ಆ್ಯಪ್ನಗರ

ಕದಂಬದಿಂದ ಬಾಳೆಹಣ್ಣಿನ ಚಾಕಲೇಟ್‌ ಬಿಡುಗಡೆ

ಶಿರಸಿ: ಕೃಷಿ ಉಪ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಿರುವ ಇಲ್ಲಿಯ ಕದಂಬ ಮಾರ್ಕೆಟಿಂಗ್‌ ಸೌಹಾರ್ದ ಸಹಕಾರಿ ಸಂಘವು ಬಾಳೆಹಣ್ಣಿನ ಚಾಕಲೇಟ್‌ ಹೊರತಂದಿದೆ. ನೆಲಸಿರಿ ಬ್ರ್ಯಾಂಡ್‌ನಲ್ಲಿಹೊರತಂದ ಚಾಕಲೇಟ್‌ಅನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹಾಗೂ ಸಚಿವ ಶಿವರಾಮ ಹೆಬ್ಬಾರ್‌ ಸೋಮವಾರ ಬಿಡುಗಡೆಗೊಳಿಸಿದರು.

Vijaya Karnataka 5 May 2020, 5:00 am
ಶಿರಸಿ: ಕೃಷಿ ಉಪ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಿರುವ ಇಲ್ಲಿಯ ಕದಂಬ ಮಾರ್ಕೆಟಿಂಗ್‌ ಸೌಹಾರ್ದ ಸಹಕಾರಿ ಸಂಘವು ಬಾಳೆಹಣ್ಣಿನ ಚಾಕಲೇಟ್‌ ಹೊರತಂದಿದೆ. ನೆಲಸಿರಿ ಬ್ರ್ಯಾಂಡ್‌ನಲ್ಲಿಹೊರತಂದ ಚಾಕಲೇಟ್‌ಅನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹಾಗೂ ಸಚಿವ ಶಿವರಾಮ ಹೆಬ್ಬಾರ್‌ ಸೋಮವಾರ ಬಿಡುಗಡೆಗೊಳಿಸಿದರು.
Vijaya Karnataka Web 4SRS4_26
ಶಿರಸಿಯ ಕದಂಬ ಸಹಕಾರಿ ಸಂಸ್ಥೆಯಲ್ಲಿಬಾಳೆಹಣ್ಣಿನ ಚಾಕಲೇಟ್‌ನ್ನು ಸಚಿವರಾದ ಬಿ.ಸಿ.ಪಾಟೀಲ್‌ ಹಾಗು ಶಿವರಾಮ ಹೆಬ್ಬಾರ ಬಿಡುಗಡೆಗೊಳಿಸಿದರು.

ಲಾಕ್‌ಡೌನ್‌ ಸಂದರ್ಭದಲ್ಲಿಬಾಳೆ ಬೆಳೆ ಮಾರಾಟಕ್ಕೆ ಫಜೀತಿಗೊಳಗಾಗಿದ್ದ ರೈತರಿಗೆ ಬಾಳೆಕಾಯಿ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ. ಇದಕ್ಕೂ ಸಚಿವದ್ವಯರು ಚಾಲನೆ ನೀಡಿದರು. ಕದಂಬ ಬ್ರ್ಯಾಂಡ್‌ ನಲ್ಲಿಸಾವಯವ ಬಾಳೆಹಣ್ಣಿನ ಮಾರುಕಟ್ಟೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದರು. ಟೆಂಡರ್‌ಗೆ 300 ಕ್ವಿಂಟಲ್‌ಗೂ ಅಧಿಕ ಬಾಳೆಕಾಯಿ ಬಂದಿತ್ತು. 20ಕ್ಕೂ ಹೆಚ್ಚು ವ್ಯಾಪಾರಸ್ಥರು ಭಾಗಿಯಾಗಿದ್ದರು.

ಶಾಸಕರಾದ ಸುನೀಲ್‌ ನಾಯ್ಕ, ರೂಪಾಲಿ ನಾಯಕ್‌, ಜಿಲ್ಲಾಧಿಕಾರಿ ಡಾ.ಹರೀಶಕುಮಾರ, ಜಿಪಂ ಮುಖ್ಯಕಾರ್ನಿರ್ವಹಣಾಧಿಕಾರಿ ಎಂ.ರೋಶನ್‌, ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮಾಜಿ ಶಾಸಕ ವಿ ಎಸ್‌ ಪಾಟೀಲ್‌, ಜಿ.ಪಂ ಸದಸ್ಯೆ ಉಷಾ ಹೆಗಡೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ