ಆ್ಯಪ್ನಗರ

ಅದಿರು ಕಳ್ಳಸಾಗಾಣೆ ಆರೋಪ ಪ್ರತಿಭಟನೆ

ದಾಂಡೇಲಿ : ಮುಚ್ಚಿರುವ ನಗರದ ಡಿ.ಎಫ್‌.ಎ ಕಾರ್ಖಾನೆಯಿಂದ ಅವ್ಯಹತವಾಗಿ ಅನ್ಯ ರಾಜ್ಯಗಳ ಮೂಲಕ ಮ್ಯಾಂಗನೀಸ್‌ ಪ್ಲಾತ್ರ್ಯಗ್‌ ಕಳ್ಳ ಸಾಗಾಣೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು ಈ ಅಕ್ರಮ ಸಾಗಣೆಯನ್ನು ಮಾಜಿ ಮತ್ತು ಹಾಲಿ ನಗರ ಸಭಾ ಸದಸ್ಯರು ತಡೆ ಹಿಡಿದು, ಪ್ರತಿಭಟಿಸಿದ ಘಟನೆ ಮಂಗಳವಾರ ನಡೆದಿದೆ.

Vijaya Karnataka 21 May 2020, 5:00 am
ದಾಂಡೇಲಿ : ಮುಚ್ಚಿರುವ ನಗರದ ಡಿ.ಎಫ್‌.ಎ ಕಾರ್ಖಾನೆಯಿಂದ ಅವ್ಯಹತವಾಗಿ ಅನ್ಯ ರಾಜ್ಯಗಳ ಮೂಲಕ ಮ್ಯಾಂಗನೀಸ್‌ ಪ್ಲಾತ್ರ್ಯಗ್‌ ಕಳ್ಳ ಸಾಗಾಣೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು ಈ ಅಕ್ರಮ ಸಾಗಣೆಯನ್ನು ಮಾಜಿ ಮತ್ತು ಹಾಲಿ ನಗರ ಸಭಾ ಸದಸ್ಯರು ತಡೆ ಹಿಡಿದು, ಪ್ರತಿಭಟಿಸಿದ ಘಟನೆ ಮಂಗಳವಾರ ನಡೆದಿದೆ.
Vijaya Karnataka Web protest against allegations of ore smuggling
ಅದಿರು ಕಳ್ಳಸಾಗಾಣೆ ಆರೋಪ ಪ್ರತಿಭಟನೆ

ಬಹಳ ವರ್ಷಗಳ ಹಿಂದೆ ಮುಚ್ಚಲ್ಪಟ್ಟ ಈ ಕಾರ್ಖಾನೆಯಲ್ಲಿಸಾಕಷ್ಟು ಪ್ರಮಾಣದಲ್ಲಿಮ್ಯಾಂಗನೀಸ್‌ ಪ್ಲಾತ್ರ್ಯಗ್‌ ಅದಿರು ಇದ್ದು, ಈ ಅದಿರನ್ನು ಕಳೆದ ಕೆಲ ವರ್ಷಗಳಿಂದ ಕಳ್ಳ ಸಾಗಾಣೆ ಮಾಡಲಾಗುತ್ತಿದೆಯೆಂಬ ಆರೋಪವಿದೆ. ಇದೀಗ ಮತ್ತೆ ಅದೇ ಚಾಳಿಯನ್ನು ಪ್ರಾರಂಭಿಸಿದೆ ಎನ್ನಲಾಗಿದೆ.

ಕಾರ್ಖಾನೆಯಿಂದ ಮ್ಯಾಂಗನೀಸ್‌ ಪ್ಲಾತ್ರ್ಯಗ್‌ ಸಾಗಿಸಲು ಮಂಗಳವಾರ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯದ ಟ್ರಕ್‌ಗಳು ಬಂದಿದ್ದವು. ಇದನ್ನು ಗಮನಿಸಿದ ಮಾಜಿ ನಗರ ಸಭಾಧ್ಯಕ್ಷ ಎನ್‌.ಜಿ.ಸಾಳುಂಕೆ, ನಗರ ಸಭಾ ಸದಸ್ಯರಾದ ದಶರಥ ಬಂಡಿವಡ್ಡರ ಹಾಗೂ ಸಾರ್ವಜನಿಕರು ಕಾರ್ಖಾನೆಗೆ ಭೇಟಿ ನೀಡಿ, ಆಕ್ರೋಶ ವ್ಯಕ್ತಪಡಿದ್ದಾರೆ. ಮುಂದಿನ ದಿನಗಳಲ್ಲಿಮತ್ತೆ ಕಳ್ಳ ಸಾಗಾಣೆ ಮುಂದುವರಿಸಿದಲ್ಲಿಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ದಾಂಡೇಲಿ- ಅದಿರು ಸಾಗಾಣೆಗೆ ಅಣಿಯಾದ ಅನ್ಯರಾಜ್ಯದ ಟ್ರಕ್‌ ಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ