ಆ್ಯಪ್ನಗರ

ಗದ್ದೆ ಮನೆಯಲ್ಲಿ ಸಿಲುಕಿಕೊಂಡವರ ರಕ್ಷಣೆ

ಹಳಿಯಾಳ: ಪಟ್ಟಣದಲ್ಲಿ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವಾರು ಗ್ರಾಮಗಳು ನೀರಿನಿಂದ ಆವೃತವಾಗಿದ್ದು ರಕ್ಷ ಣಾ ತಂಡವು ಮಾಜಿ ಯೋಧನ ಕುಟುಂಬವನ್ನು ಬೋಟ್‌ ಮೂಲಕ ರಕ್ಷಿಸಿದ ಘಟನೆಯು ಶನಿವಾರ ತಾಲೂಕಿನ ಮಲವಡಿ ಗ್ರಾಮದಲ್ಲಿ ನಡೆದಿದೆ.

Vijaya Karnataka 11 Aug 2019, 5:00 am
ಹಳಿಯಾಳ: ಪಟ್ಟಣದಲ್ಲಿ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವಾರು ಗ್ರಾಮಗಳು ನೀರಿನಿಂದ ಆವೃತವಾಗಿದ್ದು ರಕ್ಷ ಣಾ ತಂಡವು ಮಾಜಿ ಯೋಧನ ಕುಟುಂಬವನ್ನು ಬೋಟ್‌ ಮೂಲಕ ರಕ್ಷಿಸಿದ ಘಟನೆಯು ಶನಿವಾರ ತಾಲೂಕಿನ ಮಲವಡಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web KWR-10 HLY 2

ಮಾಜಿ ಯೋಧ ಭೀಮಪ್ಪಾ ಚೌಗುಲೆ ಹಾಗೂ ಸಂಜಯ ಚೌಗುಲೆ ಅವರು ತಮ್ಮ ಕುಟುಂಬದ ಇನ್ನಿತರ ಸದಸ್ಯರೊಂದಿಗೆ ತಾಲೂಕಿನ ಮಲವಡಿ ಗ್ರಾಮದ ಅಂಚಿನಲ್ಲಿರುವ ತಮ್ಮ ಗದ್ದೆಯ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಕಳೆದ ಹಲವಾರು ದಿನಗಳಿಂದ ಮಳೆಯು ಬಿದ್ದ ಪರಿಣಾಮ ಗದ್ದೆ ಸೇರಿದಂತೆ ಮನೆಯ ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆಯಲ್ಲಿ ತಾಲೂಕಾಡಳಿತವು ಬೋಟ್‌ ಮೂಲಕ ಅವರ ಮನೆಯನ್ನು ಸುತ್ತುವರೆದು ಅಂತಿಮವಾಗಿ ಮನೆಯ ಸರಂಜಾಮುಗಳ ಸಮೇತ ಅವರನ್ನು ಮಲವಡಿ ಗ್ರಾಮಕ್ಕೆ ಸುರಕ್ಷಿತವಾಗಿ ತಂದು ತಲುಪಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ