ಆ್ಯಪ್ನಗರ

ಮೀನುಗಾರರ ಸ್ಟೋರಿಗೆ ಸಂಬಂದಿಸಿದ್ದು

ಗೋಕರ್ಣ : ಮನೆಯಲ್ಲಿ ತಂದೆ, ತಾಯಿ, ಪತ್ನಿ, 9 ತಿಂಗಳ ಮಗು ಇದೆ. ಅಣ್ಣ ಬೈಕ್‌ ಅಪಘಾತದಲ್ಲಿ ತೀರಿಹೋಗಿದ್ದಾನೆ. ಆತನ ಹೆಂಡತಿಯೂ ಮನೆಯಲ್ಲಿದ್ದಾಳೆ. ಇಷ್ಟೆಲ್ಲ ಜನರಿಗೆ ಆಧಾರ ಸತೀಶ ಹರಿಕಂತ್ರ.

Vijaya Karnataka 12 Jan 2019, 5:00 am
ಗೋಕರ್ಣ : ಮನೆಯಲ್ಲಿ ತಂದೆ, ತಾಯಿ, ಪತ್ನಿ, 9 ತಿಂಗಳ ಮಗು ಇದೆ. ಅಣ್ಣ ಬೈಕ್‌ ಅಪಘಾತದಲ್ಲಿ ತೀರಿಹೋಗಿದ್ದಾನೆ. ಆತನ ಹೆಂಡತಿಯೂ ಮನೆಯಲ್ಲಿದ್ದಾಳೆ. ಇಷ್ಟೆಲ್ಲ ಜನರಿಗೆ ಆಧಾರ ಸತೀಶ ಹರಿಕಂತ್ರ.
Vijaya Karnataka Web KWR-11 GKN 1 A


ಅವನೇ ಈಗ ಕಾಣೆಯಾಗಿದ್ದಾನೆ.

ಗೋಕರ್ಣ ಸಮೀಪದ ಮಾದನಗೇರಿಯ ಸತೀಶನಿಗೆ ತಂದೆ ಈಶ್ವರ (65) ಹಾಗೂ ತಾಯಿ ನಾಗಮ್ಮ(57) ಇದ್ದಾರೆ. ಇದೀಗ ಮನೆಯನ್ನು ನಡೆಸುವುದೇ ಇವರಿಗೆ ಕಷ್ಟವಾಗಿದೆ. ಇವರೆಲ್ಲ ಸತೀಶನಿಗಾಗಿ ಕಾದು ಕುಳಿತಿದ್ದಾರೆ. ಒಬ್ಬ ಸಹೋದರಿಯನ್ನು ಭಟ್ಕಳಕ್ಕೆ ಮದುವೆ ಮಾಡಿಕೊಟ್ಟಿದ್ದಾರೆ.

ಪತ್ರಿಕೆ ಜತೆಗೆ ಮಾತನಾಡಿದ ಸತೀಶ್‌ ಕುಟುಂಬ ದುಃಖ ವ್ಯಕ್ತಪಡಿಸುತ್ತ ''ತಮ್ಮ ಕುಟುಂಬದ ಆಧಾರವೇ ಮುರಿದು ಬಿದ್ದಿದೆ. ನಮ್ಮದು ಬಹಳ ಬಡ ಕುಟುಂಬ. ನಮ್ಮದೇ ಆದ ಯಾವ ಆಸ್ತಿಯೂ ಇಲ್ಲ. ನಾವಿರುವ ಮನೆಯ ಜಾಗವೂ ಅರಣ್ಯ ಇಲಾಖೆಗೆ ಒಳಪಟ್ಟಿದೆ. ನಮ್ಮ ಮನೆಯಲ್ಲಿ ದುಡಿಯುವವನು ಸತೀಶ ಮಾತ್ರ. ನಮ್ಮ ಮನೆಯಲ್ಲಿವ ಐವರೂ ಅವನ ಮೇಲೆ ಅವಲಂಬಿತವಾಗಿದ್ದೇವೆ. ಸತೀಶನನ್ನು ಬಿಟ್ಟು ಮನೆಯಲ್ಲಿರುವ ಮತ್ಯಾರಿಗೂ ಉದ್ಯೋಗವಿಲ್ಲ. ಈಗ ಆತನಿಲ್ಲದೇ ಇರುವ ದುಃಖದ ಜತೆಗೆ ಮನೆಯನ್ನು ನಡೆಸಲು ಕಷ್ಟಕರವಾಗಿದೆ. ಆದಷ್ಟು ಬೇಗ ಅವನನ್ನು ಹುಡುಕಿ ಕೊಡಬೇಕಾಗಿದೆ. ತಮ್ಮ ಈ ಅನಾಥ ಕುಟುಂಬವನ್ನು ಉಳಿಸಿಕೊಡಿ'' ಎಂದು ಅಳಲು ತೋಡಿಕೊಂಡರು.

ಸತೀಶನ ತಂದೆ ಈಶ್ವರ ಮಾತನಾಡಿ, ''ನಮ್ಮ ಮನೆಗೆ ಆಧಾರ ಸ್ತಂಭವೇ ಸತೀಶನಾಗಿದ್ದ. ಇನ್ನೊಬ್ಬ ಮಗ ಮರಣ ಹೊಂದಿದ್ದಾನೆ. ಆತನ ಹೆಂಡತಿಯೂ ನಮ್ಮ ಮನೆಯಲ್ಲೇ ಇದ್ದಾಳೆ. ಇವರಿಗೆ ಮಕ್ಕಳಿಲ್ಲ. ಮನೆಯ ನಿರ್ವಹಣೆ ಮಾಡುತ್ತಿದ್ದ ಸತೀಶ ಕಣ್ಮರೆಯಾಗಿದ್ದಾನೆ. ಜಗತ್ತು ಇಷ್ಟು ತಾಂತ್ರಿಕವಾಗಿ ಮುಂದುವರೆದಿದೆ. 29 ದಿನಗಳಾದರೂ ಸರಕಾರ ನನ್ನ ಮಗನನ್ನು ಹುಡುಕುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನದಾಗಲಿ ನನ್ನ ಕುಟುಂಬದವರ ಹೆಸರಿನಲ್ಲಾಗಲಿ ಯಾವುದೇ ಆಸ್ತಿ ಇಲ್ಲ'' ಎನ್ನುತ್ತ ಬಿಕ್ಕಿ ಬಿಕ್ಕಿ ಅತ್ತರು.

ಇವರ ಮನೆಗೆ ಪೋಲೀಸ್‌ ಅಧಿಕಾರಿಗಳು, ಮೀನುಗಾರಿಕೆ ಅಧಿಕಾರಿಗಳು, ಮೀನುಗಾರಿಕೆ ಸಚಿವ ಇನ್ನೂ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆದರೆ ಇನ್ನೂ ಸರಕಾರದ ವತಿಯಿಂದ ಯಾವುದೇ ಹಣದ ಸಹಾಯ ದೊರೆತಿಲ್ಲ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ