ಆ್ಯಪ್ನಗರ

ಕಾಡು ಪ್ರಾಣಿ ಹಾವಳಿ ತಡೆಗೆ ಸೂಕ್ತ ಕ್ರಮ ಅವಶ್ಯ

ಕುಮಟಾ : ಜಿಲ್ಲೆಯಲ್ಲಿ ಕಾಡು ಪ್ರಾಣಿ ಹಾವಳಿ ತಡೆಗಟ್ಟಲು ಪ್ರತಿಯೊಬ್ಬ ರೈತ ತನ್ನ ಯೋಜನೆ ಅನುಸಾರ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜು ಎಂ.ಜೆ. ರೈತರಿಗೆ ಸಲಹೆ ನೀಡಿದರು.

Vijaya Karnataka 25 Mar 2019, 5:00 am
ಕುಮಟಾ : ಜಿಲ್ಲೆಯಲ್ಲಿ ಕಾಡು ಪ್ರಾಣಿ ಹಾವಳಿ ತಡೆಗಟ್ಟಲು ಪ್ರತಿಯೊಬ್ಬ ರೈತ ತನ್ನ ಯೋಜನೆ ಅನುಸಾರ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜು ಎಂ.ಜೆ. ರೈತರಿಗೆ ಸಲಹೆ ನೀಡಿದರು.
Vijaya Karnataka Web proper action is required for prevention of wild animals
ಕಾಡು ಪ್ರಾಣಿ ಹಾವಳಿ ತಡೆಗೆ ಸೂಕ್ತ ಕ್ರಮ ಅವಶ್ಯ


ಫೆವಾರ್ಡ್‌ ಯುಕೆ ಉತ್ತರ ಕನ್ನಡ ಮತ್ತು ಕುಮಟಾದ ಎ.ವಿ.ಪಿ.ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕೃಷಿ ಡಿಪೊ್ಲೕಮಾ ಕಾಲೇಜಿನ ಆವಾರದಲ್ಲಿ ಕಾಡು ಪ್ರಾಣಿಯಿಂದ ರೈತನ ಬೆಳೆ ರಕ್ಷ ಣೆ ಕುರಿತು ಏರ್ಪಡಿಸಿದ್ದ ಗೋಷ್ಠಿ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನಿಗಳು ಹೊಸ ಸಂಶೋಧನೆಗಳನ್ನು ಕೈಗೊಂಡರೂ ಸಫಲವಾಗಿಲ್ಲ. ಆದ ಕಾರಣ ವಿದೇಶದಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವ ಅವಶ್ಯವಿದೆ. ಕಾಡಿನಲ್ಲಿ ಹಣ್ಣು ಹಂಪಲು ಗಿಡದ ಕೊರತೆ, ಗಿಡಗ ಸಂತತಿ ನಾಶ, ಜನರಲ್ಲಿ ಕೋತಿಯ ಧಾರ್ಮಿಕ ಭಾವನೆ ಇವುಗಳಿಂದಾಗಿ ಪ್ರಾಣಿ ಹಾವಳಿ ನಿಯಂತ್ರಣ ಕಷ್ಟಕರವಾಗಿದೆ ಎಂದರು.

ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಆರ್‌.ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೃಷಿಯೇ ಮೂಲಾಧಾರವಾಗಿರುವವರಿಗೆ ನಷ್ಟ ಅನುಭವಿಸುವಂತಾಗುತ್ತಿದೆ. ಕಾಡು ಪ್ರಾಣಿಗಳಿಂದ ಬೆಳೆ ರಕ್ಷ ಣೆ ಸವಾಲಾಗಿ ಪರಿಣಮಿಸಿದೆ. ರೈತನ ಹೊಲದಲ್ಲಿ ಶೇ.50 ರಷ್ಟು ಬೆಳೆ ಕಾಡು ಪ್ರಾಣಿ ಪಾಲಾಗುತ್ತಿದೆ. ಪರಿಸರದ ಜತೆ ಸೆಣಸಾಡಿ ಕಷ್ಟಪಟ್ಟು ಬೆಳೆದ ಬೆಳೆ ಹಾಳಾಗುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ ಎಂದರು.

ಯು.ಕೆ. ಕಾರ್ಯದರ್ಶಿ ಗಣಪತಿ ಎಸ್‌.ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಅರಣ್ಯ ಇಲಾಖೆಯು ಕಾಡು ಪ್ರಾಣಿಗಳ ದಾಳಿ ತಡೆಗೆ ಸಮರ್ಪಕ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ಮತ್ತು ಕುಮಟಾ ಸಹಾಯಕ ಆಯುಕ್ತರು ಉಪ ತೋಟಗಾರಿಕಾ ನಿರ್ದೇಶಕರು ಶಿರಸಿ ಹಾಗೂ ಉಪ ಅರಣ್ಯ ಸಂರಕ್ಷ ಣಾಧಿಕಾರಿಗಳು ಹೊನ್ನಾವರ ಇವರನ್ನೊಳಗೊಂಡ ತಜ್ಞರ ಸಮಿತಿ ರಚಿಸಲು ಸಲಹೆ ನೀಡಲಾಗಿತ್ತು. ಆದರೆ ಇಲ್ಲಿಯ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲೆಯ ಎಲ್ಲ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕೃಷಿ ವಿಜ್ಞಾನಿ ಡಾ.ಸತೀಶ್‌ ಆರ್‌. ಗುನಗ, ಎ.ಆರ್‌.ಎಸ್‌ ಕುಮಟಾ, ಸಿಂಡ್‌ ನಿರ್ದೇಶಕ ನವೀನ್‌ ಇತರರು ವೇದಿಕೆಯಲ್ಲಿದ್ದರು. ರೈತ ಆಸಕ್ತ ಗುಂಪಿನ ಸದಸ್ಯರು ಬೆಳೆ ನಾಶದ ಕುರಿತು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಮಹಾವಿಷ್ಣು, ಜಟಗೇಶ್ವರ, ವನದೇವತಾ, ಧಾರನಾಥ, ಕೃಷಿಕ ಸಂಜೀವಿನಿ ಎ.ವಿ.ಪಿ ರೈತ ಆಸಕ್ತ ಗುಂಪುಗಳ ಸದಸ್ಯರು, ರೈತರು ಭಾಗವಹಿಸಿದ್ದರು.

ಕೃಷಿ ಡಿಪೊ್ಲೕಮಾ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಸ್ಥೆಯ ಕೃಷ್ಣ ಜಿ ನಾಯ್ಕ ಸ್ವಾಗತಿಸಿದರು. ಹೊನ್ನಾವರದ ಅರೇಅಂಗಡಿ ಸಿರಿ ಡಬ್ಯೂ ಮಹಾವಿದ್ಯಾಲಯದ ವಿದ್ಯಾರ್ಥಿನಿ ಭಾಗ್ಯಶ್ರೀ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ