲ್ಲಿತಿಳಿಸಿದ್ದಾರೆ.
Vijaya Karnataka Web panchgana bhawan will be closed
ಪಂಚಗಾನ ಭವನ ಮುಚ್ಚಲಾಗುವುದು


ದಾಂಡೇಲಿ ನಗರ ಸಮಗ್ರ ಅಭಿವೃದ್ಧಿ ಸಂಘಟನೆ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿಅವ್ಯವಹಾರ ನಡೆದಿದೆ ಎಂದು ಸಂಬಂಧ ಪಟ್ಟ ಸರಕಾರಿ ಇಲಾಖೆಗಳಿಗೆ ಲಿಖಿತವಾಗಿ ದೂರಿದ್ದು, ಈ ದೂರಿನ ಸತ್ಯಾಸತ್ಯತೆಗಳ ವಿಚಾರಣೆಗ ಬಂದ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿರುವ ಸಂಘಟನೆಯವರು, ಆ ಕುರಿತು ಯಾವ ದಾಖೆಗಳನ್ನೂ ಹಾಜರು ಪಡಿಸಿಲ್ಲ. ಅಧಿಕಾರಿಗಳ ನಿರ್ದೇಶನದಂತೆ ದಾಂಡೇಲಿ ಜನರಿಂದ ಹೊಸ 266 ಸದಸ್ಯ ಕರ್ನಾಟಕ ಸಂಘಕ್ಕೆ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗಿದೆ.

ಹೊಸದಾಗಿ ಸೇರ್ಪಡೆಗೊಂಡ ಸದಸ್ಯರ ಸಾಮಾನ್ಯ ಸಭೆಯನ್ನು ಮೂರು ಬಾರಿ ಕರೆದಾಗಲೂ ದಾಂಡೇಲಿ ನಗರ ಸಮಗ್ರ ಅಭಿವೃದ್ಧಿ ಸಂಘಟನೆ ವಿನಾಕಾರಣ ದೂರು ಸಲ್ಲಿಸಿ ಸಭೆಗಳನ್ನು ಮುಂದೂಡಿದ್ದಾರೆ. ಸದ್ಯ ನಿರ್ವಹಣೆ ಮಾಡುತ್ತಿರುವ ನಗರದ ವೆಸ್ಟ್‌ಕೋಸ್ಟ್‌ ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ಯುವ ಪಂಚಗಾನ ಭವನ ನಿರ್ವಹಣೆ ಕುರಿತು ಹಿಂಜರಿಕೆ ವ್ಯಕ್ತಪಡಿಸಿದ್ದಾರೆ. ಈ ಅನಿಶ್ಚಿತತೆಯನ್ನು ಗಮನಿಸಿ ಕರ್ನಾಟಕ ಸಂಘದ ಪಂಚಗಾನ ಭವನವನ್ನು ಅ.1ರಿಂದ ಸರಕಾರದ ಆದೇಶ ಬರುವವರೆಗೆ ಮುಚ್ಚಲಾಗುವುದು ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ಕೆ.ಜಿ.ಗಿರಿರಾಜ, ಉಪಾಧ್ಯಕ್ಷ ಡಾ.ಆರ್‌.ಜಿ.ಹೆಗಡೆ, ಖಜಾಂಚಿ ರಾಜಶೇಖರ ಕುಂಬಾರ ಲಿಖಿತವಾಗಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ