ಆ್ಯಪ್ನಗರ

ಪಪೂ ಕ್ರೀಡಾಕೂಟ: ರಾಜ್ಯಮಟ್ಟಕ್ಕೆ ಆಯ್ಕೆ

ಶಿರಸಿ: ಭಟ್ಕಳ ತಾಲೂಕಿನ ಶಿರಾಲಿಯಲ್ಲಿನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿಇಲ್ಲಿಯ ಶ್ರೀ ಮಾರಿಕಾಂಬಾ ಸರಕಾರಿ ಪದವಿಪೂರ್ವ ಕಾಲೇಜು ಕ್ರೀಡಾಪಟುಗಳು ವಿವಿಧ ಸ್ಫರ್ಧೆಗಳಲ್ಲಿಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Vijaya Karnataka 1 Oct 2019, 5:00 am
ಶಿರಸಿ: ಭಟ್ಕಳ ತಾಲೂಕಿನ ಶಿರಾಲಿಯಲ್ಲಿನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿಇಲ್ಲಿಯ ಶ್ರೀ ಮಾರಿಕಾಂಬಾ ಸರಕಾರಿ ಪದವಿಪೂರ್ವ ಕಾಲೇಜು ಕ್ರೀಡಾಪಟುಗಳು ವಿವಿಧ ಸ್ಫರ್ಧೆಗಳಲ್ಲಿಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Vijaya Karnataka Web papu games state level selection
ಪಪೂ ಕ್ರೀಡಾಕೂಟ: ರಾಜ್ಯಮಟ್ಟಕ್ಕೆ ಆಯ್ಕೆ


ಬಾಲಕಿಯರ ವಿಭಾಗದ ಗುಂಪು ಆಟಗಳಲ್ಲಿಖೋ-ಖೋ, ವಾಲಿಬಾಲ್‌, ಹಾಗೂ 4ಘಿಘಿ100 ರಿಲೇ, 4ಘಿಘಿ400 ರಿಲೇ ಪ್ರಥಮ ಸ್ಥಾನ ಟೆನಿಕ್ವಾಯಿಟ್‌ ದ್ವಿತೀಯ, ಬಾಲಕರ ವಿಭಾಗದಲ್ಲಿಟೇಬಲ್‌ ಟೆನ್ನಿಸ್‌, ಟೆನಿಕ್ವಾಯಿಟ್‌ನಲ್ಲಿ ಪ್ರಥಮ, ಖೋ ಖೋ, ವಾಲಿಬಾಲ್‌ನಲ್ಲಿದ್ವಿತೀಯ ಸ್ಥಾನ ಪಡೆದಿದ್ದಾರೆ.

ವೈಯಕ್ತಿಕ ಆಟಗಳಲ್ಲಿಬಾಲಕರಲ್ಲಿಪ್ರತಾಪ್‌ ಪೂಜಾರಿ ಚಕ್ರ ಎಸೆತ ಪ್ರಥಮ, ಸುದೀಪ್‌ ಪೂಜಾರಿ ಜಾವಲಿನ್‌ ದ್ವಿತೀಯ, ಶರತ್‌ ನಾಯ್ಕ 800 ಮೀ ದ್ವಿತೀಯ, ಬಾಲಕಿಯರಲ್ಲಿಚೈತ್ರ ಶಿರಸಿಕರ್‌ 100ಮೀ, ಸಹನಾ ಮೋಗೇರ 200ಮೀ, ಪ್ರಿಯಾಂಕ ಹೆಗಡೆ 110 ಮೀ ಹರ್ಡಲ್ಸ್‌ ನಲ್ಲಿದ್ವಿತೀಯ, ಚೈತ್ರ ಶಿರಸಿಕರ್‌ ತ್ರಿಪಲ್‌ ಜಂಪ್‌ ನಲ್ಲಿ, ಗುಡ್ಡಗಾಡು ಓಟದಲ್ಲಿಹರ್ಷಿತಾ ನಾಯ್ಕ ತೃತೀಯ, ಪೂಜಾ ವಡ್ಡರ ಐದನೇ ಸ್ಥಾನ ಪಡೆದರು.

ಚೆಸ್‌ ಪಂದ್ಯದಲ್ಲಿಗಾಯತ್ರಿ ಹೆಗಡೆ ಹಾಗೂ ಪ್ರತಿಭಾ ಹೆಗಡೆ, ಟೆನಿಕ್ವಾಯಿಟ್‌ನಲ್ಲಿವಿದ್ಯಾ ಮತ್ತು ಲಕ್ಷಿತ್ರ್ಮೕ ಟೋಪೋಜಿ, ಥ್ರೋಬಾಲ್‌ನಲ್ಲಿಶ್ರೀಲಕ್ಷಿತ್ರ್ಮೕ, ಮುಸೈಬಾ ಮತ್ತು ವಂದನಾ, ಯೋಗದಲ್ಲಿಅಖಿಲಾ ಎಸ್‌ ಹೆಗಡೆ, ಬಿಬಿಟಿಯಲ್ಲಿಸೌಂದರ್ಯ ಮಸಾಲ್ದೆ, ಬಾಲಕರಲ್ಲಿಖೋ-ಖೋದಲ್ಲಿಸೂರಜ್‌ ಮತ್ತು ಚಂದನ ನಾಯ್ಕ, ವಾಲಿಬಾಲ್‌ ನೈನೇಶ್‌ ಮತ್ತು ಸಂದೀಪ ಗೌಡ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಪ್ರಾಚಾರ್ಯ ಬಾಲಚಂದ್ರ, ಕ್ರೀಡಾ ಸಂಚಾಲಕರಾದ ಸುರೇಶ ಬಿ, ರತ್ನಮ್ಮ ಡಿ.ಸಿ. ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ