ಆ್ಯಪ್ನಗರ

ಸಸಿ ನೆಟ್ಟು ಬೆಳೆಸಿ ನಾಡು ಉಳಿಸಿ

ದಾಂಡೇಲಿ : ಇಲ್ಲಿಯ ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಸಸ್ಯಶಾಸ್ತ್ರ ವಿಭಾಗ ಮತ್ತು ಅರಣ್ಯ ಇಲಾಖೆಗಳ ಆಶ್ರಯದಲ್ಲಿ ವನ ಮಹೋತ್ಸವ ಆಚರಿಸಲಾಯಿತು.

Vijaya Karnataka 18 Aug 2019, 5:00 am
ದಾಂಡೇಲಿ : ಇಲ್ಲಿಯ ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಸಸ್ಯಶಾಸ್ತ್ರ ವಿಭಾಗ ಮತ್ತು ಅರಣ್ಯ ಇಲಾಖೆಗಳ ಆಶ್ರಯದಲ್ಲಿ ವನ ಮಹೋತ್ಸವ ಆಚರಿಸಲಾಯಿತು.
Vijaya Karnataka Web plant the saplings and save the land
ಸಸಿ ನೆಟ್ಟು ಬೆಳೆಸಿ ನಾಡು ಉಳಿಸಿ


ಅರಣ್ಯ ಇಲಾಖೆಯ ದಾಂಡೇಲಿ ಉಪವಲಯ ಅರಣ್ಯಾಧಿಕಾರಿ ಜಿ.ಸಂತೋಷ ಸಸಿ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ, ಇಂದು ದೇಶದಲ್ಲಿ ನಡೆಯುತ್ತಿರುವ ನೈಸರ್ಗಿಕ ಆವಾಂತರಗಳಿಗೆ ಮನುಕುಲವೇ ಕಾರಣ. ಪ್ರಕೃತಿಯನ್ನು ಕಾಪಾಡುವುದನ್ನು ಮರೆತು ಮನಬಂದತೆ ಕಾಡು ನಾಶ ಮಾಡುತ್ತಿರುವುದರಿಂದ ಇಂದು ನೆರೆಯಂತಹ ತೊಂದರೆಗಳನ್ನು ಅನುಭವಿಸುವ ಸಮಯ ಬಂದಿದೆ. ಈಗಲಾದರೂ ಉಳಿದಿರುವ ಕಾಡನ್ನು ಕಾಪಾಡಿ, ಬೆಳೆಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಪ್ರಾಚಾರ್ಯೆ ಡಾ.ಶೋಭಾ ಶರ್ಮಾ ಅಧ್ಯಕ್ಷ ತೆವಹಿಸಿದ್ದರು. ಕಾಲೇಜಿನ ಪ್ರಾಧ್ಯಾಪಕರಾದ ಡಾ. ಪಿ.ಎ.ಹೊಸಮನಿ, ಡಾ. ಬಿ.ಎಲ್‌. ಗುಂಡೂರ, ಪ್ರೊ. ಎಸ್‌.ವಿನಯ, ಪ್ರೊ. ನಯನಾ ರೇವಣಕರ, ಡಾ. ಎಸ್‌.ಎಸ್‌.ದೊಡಮನಿ, ಡಾ. ವಿಜಯ ತೇಲಿ, ಡಾ. ಸುನೀಲ ರಾಠೋಡ, ಪವನ ಎಚ್‌., ಸವಿತಾ ಪಟ್ಟಣಶೆಟ್ಟಿ, ಅರಣ್ಯಾಧಿಕಾರಿಗಳಾದ ವಿ.ಲಕ್ಷ ್ಮಣ, ಅನಿಲ, ಯೋಗೀಶ ನಾಯ್ಕ, ಜ್ಯೋತಿ ಮುಂತಾದವರು ಇದ್ದರು. ಎನ್‌.ಎಸ್‌.ಎಸ್‌. ಯೋಜನಾಧಿಕಾರಿ ಪ್ರೊ.ಎಸ್‌.ಎಸ್‌.ಹಿರೇಮಠ ಸ್ವಾಗತಿಸಿದರು. ಚೇತನ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ