ಆ್ಯಪ್ನಗರ

ಖಾಸಗಿ ಶಾಲೆ ಶಿಕ್ಷ ಕರ ನೇಮಕಾತಿ, ಉದ್ಯೋಗ ಮೇಳ 19ಕ್ಕೆ

ಕಾರವಾರ : ಕರ್ನಾಟಕ ರಾಜ್ಯ ಖಾಸಗಿ ಶಿಕ್ಷ ಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ಹಾಗೂ ರಾಷ್ಟ್ರೀಯ ಖಾಸಗಿ ಶಾಲಾ ಶಿಕ್ಷ ಕರ ಹಾಗೂ ಶಿಕ್ಷ ಕೇತರ ಸಿಬ್ಬಂದಿ ತರಬೇತಿ ಹಾಗೂ ನೇಮಕಾತಿ ಕೇಂದ್ರ ಧಾರವಾಡದ ಇವರ ವತಿಯಿಂದ ಮೇ 19ರಂದು ರಂದು ಬೆಳಗ್ಗೆ 9 ಗಂಟೆಯಿಂದ ಧಾರವಾಡದ ಶಿವಾಜಿ ಸರ್ಕಲ್‌ ಬಳಿ ಇರುವ ಭಾರತ್‌ ಹೈಸ್ಕೂಲ್‌ ಆವಾರದಲ್ಲಿ ಖಾಸಗಿ ಶಾಲೆ ಶಿಕ್ಷ ಕರ ನೇಮಕಾತಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ನಾಗರಾಜ ಎಚ್‌. ಎನ್‌. ತಿಳಿಸಿದರು.

Vijaya Karnataka 17 May 2019, 5:00 am
ಕಾರವಾರ : ಕರ್ನಾಟಕ ರಾಜ್ಯ ಖಾಸಗಿ ಶಿಕ್ಷ ಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ಹಾಗೂ ರಾಷ್ಟ್ರೀಯ ಖಾಸಗಿ ಶಾಲಾ ಶಿಕ್ಷ ಕರ ಹಾಗೂ ಶಿಕ್ಷ ಕೇತರ ಸಿಬ್ಬಂದಿ ತರಬೇತಿ ಹಾಗೂ ನೇಮಕಾತಿ ಕೇಂದ್ರ ಧಾರವಾಡದ ಇವರ ವತಿಯಿಂದ ಮೇ 19ರಂದು ರಂದು ಬೆಳಗ್ಗೆ 9 ಗಂಟೆಯಿಂದ ಧಾರವಾಡದ ಶಿವಾಜಿ ಸರ್ಕಲ್‌ ಬಳಿ ಇರುವ ಭಾರತ್‌ ಹೈಸ್ಕೂಲ್‌ ಆವಾರದಲ್ಲಿ ಖಾಸಗಿ ಶಾಲೆ ಶಿಕ್ಷ ಕರ ನೇಮಕಾತಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ನಾಗರಾಜ ಎಚ್‌. ಎನ್‌. ತಿಳಿಸಿದರು.
Vijaya Karnataka Web private school teacher recruitment employment meet 19th
ಖಾಸಗಿ ಶಾಲೆ ಶಿಕ್ಷ ಕರ ನೇಮಕಾತಿ, ಉದ್ಯೋಗ ಮೇಳ 19ಕ್ಕೆ

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಮೇಳದಲ್ಲಿ ಬೆಳಗಾವಿ ವಿಭಾಗದ ಶಿಕ್ಷ ಣ ಸಂಸ್ಥೆಗಳ ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದ ಪೂರ್ವ ಪ್ರಾಥಮಿಕ ಶಾಲೆಗಳು, ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಪದವಿ-ಸ್ನಾತಕೋತ್ತರ ಪದವಿ ಕಾಲೇಜುಗಳು ಭಾಗವಹಿಸಿ, ತಮಗೆ ಬೇಕಾಗುವಂತಹ ಅರ್ಹ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಶಿಕ್ಷ ಣ ಸಂಸ್ಥೆಗಳು ಮೇ 17ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು.

2500ಕ್ಕೂ ಹೆಚ್ಚು ಖಾಲಿ ಹುದ್ದೆಗಳಿದ್ದು, ಮುಖ್ಯೋಪಾಧ್ಯಾಯರು, ಸಹಶಿಕ್ಷ ಕರು, ಕ್ಲರ್ಕಗಳು, ಕಂಪ್ಯೂಟರ್‌ ಶಿಕ್ಷ ಕರು, ಸಂಗೀತ, ನೃತ್ಯ, ಚಿತ್ರಕಲೆ ಶಿಕ್ಷ ಕರು, ಗ್ರಂಥಪಾಲಕರು, ಹಾಸ್ಟೆಲ್‌ ವಾರ್ಡನ್‌ಗಳು, ಸಿಪಾಯಿಗಳು, ಆಯಾಗಳು, ಡ್ರೈವರ್ಸ್‌ ಮತ್ತಿತರ ಹುದ್ದೆಗಳಲ್ಲಿ ನೇಮಕಾತಿಗೆ ಅವಕಾಶವಿದೆ. ಮಾಸಿಕ 8000 ರೂ. ದಿಂದ 50,000ರೂ. ವರೆಗೂ ವೇತನ ಪಡೆಯುಬಹುದು.

ಉದ್ಯೋಗ ಮೇಳಕ್ಕೆ ಬರುವಾಗ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ವಿದ್ಯಾರ್ಹತೆಯ ಎಲ್ಲಾ ಹಂತದ 4 ಸೆಟ್‌ ಝರಾಕ್ಸ್‌ ಪ್ರತಿಗಳು, ಮೂಲ ದಾಖಲಾತಿ ಪತ್ರಗಳು ಹಾಗೂ ಇತ್ತೀಚಿನ 4 ಭಾವಚಿತ್ರಗಳನ್ನು ಕಡ್ಡಾಯವಾಗಿ ತರಬೇಕು. 19ರಂದು ಬೆಳಗ್ಗೆ 8 ಗಂಟೆಯಿಂದ ಅರ್ಜಿ ತುಂಬಿ ತಮ್ಮ ಹೆಸರನ್ನು ನೋಂದಾಯಿಸಿದ ನಂತರ ತಮಗಿಷ್ಟವಾದ 3 ಶಿಕ್ಷ ಣ ಸಂಸ್ಥೆಗಳಿಗೆ ಮಾತ್ರ ನೇರ ಸಂದರ್ಶನ ನೀಡಿ ಉದ್ಯೋಗ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಮೊ: 9480062375, 9483274367 ಸಂಪರ್ಕಿಸಬಹುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ