ಆ್ಯಪ್ನಗರ

ಸ್ವಚ್ಛತೆ ಮೂಲಕ ರೋಗಕ್ಕೆ ತಡೆಯೊಡ್ಡಿ

ಕಾರವಾರ : ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ'ಕೊರೊನಾ ವೈರಸ್‌' ಕುರಿತು ಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ರೆಡಕ್ರಾಸ್‌ ಯೂತವಿಂಗ್‌ ಅಡಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.

Vijaya Karnataka 15 Mar 2020, 5:00 am
ಕಾರವಾರ : ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ'ಕೊರೊನಾ ವೈರಸ್‌' ಕುರಿತು ಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ರೆಡಕ್ರಾಸ್‌ ಯೂತವಿಂಗ್‌ ಅಡಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web 14 GURUDATT 2_24
ಕಾರವಾರದ ಸರಕಾರಿ ಕಾಲೇಜನಲ್ಲಿಶನಿವಾರ ನಡೆದ ಕೊರೋನಾ ಜಾಗೃತಿ ಕಾರ್ಯಕ್ರಮದಲ್ಲಿಡಾ. ಗಜಾನನ ನಾಯಕ ಮಾತನಾಡಿದರು. ಡಾ. ಕಲ್ಪನಾ ಕೆರವಡಿಕರ್‌ ಇತರರು ಇದ್ದರು.


ಮುಖ್ಯ ಅತಿಥಿ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ಮಾತನಾಡಿ, ಕೊರೊನಾ ವೈರಸಗೆ ಹೆದರುವ ಬದಲು ಎಲ್ಲೆಡೆ ಸ್ವಚ್ಛತೆ ಕಾಪಾಡಲು ಗಮನ ನೀಡುವುದು ಅಗತ್ಯ, ಸ್ವಚ್ಛ ಪರಿಸರ ಕಾಪಾಡಿಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಬೇಕಿದೆ. ಆರೋಗ್ಯ ಇಲಾಖೆ ಮತ್ತು ಆರೋಗ್ಯಾಧಿಕಾರಿಗಳು ಸಂಪೂರ್ಣ ಸಜ್ಜಾಗಿದ್ದಾರೆ. ಜನರಲ್ಲಿಯಾವುದೇ ರೀತಿಯ ಭಯ ಬೇಡ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯೆ ಡಾ.ಕಲ್ಪನಾ ಕೆರವಡಿಕರ್‌ ವಿದ್ಯಾರ್ಥಿಗಳಲ್ಲಿಯಾವುದೇ ರೀತಿಯ ಆತಂಕಬೇಡ, ಉತ್ತಮ ಆಹಾರ ಮತ್ತು ಶುದ್ಧತೆ ಕಡೆಗೆ ಗಮನ ನೀಡಲು ಸೂಚಿಸಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ, ಕಮ್ಯುನಿಟಿ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ. ಹೇಮಗಿರಿ ಕೆ. ಮಾತನಾಡಿ, ಕೊರೊನಾ ವೈರಸ್‌ ಬೆಳವಣಿಗೆ, ಹರಡುವಿಕೆ ಮತ್ತು ತಡೆಗಟ್ಟುವ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಉತ್ತರಿಸಿ ಮುಂಜಾಗೃತಿ ಕ್ರಮಗಳ ಬಗ್ಗೆ ವಿವರಿಸಿದರು.

ರೆಡ್‌ ಕ್ರಾಸ್‌ ಯೂತ್‌ ವಿಂಗ್‌ ಮುಖ್ಯಸ್ಥೆ ಡಾ. ಪ್ರೀತಿ ತಲ್ಲೂರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಶಿವಾನಂದ್‌ ಭಟ್‌ ಅವರು ಅತಿಥಿಗಳನ್ನು ಪರಿಚಯಿಸಿದರು. ಯೂನಿಯನ್‌ ಚೇರ್ಮನ್‌ ಪ್ರೊ.ವಿದ್ಯಾ ನಾಯಕ ವಂದಿಸಿದರು. ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ವೆಂಕಟೇಶ ಗಿರಿಯವರು ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ. ಉಲ್ಲಾಸ್‌ ಶೆಟ್ಟಿ, ಪ್ರೊ. ಬ್ರಂದಾ , ಪ್ರೊ. ಬಸವರಾಜ್‌ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ