ಆ್ಯಪ್ನಗರ

ಜನಸಂಖ್ಯೆ ನಿಯಂತ್ರಣ: ಅಧ್ಯಯನ ನಡೆಯಲಿ

ಹಳಿಯಾಳ : ವಿಶ್ವದ ಜನಸಂಖ್ಯೆಯ ನಿಯಂತ್ರಣದಲ್ಲಿ ಯುವ ಜನಾಂಗದ ಪಾತ್ರವು ಮಹತ್ವದಾಗಿದ್ದು, ಅದರ ಕುರಿತು ಯುವಕರು ಹೆಚ್ಚಿನ ಜ್ಞಾನ ಪಡೆದು ಪ್ರಚಾರದ ಮೂಲಕ ಅರಿವು ಮೂಡಿಸುವುದರಿಂದ ವಿಶ್ವ ಮಟ್ಟದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಚಂದ್ರಶೇಖರ ಲಮಾಣಿ ಹೇಳಿದರು.

Vijaya Karnataka 26 Jul 2019, 5:00 am
ಹಳಿಯಾಳ : ವಿಶ್ವದ ಜನಸಂಖ್ಯೆಯ ನಿಯಂತ್ರಣದಲ್ಲಿ ಯುವ ಜನಾಂಗದ ಪಾತ್ರವು ಮಹತ್ವದಾಗಿದ್ದು, ಅದರ ಕುರಿತು ಯುವಕರು ಹೆಚ್ಚಿನ ಜ್ಞಾನ ಪಡೆದು ಪ್ರಚಾರದ ಮೂಲಕ ಅರಿವು ಮೂಡಿಸುವುದರಿಂದ ವಿಶ್ವ ಮಟ್ಟದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಚಂದ್ರಶೇಖರ ಲಮಾಣಿ ಹೇಳಿದರು.
Vijaya Karnataka Web population control let the study take place
ಜನಸಂಖ್ಯೆ ನಿಯಂತ್ರಣ: ಅಧ್ಯಯನ ನಡೆಯಲಿ


ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕಾ ಮಟ್ಟದ ಜನಸಂಖ್ಯಾ ಸಮಸ್ಯೆ ಮತ್ತು ಲಿಂಗ ತಾರತಮ್ಯ ಎಂಬ ವಿಷಯದ ಭಾಷಣ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ವಿಶ್ವದ ಸಮಸ್ಯೆಗಳ ಪಟ್ಟಿಗೆ ಜನಸಂಖ್ಯೆಯು ಸೇರ್ಪಡೆಗೊಂಡಿದೆ. ಅಲ್ಲದೇ ವಿಶ್ವವು ಮುಂದಿನ ಒಂದು ದಶಕದಲ್ಲಿ ಹೇರಳ ಜನಸಂಖ್ಯೆ ಹೊಂದುವ ಮೂಲಕ ವಿವಿಧ ರೀತಿಯ ಪರಿಣಾಮಗಳಿಗೆ ಎಡೆ ಮಾಡಿಕೊಡಲಿದೆ. ವಿದ್ಯಾರ್ಥಿಗಳು ಅದರಲ್ಲಿಯೂ ದೇಶದ ಯುವ ಜನರು ಜನಸಂಖ್ಯೆಯ ಪರಿಣಾಮದ ಕುರಿತು ಹೆಚ್ಚಿನ ಅಧ್ಯಯನ ನಡೆಸಿ ಅದರ ಕುರಿತು ಇನ್ನಿತರ ಜನರಿಗೆ ಅರಿವು ಮೂಡಿಸುವ ಜತೆಗೆ ಜನಸಂಖ್ಯಾ ಮಿತವ್ಯಯಕ್ಕಾಗಿ ತಮ್ಮ ಕೂಡುಗೆ ನೀಡುವಂತೆ ಮನವಿ ಮಾಡಿದರು.

ಆರೋಗ್ಯ ಶಿಕ್ಷ ಣಾಧಿಕಾರಿ ಪ್ರಕಾಶ ಮಾನೆ ಮಾತನಾಡಿ, ಜನಸಂಖ್ಯೆಯ ಹೆಚ್ಚಳಕ್ಕೆ ಹಲವಾರು ಕಾರಣಗಳು ಮುಖ್ಯವಾಗಿದ್ದು, ಇಂದಿನ ಆಧುನಿಕ ವೈದ್ಯಕೀಯ ವಿಚಾರಗಳು ಸೇರಿದಂತೆ ಭಾರತದಂತಹ ಸಮಶೀತೋಷ್ಣ ಹೊಂದಿದ ದೇಶದಲ್ಲಿ ಜನಸಂಖ್ಯೆಯ ಹೆಚ್ಚಳಕ್ಕೆ ನೈಸರ್ಗಿಕ ಕಾರಣವು ಮುಖ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಯೋಜನೆಗಳ ಮೂಲಕ ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾಗಿವೆ. ಗ್ರಾಮೀಣ ಭಾಗದ ಜನರು ಸೇರಿದಂತೆ ಪಟ್ಟಣಗಳ ಜನರು ಇದರ ಉಪಯೋಗ ಪಡೆದು ಜನಸಂಖ್ಯೆಗೆ ಕಡಿವಾಣ ಹಾಕುವ ಮೂಲಕ ದೇಶದ ಉನ್ನತಿಗೆ ಕೈ ಜೋಡಿಸಬೇಕಾಗಿದೆ ಎಂದರು.

ಭಾಷಣ ಸ್ಪರ್ಧೆಯಲ್ಲಿ ನಿರ್ಮಲಾ ಗುರವ ಪ್ರಥಮ, ದುರ್ಗಾಒಳಿ ಬಂಗೂರ ನಗರ ದಾಂಡೇಲಿ ದ್ವಿತೀಯ, ಹವಗಿ ಕಾಲೇಜಿನ ತೇಜು ಭಜಂತ್ರಿ ತೃತೀಯ ಸ್ಥಾನ ಪಡೆದುಕೊಂಡರು, ವಿಜೇತರಿಗೆ ಹವಗಿ ಕಾಲೇಜಿನ ಪ್ರಾಂಶುಪಾಲರು ವಿಜೇತರಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ವಿತರಿಸಿದರು. ಕಾಲೇಜಿನ ಸಂಸ್ಕೃತಿ ವಿಭಾಗದ ಉಪನ್ಯಾಸಕಿ ಸಂಗೀತಾ ಕಲಾಲ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ