ಆ್ಯಪ್ನಗರ

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿಸಾಧನೆ

ಹಳಿಯಾಳ : ಇಲ್ಲಿಯ ಶ್ರೀ ಛತ್ರಪತಿ ಶಿವಾಜಿ ಶಿಕ್ಷಣ ಸಂಸ್ಥೆಯ ಎಸ್‌.ಎಲ್‌.ಘೋಟ್ನೆಕರ ಆಂಗ್ಲಮಾಧ್ಯಮ ಶಾಲೆಯ ಕರಾಟೆ ಕ್ರೀಡಾಪಟುಗಳು ಇತ್ತೀಚಿಗೆ ಮಂಗಳೂರಿನಲ್ಲಿನಡೆದ ರಾಷ್ಟ್ರ ಮಟ್ಟದ 12ನೇ ಕ್ರೀಡಾಕೂಟದಲ್ಲಿ6 ಚಿನ್ನ, 5 ಬೆಳ್ಳಿ ಮತ್ತು 7 ಕಂಚಿನ ಪದಕಗಳೊಂದಿಗೆ ಒಟ್ಟೂ 18 ಪದಕಗಳನ್ನು ಗಳಿಸಿ ರನ್ನರ್‌ಅಪ್‌ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

Vijaya Karnataka 22 Nov 2019, 5:00 am
ಹಳಿಯಾಳ : ಇಲ್ಲಿಯ ಶ್ರೀ ಛತ್ರಪತಿ ಶಿವಾಜಿ ಶಿಕ್ಷಣ ಸಂಸ್ಥೆಯ ಎಸ್‌.ಎಲ್‌.ಘೋಟ್ನೆಕರ ಆಂಗ್ಲಮಾಧ್ಯಮ ಶಾಲೆಯ ಕರಾಟೆ ಕ್ರೀಡಾಪಟುಗಳು ಇತ್ತೀಚಿಗೆ ಮಂಗಳೂರಿನಲ್ಲಿನಡೆದ ರಾಷ್ಟ್ರ ಮಟ್ಟದ 12ನೇ ಕ್ರೀಡಾಕೂಟದಲ್ಲಿ6 ಚಿನ್ನ, 5 ಬೆಳ್ಳಿ ಮತ್ತು 7 ಕಂಚಿನ ಪದಕಗಳೊಂದಿಗೆ ಒಟ್ಟೂ 18 ಪದಕಗಳನ್ನು ಗಳಿಸಿ ರನ್ನರ್‌ಅಪ್‌ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
Vijaya Karnataka Web performance at the national level karate competition
ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿಸಾಧನೆ


ಕಟಾ ವಿಭಾಗದಲ್ಲಿವೈಷ್ಣವಿ ಕೇಸರಕರ, ಮಲ್ಲಿಕರಿಹಾನ್‌ ಮ್ಯಾಗೇರಿ, ಅಕ್ಷಯ ಶಿಮನಗೌಡಾ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶ್ರೀನಿವಾಸ ಬೂಬಾಟಿ, ಆದರ್ಶ ಮಿಂಡೋಳ್ಕರ, ಇಂದಿರಾ ಶಿಮನಗೌಡಾ ಎರಡನೇ ಸ್ಥಾನಗಳಿಸಿ ಬೆಳ್ಳಿ ಪದಕ ಹಾಗೂ ರಮಾಕಾಂತ ಮಹಾಜನ, ಮಹಾಬಳೇಶ್ವರ ಕಾಜಗಾರ, ನಿತೀನ ಕೋಲೆಕರ ಮತ್ತು ಪ್ರತಾಪ ರಾಣೆ ಅವರು ಮೂರನೇ ಸ್ಥಾನದೊಂದಿಗೆ ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ಕುಮಿಟೆ ವಿಭಾಗದಲ್ಲಿವೈಷ್ಣವಿ ಕೇಸರಕರ, ಮಲ್ಲಿಕರೇಹಾನ್‌ ಮ್ಯಾಗೇರಿ, ಅಕ್ಷಯ ಶಿಮನಗೌಡಾ ಚಿನ್ನದ ಪದಕ, ರಮಾಕಾಂತ ಮಹಾಜನ, ಆದರ್ಶ ಮಿಂಡೋಳ್ಕರ, ದತ್ತಾತ್ರೇಯ ಗೌಡಾ ಬೆಳ್ಳಿ ಪದಕ ಮತ್ತು ನಿತೀನ ಕೋಲೆಕರ, ಶ್ರೀನಿವಾಸ ಬೂಬಾಟಿ, ಇಂದಿರಾ ಶಿಮನಗೌಡಾ, ಮಹಾಬಳೇಶ್ವರ ಕಾಜಗಾರ ಮತ್ತು ಪ್ರತಾಪ ರಾಣೆ ಕಂಚಿನ ಪದಕ ಗಳಿಸಿದ್ದಾರೆ.

ಒಟ್ಟೂ 18 ಪದಕಗಳನ್ನು ಗಳಿಸಿ ರನ್ನರ್‌ಅಪ್‌ ಪ್ರಶಸ್ತಿಯಲ್ಲಿತಮ್ಮದಾಗಿಸಿಕೊಂಡಿದ್ದು ಇವರಿಗೆ ರಮೇಶ ಸೊಲ್ಲಾಪೂರಿ ತರಬೇತಿ ನೀಡಿದ್ದರು. ವಿದ್ಯಾರ್ಥಿಗಳು ನ.24 ರಂದು ಚಿತ್ರದುರ್ಗದಲ್ಲಿನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿಭಾಗವಹಿಸಲಿದ್ದಾರೆ. ಇವರ ಸಾಧನೆಗೆ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಘೋಟ್ನೆಕರ ಮತ್ತು ಪ್ರಾಶುಂಪಾಲ ಲಕ್ಷಿತ್ರ್ಮೕ ನಾಯ್ಕ ಹಾಗೂ ಅಧ್ಯಕ್ಷ ಆರ್‌.ಎಸ್‌.ಅರಶಿಣಗೇರಿ ಮತ್ತು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ