ಆ್ಯಪ್ನಗರ

2 ರೂ.ಗೆ ಕೆ.ಜಿ ಮೇವು..!

ಹಳಿಯಾಳ : ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ತಡೆಯಲು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ತಾಲೂಕಿನ ಭಾಗವತಿ ಗ್ರಾಮದಲ್ಲಿ ಮೇವು ಬ್ಯಾಂಕ್‌ ತೆರೆಯುವುದರ ಮೂಲಕ ಮೇವು ಸಂಗ್ರಹವನ್ನು ಆರಂಭಿಸಲಾಗಿದ್ದು ಅರ್ಹರು ಮೇವನ್ನು ರಿಯಾಯತಿ ದರದಲ್ಲಿ ಖರೀದಿಸಬಹುದಾಗಿದ್ದು ಇದರ ಪ್ರಯೋಜನ ಪಡೆಯುವಂತೆ ಇಲ್ಲಿಯ ತಹಶೀಲದಾರ ಶಿವಾನಂದ ಉಳ್ಳೇಗಡ್ಡಿ ಅವರು ತಿಳಿಸಿದ್ದಾರೆ.

Vijaya Karnataka 28 May 2019, 5:00 am
ಹಳಿಯಾಳ : ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ತಡೆಯಲು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ತಾಲೂಕಿನ ಭಾಗವತಿ ಗ್ರಾಮದಲ್ಲಿ ಮೇವು ಬ್ಯಾಂಕ್‌ ತೆರೆಯುವುದರ ಮೂಲಕ ಮೇವು ಸಂಗ್ರಹವನ್ನು ಆರಂಭಿಸಲಾಗಿದ್ದು ಅರ್ಹರು ಮೇವನ್ನು ರಿಯಾಯತಿ ದರದಲ್ಲಿ ಖರೀದಿಸಬಹುದಾಗಿದ್ದು ಇದರ ಪ್ರಯೋಜನ ಪಡೆಯುವಂತೆ ಇಲ್ಲಿಯ ತಹಶೀಲದಾರ ಶಿವಾನಂದ ಉಳ್ಳೇಗಡ್ಡಿ ಅವರು ತಿಳಿಸಿದ್ದಾರೆ.
Vijaya Karnataka Web KWR-27 HLY 2
ಹಳಿಯಾಳ ತಾಲೂಕಿನ ಭಾಗವತಿ ಗ್ರಾಮದಲ್ಲಿ ಮೇವು ಬ್ಯಾಂಕ್‌ ತೆರೆಯಲಾಗಿದ್ದು ರೈತರು ಮೇವು ಖರೀದಿಸುತ್ತಿರುವುದು.

ಗ್ರಾಮದಲ್ಲಿ ಗೌಳಿ ಸಮುದಾಯದವರು ಹಾಗೂ ಜಮೀನು ರಹಿತ ಜಾನುವಾರು ಮಾಲಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಅವರಿಗೆ ಅನುಕೂಲವಾಗುವ ದೃಷ್ಠಿಯಿಂದ ಮೇವು ಬ್ಯಾಂಕ್‌ ತೆರೆಯಲಾಗಿದೆ. ಇಗಾಗಲೇ ತಾಲೂಕಿನಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಇಲ್ಲವಾಗಿದೆ. ಆದರೂ ಮುನ್ನಚ್ಚರಿಕೆಯ ಕ್ರಮವಾಗಿ ಮೇವು ಸಂಗ್ರಹಿಸಲಾಗಿದ್ದು ಜಾನುವಾರುಗಳನ್ನು ಸಾಕಿದ ಹಾಗೂ ಅವಶ್ಯಕತೆಯುಳ್ಳವರು ಪ್ರತಿ ಜಾನುವಾರಿಗೆ ಪ್ರತಿ ದಿನಕ್ಕೆ 5 ಕೆ.ಜಿಯಷ್ಟು ಮೇವನ್ನು ಪ್ರತಿ ಕೆ.ಜಿಗೆ ಕೇವಲ 2 ರೂ. ದರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಈಗಾಗಲೇ ಪಶು ಸಂಗೋಪನಾ ಇಲಾಖೆಯಿಂದ ವರದಿಯನ್ನು ಪಡೆದಿದ್ದು ಬೇಸಿಗೆಯ ಸಮಯದಲ್ಲಿ ಮೇವು ಕೊರತೆಯಾಗದಂತೆ ತಡೆಯಲು ಈ ಕ್ರಮಗಳನ್ನು ಆರಂಭಿಸಲಾಗಿದೆ. ಈಗಾಗಲೇ ಕೆಲವು ದನಗರಗೌಳಿ ಸಮುದಾಯದವರು ಮೇವು ಖರೀದಿಸಿದ್ದಾರೆ ಎಂದು ತಿಳಿಸಿದ ಅವರು ಪಶು ವೈದ್ಯ ಕೆ.ಎಮ್‌.ನಧಾಪ್‌ ಅವರ ತಂಡವು ಇದರಲ್ಲಿ ಭಾಗವಹಿಸಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ