ಆ್ಯಪ್ನಗರ

ಕೊಂಚ ಇಳಿದ ಮಳೆಯ ಅಬ್ಬರ: ನಿಟ್ಟುಸಿರುಬಿಟ್ಟ ಕುಮಟಾದ ಜನತೆ

ಉತ್ತರ ಕನ್ನಡ ಕುಮಟಾದಲ್ಲಿ ಮಳೆಯ ಆರ್ಭಟ ಸ್ವಲ್ಪ ತಗ್ಗಿದೆ.

Vijaya Karnataka Web 9 Aug 2019, 12:58 pm
ಕುಮಟಾ: ತಾಲೂಕಿನಾದ್ಯಂತ ಸತತವಾಗಿ 5 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಗುರುವಾರದಿಂದ ಸ್ವಲ್ಪ ಶಾಂತವಾಗಿದ್ದು, ಇದರಿಂದ ಸಾರ್ವಜನಿಕರು ಹಾಗೂ ನೆರೆಪೀಡಿತ ಪ್ರದೇಶದ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
Vijaya Karnataka Web ಕೋಡ್ಕಣಿಯಲ್ಲಿ ಹೊಳೆದೇವರ ದೇವಸ್ಥಾನವನ್ನಾವರಿಸಿದ ಅಘನಾಶಿನಿ ಪ್ರವಾಹ


ಘಟ್ಟದ ಮೇಲಿನ ಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ಕಳೆದ 5-6 ದಿನಗಳಿಗಳಿಂದ ಎಡಬಿಡದೇ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಎಲ್ಲ ನದಿಗಳು ಹಾಗೂ ಜಲಮೂಲಗಳು ತುಂಬಿ ಹರಿಯುತ್ತಿರುವುದಲ್ಲದೇ, ಜನ ಜೀವನ ಅಸ್ತವ್ಯಸ್ತಗೊಂಡಿದ್ದವು. ಅನೇಕ ಭಾಗದ ವಾಹನ ಸಂಚಾರವೂ ಸ್ಥಗಿತಗೊಂಡಿತ್ತು.


ವರುಣನ ಆರ್ಭಟಕ್ಕೆ ಭಾಗಶಃ ಅಘನಾಶಿನಿ ತೀರದ ಪ್ರದೇಶದ ಮನೆ, ಹೊಲ, ಗದ್ದೆಗಳು ಜಲಾವೃತಗೊಂಡು, ಜನರು ಮನೆ ತ್ಯಜಿಸಿ ಪುನರ್ವಸತಿ ಕೇಂದ್ರಗಳಿಗೆ ತೆರಳುವಂತಾಗಿತ್ತು.

ಬುಧವಾರ ರಾತ್ರಿಯಿಂದ ಗುರುವಾರದ ತನಕ ವರುಣನ ಆರ್ಭಟ ಕೊಂಚ ಕಡಿಮೆಯಾಗಿದ್ದು, ಜಲಾವೃತಗೊಂಡ ಪ್ರದೇಶದ ನೀರು ಇಳಿಮುಖವಾಗುತ್ತಿದೆ.

ಕುಮಟಾ ಸೇರಿದಂತೆ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕಳೆದೆರಡು ದಿನಗಳಿಂದ ಬಿಟ್ಟ ಮನೆ ಹಾಗೂ ಹೊಲಗದ್ದೆಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಲು ಅನುವಾಗುತ್ತಿದ್ದಾರೆ.

ಇನ್ನು ತಾಲೂಕಿನಲ್ಲಿ ಕಲ್ಪಿಸಿದ 19 ಸಾಂತ್ವನ ಶಿಬಿರಗಳ ಪೈಕಿ ವಾಲಗಳ್ಳಿ, ಹೆಗಡೆ, ಕೋಡ್ಕಣಿ, ತಾರಿಬಾಗಿಲು, ಖೈರೆ, ಊರಕೇರಿ, ಮಿರ್ಜಾನ ಹಾಗೂ ಬರ್ಗಿ ಈ 8 ಸಾಂತ್ವನ ಶಿಬಿರಗಳು ಮುಂದುವರೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ