ಆ್ಯಪ್ನಗರ

ಹಲವು ದಶಕಗಳಿದ್ದರೂ ಪಟ್ಟಾ ನೀಡಿಲ್ಲ

ಶಿರಸಿ : ನಗರದಂಚಿನ ಗಣೇಶನಗರದ ಅತಿಕ್ರಮಣದಾರರು ಬುಧವಾರ ಇಲ್ಲಿಯ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ತೆರಳಿ ಕಳೆದ ಹಲವು ದಶಕಗಳಿಂದ ನೆಲೆಸಿದ್ದರೂ ಪಟ್ಟಾ ದೊರೆಯದ ಬಗ್ಗೆ ಅಳಲು ತೋಡಿಕೊಂಡರು.

Vijaya Karnataka 26 Jan 2020, 5:00 am
ಶಿರಸಿ : ನಗರದಂಚಿನ ಗಣೇಶನಗರದ ಅತಿಕ್ರಮಣದಾರರು ಬುಧವಾರ ಇಲ್ಲಿಯ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ತೆರಳಿ ಕಳೆದ ಹಲವು ದಶಕಗಳಿಂದ ನೆಲೆಸಿದ್ದರೂ ಪಟ್ಟಾ ದೊರೆಯದ ಬಗ್ಗೆ ಅಳಲು ತೋಡಿಕೊಂಡರು.
Vijaya Karnataka Web patta has not been issued for many decades
ಹಲವು ದಶಕಗಳಿದ್ದರೂ ಪಟ್ಟಾ ನೀಡಿಲ್ಲ


ಅರಣ್ಯ ಇಲಾಖೆಯಿಂದ ಇಲ್ಲಿನ ಕೆಲವು ಅತಿಕ್ರಮಣ ಸ್ಥಳಗಳಲ್ಲಿಮಾತ್ರ ಸರ್ವೆ ನಡೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತಾವು 1978ರ ಪೂರ್ವದಲ್ಲಿಅತಿಕ್ರಮಣ ಮಾಡಿಕೊಂಡಿದ್ದರೂ ಪಟ್ಟಾ ದೊರೆತಿಲ್ಲ. ಆದರೆ ಅದರ ನಂತರ ಅತಿಕ್ರಮಣ ಮಾಡಿಕೊಂಡವರಿಗೆ ಪಟ್ಟಾ ನೀಡಲಾಗಿದೆ ಎಂದು ಕೆಲವು ಮಹಿಳೆಯರು ದೂರಿದರು. ಅರಣ್ಯ ಇಲಾಖೆಯಿಂದ ಈ ಭಾಗದ ಕೆಲವಡೆ ಮಾತ್ರ ಸರ್ವೆ ನಡೆಯುತ್ತಿರುವ ಬಗ್ಗೆ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಅಧಿಕಾರಿಯನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ.ಹೆಗಡೆ, 1978ರ ಪೂರ್ವದ ಪ್ರಕರಣಕ್ಕೆ ಸಂಬಂಧಿಸಿ ತಾಲೂಕಿನಲ್ಲಿ2178ಪ್ರಕರಣದಲ್ಲಿ1184ಪ್ರಕರಣಗಳಿಗೆ ಸಂಬಂಧಿಸಿದ ಪಟ್ಟಾ ನೀಡಲಾಗಿದ್ದರೂ ಆರ್‌ಟಿಸಿ ಕಾಲಂ 11ರಲ್ಲಿಹೆಸರಿದೆ. ಆದರೆ ಕಾಲಂ 9ರಲ್ಲಿಹೆಸರು ಸೇರಬೇಕಾದರೆ ಜಾಗ ಡಿಸ್‌ಫಾರೆಸ್ಟ್‌ ಆಗಬೇಕು. ಈ ಬಗ್ಗೆ ಪ್ರಸ್ತಾವನೆ ಕಳುಹಿಸಿದ್ದರೂ ಅದು ವಾಪಸ್‌ ಬಂದಿದೆ. ಹೀಗಾಗಿ ಇದೀಗ ಜಂಟಿ ಸರ್ವೇ ನಡೆಸಿ ಪುನಃ ಪ್ರಸ್ತಾವನೆ ಕಳುಹಿಸಲಾಗುತ್ತಿದೆ. ಅದನ್ನು ಬಿಟ್ಟು ಬೇರೆ ಯಾವ ಕಾರ್ಯಕ್ಕೂ ಸರ್ವೇ ನಡೆಸುತ್ತಿಲ್ಲ, ಯಾರೂ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲಎಂದು ಸ್ಪಷ್ಟಪಡಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ