ಆ್ಯಪ್ನಗರ

ಇಟಲಿ ಮ್ಯೂಸಿಯಂನಲ್ಲಿ ಕನ್ನಡದ ಕಂಪು

ಈ ಮ್ಯೂಸಿಯಂನಲ್ಲಿಭಾರತದ ಹದಿನೈದು ಭಾಷೆಗಳ ಇಪ್ಪತ್ತೆಂಟು ಕವಿಗಳ 250 ಕವಿತೆಗಳು ಕವಿಗಳ ಮೂಲ ಭಾಷೆಯ ಕೈಬರಹ, ಅವರದ್ದೇ ವಾಚನದ ವಿಡಿಯೋ, ಅದರ ಇಂಗ್ಲಿಷ್‌ ಅನುವಾದದ ಮೂಲಕ ಪ್ರದರ್ಶನಗೊಳ್ಳುತ್ತಿದೆ.

Vijaya Karnataka 29 Sep 2020, 11:59 pm
ಅಂಕೋಲಾ: ಕವಿತೆ ಹಾಗೂ ವಿಶ್ವ ಕಾವ್ಯ ಪ್ರದರ್ಶನಕ್ಕಾಗಿಯೇ ಇರುವ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿಕನ್ನಡತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ರೇಣುಕಾ ರಮಾನಂದರ ಅವರ ಕನ್ನಡ ಕವಿತೆ ಪ್ರದರ್ಶನಕ್ಕೆ ತೆರೆದುಕೊಂಡಿದೆ.
Vijaya Karnataka Web 28ANKOLA5A_24
ಇಟಲಿಯ ಮ್ಯೂಸಿಯಂನಲ್ಲಿರೇಣುಕಾ ರಮಾನಂದ ಅವರ ಕವಿತೆಗಳ ಪ್ರದರ್ಶನ.


ಈ ಮ್ಯೂಸಿಯಂನಲ್ಲಿ ಭಾರತದ ಹದಿನೈದು ಭಾಷೆಗಳ ಇಪ್ಪತ್ತೆಂಟು ಕವಿಗಳ 250 ಕವಿತೆಗಳು ಕವಿಗಳ ಮೂಲ ಭಾಷೆಯ ಕೈಬರಹ, ಅವರದ್ದೇ ವಾಚನದ ವಿಡಿಯೋ, ಅದರ ಇಂಗ್ಲಿಷ್‌ ಅನುವಾದದ ಮೂಲಕ ಪ್ರದರ್ಶನಗೊಳ್ಳುತ್ತಿದೆ. ರೇಣುಕಾ ರಮಾನಂದ ಅವರು ಬೆಳಸೆ ನಂ. 2 ಶಾಲೆಯ ಮುಖ್ಯಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ 'ಮೀನುಪೇಟೆಯ ತಿರುವು' ಕವನ ಸಂಕಲನದ ಮೂಲಕ ನಾಡಿನ ಸಾಹಿತ್ಯಾಸಕ್ತರ ಗಮನ ಸೆಳೆದಿದೆ. ಅವರ ಈ ಕೃತಿಗೆ ರಾಜ್ಯಮಟ್ಟದ ಹತ್ತಾರು ಪ್ರಶಸ್ತಿಗಳು ಬಂದಿರುವುದು ಉಲ್ಲೇಖನೀಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ