ಆ್ಯಪ್ನಗರ

ಕಾರವಾರದಲ್ಲಿ ಅಪರೂಪದ ಉದ್ದ ಕಣ್ಣಿನ ಈಜುವ ಏಡಿ ಪತ್ತೆ

ಈಗಾಗಲೇ ಮಳೆ ಪ್ರಾರಂಭವಾಗಿರುವುದರಿಂದ ಮೀನುಗಾರಿಕೆ ಕೂಡ ಬಂದಾಗಿದೆ. ಆದರೆ ಮಾಜಾಳಿ ಕಡಲತೀರದಲ್ಲಿ ಸಾಂಪ್ರದಾಯಿಕವಾಗಿ ಸಣ್ಣ ಸಣ್ಣ ದೋಣಿಗಳು ಹವಾಮಾನ ನೋಡಿಕೊಂಡು ಮೀನುಗಾರಿಕೆಗೆ ತೆರಳುತ್ತಿರುತ್ತಾರೆ.

Lipi 20 May 2022, 7:44 pm
ಕಾರವಾರ: ಪಶ್ಚಿಮ ಕರಾವಳಿಯಲ್ಲಿ ಅಪೂರಕ್ಕೆ ಎಂಬAತೆ ಕಾರವಾರದ ಮಾಜಾಳಿ ಕಡಲತೀರದಲ್ಲಿ ಉದ್ದ ಕಣ್ಣಿನ ಈಜುವ ಏಡಿಯೊಂದು ಪತ್ತೆಯಾಗಿದ್ದು, ಇದು ಕಡಲ ವಿಜ್ಞಾನಿಗಳ ಹಾಗೂ ಅಧ್ಯಯನಕಾರರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
Vijaya Karnataka Web rare type of crab found in karwar sea experts exited
ಕಾರವಾರದಲ್ಲಿ ಅಪರೂಪದ ಉದ್ದ ಕಣ್ಣಿನ ಈಜುವ ಏಡಿ ಪತ್ತೆ


ಕಾರವಾರದ ಮಾಜಾಳಿಯ ಮೀನುಗಾರ ಧನೇಶ್ ಸೈಲ್ ಎನ್ನುವವರು ಎಂದಿನಂತೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಪಟ್ಟೆ ಬಲೆಗೆ ಬಂಧಿಯಾಗಿ ಈ ಏಡಿ ಸಿಕ್ಕಿದೆ. ಅಸಾನಿ ಚಂಡಮಾರುತದ ಪರಿಣಾಮವಾಗಿ ಮೀನುಗಳು ಅಷ್ಟಾಗಿ ಸಿಗುತ್ತಿಲ್ಲ. ಅಲ್ಲದೇ ಜೂನ್‌ನಿಂದ ಎರಡು ತಿಂಗಳುಗಳ ಕಾಲ ಮೀನುಗಾರಿಕೆಗೆ ನಿಷೇಧ ಕೂಡ ಹೇರಲಾಗಿದೆ.

ಈಗಾಗಲೇ ಮಳೆ ಪ್ರಾರಂಭವಾಗಿರುವುದರಿಂದ ಮೀನುಗಾರಿಕೆ ಕೂಡ ಬಂದಾಗಿದೆ. ಆದರೆ ಮಾಜಾಳಿ ಕಡಲತೀರದಲ್ಲಿ ಸಾಂಪ್ರದಾಯಿಕವಾಗಿ ಸಣ್ಣ ಸಣ್ಣ ದೋಣಿಗಳು ಹವಾಮಾನ ನೋಡಿಕೊಂಡು ಮೀನುಗಾರಿಕೆಗೆ ಆಗಾಗ್ಗೆ ತೆರಳುತ್ತಿರುತ್ತಾರೆ. ಈ ಸಂದರ್ಭದಲ್ಲಿ ಧನೇಶ್ ಸೈಲ್‌ಗೆ ಈ ಏಡಿ ಸಿಕ್ಕಿದ್ದು, ವಿಚಿತ್ರವಾಗಿ ಕಂಡ ಕಾರಣ ಕಾರವಾರದ ಕಡಲಜೀವ ವಿಜ್ಞಾನಿಗಳಿಗೆ ಈ ಬಗ್ಗೆ ತಿಳಿಸಿದ್ದಾರೆ. ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಏಡಿಯ ಕುರಿತಾದ ಮಾಹಿತಿ ಸಂಗ್ರಹಿಸಿದ್ದಾರೆ.

ಭಾರೀ ಮಳೆಗೆ ಉತ್ತರ ಕನ್ನಡದಲ್ಲಿ ಜನಜೀವನ ಅಸ್ತವ್ಯಸ್ತ! ಗುಳ್ಳಾಪುರ ತಾತ್ಕಾಲಿಕ ರಸ್ತೆ ಮುಳುಗಡೆ

ತನ್ನ ಶರೀರದ ಗಾತ್ರದಷ್ಟೇ ಉದ್ದವಾದ ಕಣ್ಣನ್ನು ಹೊಂದಿರುವ ಈ ಏಡಿಗೆ ಜಪಾನ್ ಮತ್ತು ದಕ್ಷಿಣ ಏಷ್ಯಾ ರಾಷ್ಟçಗಳ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈ ಏಡಿಗಳನ್ನ ಅಲ್ಲಿ ಆಹಾರಕ್ಕಾಗಿ ಬಳಸುವ ಕಾರಣ ಬಹು ಮೌಲ್ಯವುಳ್ಳದ್ದೂ ಆಗಿದೆ. ಉದ್ದನೆಯ ಕಣ್ಣಿನ ಜೊತೆಗೆ ಈಜುವ ಏಡಿಯಾಗಿರುವುದು ಇದರ ಎರಡು ವಿಶೇಷತೆಯಾಗಿದೆ.

ಏಡಿಯ ಕುರಿತು ಡಾ.ಶಿವಕುಮಾರ್ ಹರಗಿ ಅವರು ‘ವಿಜಯ ಕರ್ನಾಟಕ ವೆಬ್’ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

‘ಈ ಏಡಿ ಬಹಳ ಅಪರೂಪ. ಉಷ್ಣವಲಯ, ಸಮಶೀತೋಷ್ಣವಲಯದ ಸಾಗರದಲ್ಲಿ ಇವುಗಳು ಕಂಡುಬರುತ್ತವೆ. ಕೆಂಪುಸಮುದ್ರ, ಹವಾಯಿ ದ್ವೀಪ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾ ದ್ವೀಪ ರಾಷ್ಟ್ರಗಳಲ್ಲಿ ಅತೀ ಹೆಚ್ಚಾಗಿ ಇವು ದೊರೆಯುತ್ತವೆ. ಭಾರತದ ಪೂರ್ವ ಕರಾವಳಿಯಲ್ಲೂ ಇವುಗಳು ಸಿಕ್ಕ ದಾಖಲೆಗಳಿವೆ. ಆದರೆ ಪಶ್ಚಿಮ ಕರಾವಳಿಯಲ್ಲಿ ಬಹಳ ಅಪರೂಪ. ಅನೇಕ ವರ್ಷಗಳ ಹಿಂದೆ ಕರ್ನಾಟಕದಲ್ಲೇ ಈ ರೀತಿಯ ಒಂದು ಏಡಿ ಪತ್ತೆಯಾಗಿದ್ದು ದಾಖಲಾಗಿತ್ತು. ತದನಂತರ ಇತ್ತೀಚಿನವರೆಗೆ ಇದು ಸಿಕ್ಕಿರುವ ದಾಖಲೆಗಳಿಲ್ಲ’ ಎಂದು ವಿವರಿಸಿದರು.


‘ಈ ಏಡಿಯ ಮೈಬಣ್ಣ ಬೂದು ಹಸಿರು ಇರುತ್ತದೆ. ಪ್ರೌಢಾವಸ್ಥೆಗೆ ಬಂದಾಗ ಇದರ ಕೊಂಬು ಕೇಸರಿ ಕಂದು ಬಣ್ಣಕ್ಕೆ ತಿರುಗುತ್ತದೆ. ಸಮುದ್ರ ಜೀವಿಯಾಗಿದ್ದು, ಕಡಲ ಮರಳು ಮತ್ತು ಮಣ್ಣಿನಲ್ಲಿ ಇವು ವಾಸ ಮಾಡುತ್ತವೆ. ಈಜಲು ಕಾಲಿನ ವ್ಯವಸ್ಥೆಗಳನ್ನು ಹೊಂದಿರುವ ಈ ಏಡಿ ಆರಾಮವಾಗಿ ಸಾಗರದಲ್ಲಿ ಈಜಬಲ್ಲದು. ಮೇಲೆಯೇ ಹೆಚ್ಚು ಈಜುವ ಕಾರಣ ಇವುಗಳು ಬಹಳ ಸುಲಭವಾಗಿ ಮೀನುಗಾರರ ಬಲೆಗಳಿಗೆ ಸಿಕ್ಕಿಬಿಡುತ್ತವೆ. ಸಾಮಾನ್ಯವಾಗಿ 12- 15 ಸೆಂ.ಮೀ.ನಷ್ಟು ಬೆಳೆದು, 15- 20 ಗ್ರಾಂನಷ್ಟು ತೂಗುತ್ತವೆ’ ಎನ್ನುತ್ತಾರೆ ಅವರು.

ಕರಾವಳಿಯಲ್ಲಿ ಮರಳುಗಾರಿಕೆಗೆ ಎನ್‌ಜಿಟಿ ಶಾಕ್: ಉ.ಕನ್ನಡದಲ್ಲಿ ಮರಳು ತೆಗೆಯಲು ನಿರ್ಬಂಧ!

‘ಇವುಗಳು ತನ್ನ ದೇಹದ ಗಾತ್ರದಷ್ಟೇ ಉದ್ದದ ಕಣ್ಣುಗಳನ್ನು ಹೊಂದಿರುತ್ತವೆ. ಈ ಕಣ್ಣುಗಳನ್ನು ಬೇಟೆಗಾಗಿ ಹೆಚ್ಚು ಇವು ಬಳಕೆ ಮಾಡಿಕೊಳ್ಳುತ್ತವೆ. ಸಮುದ್ರದ ಮರಳಿನಲ್ಲಿ ಹೊಂಚು ಹಾಕಿ ಕುಳಿತು ಉದ್ದನೆಯ ದುರ್ಬಿನ್ ಮಾದರಿಯ ಕಣ್ಣಿನ ಮೂಲಕ ತನ್ನ ಬೇಟೆಯನ್ನು ಗುರುತಿಸಿ ಬೇಟೆಯಾಡುತ್ತವೆ. ಇದರ ವೈಜ್ಞಾನಿಕ ಹೆಸರು ಸ್ಯೂಡೊಪೊತಲಾಮಸ್ ವಿಜಿಲ್’ ಎಂದು ಅವರು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ