ಆ್ಯಪ್ನಗರ

ಹುಲಿರಾಯ ಜನ ಜಾನುವಾರು ರಕ್ಷಿಸು

ಕಡಬಾಳದ ಗಾಮದ ಮನೆಯಲ್ಲಿಗ್ರಾಮಸ್ಥರ ಪೂಜೆ, ಅರಿಕೆ ಹುಲಿರಾಯ ಜನ, ಜಾನುವಾರು ರಕ್ಷಿಸು(ಹೆಡ್‌) ವಿಕ ಸುದ್ದಿಲೋಕ ಶಿರಸಿ ಓ ಹುಲಿರಾಯ...

Vijaya Karnataka 18 Nov 2020, 5:00 am
ಶಿರಸಿ : ಓ ಹುಲಿರಾಯ.., ಗ್ರಾಮದ ಜನ-ಜಾನುವಾರುಗಳ ರಕ್ಷಣೆಯೊಂದಿಗೆ, ಗದ್ದೆ-ತೋಟಗಳಿಗೆ ಯಾವುದೇ ಹಾನಿಯಾಗದಂತೆ, ಗ್ರಾಮಸ್ಥರೆಲ್ಲರೂ ಶಾಂತಿಯುತವಾಗಿ, ಸುಭಿಕ್ಷವಾಗಿ ಜೀವನ ನಡೆಸುವಂತೆ ಕಾಪಾಡೆಂದು ಗ್ರಾಮೀಣ ಭಾಗದ ಜನತೆ ದೀಪಾವಳಿಯಂದು ಒಂದೆಡೆಯಲ್ಲಿಸೇರಿ ಭಕ್ತಿಯಿಂದ ಬೇಡಿಕೊಂಡ ಪರಿಯಿದು.
Vijaya Karnataka Web 17SRS7A_26
ಕಡಬಾಳದ ಶ್ರೀ ಕದಂಬೇಶ್ವರ ದೇವಸ್ಥಾನದ ಸಮೀಪದಲ್ಲಿನೆಲೆಸಿದ ಹುಲಿದೇವರ ಗಾಮದ ಮನೆಯಲ್ಲಿಗ್ರಾಮಸ್ಥರು ಪೂಜೆ ಸಲ್ಲಿಸಿದರು.


ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳ ಬಹುತೇಕ ಗ್ರಾಮಗಳಲ್ಲಿವ್ಯಾಘ್ರ ದೇವನಿಗೆ ವಿಶೇಷ ಪೂಜೆ ಸಲ್ಲಿಸಿ, ಹುಲಿರಾಯನಿಗೆ ಶ್ರದ್ಧಾ ಭಕ್ತಿಯಿಂದ ಗ್ರಾಮದ ರಕ್ಷಣೆಯ ಜವಾಬ್ದಾರಿಯ ಕಂಕಣ ತೊಡಿಸುವ ಧಾರ್ಮಿಕ ಕೈಂಕರ್ಯದ ಸಂಬ್ರಮ ಎಲ್ಲೆಡೆಯಲ್ಲಿನಡೆಯಿತು.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿದೀಪಾವಳಿಯ ಕೊನೆ ದಿನ ಗ್ರಾಮದ ಜನತೆ ಶ್ರದ್ಧಾಭಕ್ತಿಯಿಂದ ಹುಲಿರಾಯನಿಗೆ ಏಕಕಾಲದಲ್ಲಿಪೂಜಾ ಕೈಂಕರ್ಯ ನೆರವೇರಿಸಿ ಗೋಪೂಜೆ ಕಾರ್ಯಕ್ಕೆ ಅಣಿಯಾದರು. ಸಂಪ್ರದಾಯದಂತೆ ಗೋವಿಗೆ ತೊಡಿಸುವ ಹೊಸ ದಾಬು, ನಾರಿನ ಹಾರವನ್ನು ಮೊದಲು ಹುಲಿರಾಯನ ಪಾದದಲ್ಲಿಟ್ಟು ಆಶಿರ್ವಾದ ಪಡೆದು ಆ ನಂತರ ಗೋವಿಗೆ ತೊಡಿಸಿ ಹಬ್ಬದ ಸಂಭ್ರಮ ಹೆಚ್ಚಿಸಿದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ತಾಲೂಕಿನ ಕಡಬಾಳದ ಶ್ರೀ ಕದಂಬೇಶ್ವರ ದೇವಸ್ಥಾನದ ಸಮೀಪದಲ್ಲಿನೆಲೆಸಿದ ಹುಲಿದೇವರ ಗಾಮದ ಮನೆಯಲ್ಲಿಗ್ರಾಮದ ಜನತೆ ದೀಪವಾಳಿಂದು ವಿಶೇಷ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಿದರು.

ಬಾಲಕ್ಕೊಂದು ತೆಂಗಿನಕಾಯಿ : ದೀಪಾವಳಿಯಂದು ಗ್ರಾಮದ ಶಕ್ತಿದೇವತೆಗಳಿಗೆ ನೀಡಲಾಗುವ ವಿಶೇಷ ಪೂಜೆಗಳಲ್ಲಿಗ್ರಾಮಸ್ಥರು ಕೊಟ್ಟಿಗೆಯಲ್ಲಿನ ಜಾನುವಾರಿಗೊಂದು ಕಾಯಿಯಂತೆ ದೇವರ ನೈವೇದ್ಯಕ್ಕೆ ನೀಡುತ್ತಾರೆ. ಗೋವುಗಳ ರಕ್ಷಣೆಗೆ ದೇವರು ಸದಾ ಕಾವಲಾಗಿ ನಿಲ್ಲಲ್ಲಿಎಂಬ ಸದುದ್ಧೇಶದಿಂದ ದೀಪಾವಳಿಯಂದು ಗೋವುಗಳ ರಕ್ಷಣೆಗೆ ಬಾಲಕ್ಕೊಂದು ತೆಂಗಿನಕಾಯಿಗಳನ್ನು ಒಡೆಯುವ ಪದ್ಧತಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ದೀಪಾವಳಿಯಲ್ಲೂಈ ಸಂಪ್ರದಾಯ ಆಚರಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ