ಆ್ಯಪ್ನಗರ

ತಲಗೇರಿ ಪ್ರಾಥಮಿಕ ಶಾಲೆ ಕಟ್ಟಡ ದುರಸ್ತಿ ಮಾಡಿ

ಗೋಕರ್ಣ : ಗೋಕರ್ಣ ಗ್ರಾ.ಪಂ. ವ್ಯಾಪ್ತಿಯ ತಲಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು, ಅದನ್ನು ಶೀಘ್ರ ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಗೋಕರ್ಣದ ಕರ್ನಾಟಕ ರಕ್ಷಣಾ ವೇದಿಕೆಯವರು ಉಪತಹಸೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 8 Nov 2019, 5:00 am
ಗೋಕರ್ಣ : ಗೋಕರ್ಣ ಗ್ರಾ.ಪಂ. ವ್ಯಾಪ್ತಿಯ ತಲಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು, ಅದನ್ನು ಶೀಘ್ರ ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಗೋಕರ್ಣದ ಕರ್ನಾಟಕ ರಕ್ಷಣಾ ವೇದಿಕೆಯವರು ಉಪತಹಸೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web repair the talagheri primary school building
ತಲಗೇರಿ ಪ್ರಾಥಮಿಕ ಶಾಲೆ ಕಟ್ಟಡ ದುರಸ್ತಿ ಮಾಡಿ


ಈ ಶಾಲೆಯಲ್ಲಿವಿದ್ಯಾರ್ಥಿಗಳ ಭಯದಿಂದಲೇ ಕೂಡಬೇಕಾಗಿದೆ. ವಿದ್ಯಾರ್ಥಿಗಳ ಪಾಲಕರು ಹಲವು ಬಾರಿ ಗ್ರಾ.ಪಂ.ಗೆ ತೆರಳಿ ಅಳಲು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲಎಂದು ಕರವೇದವರು ಹೇಳಿದರು.

ಶಾಲೆಯಲ್ಲಿಯಾವುದೇ ಬಿಸಿಯೂಟದ ಕೊಠಡಿಯ ವ್ಯವಸ್ಥೆ ಇಲ್ಲ. ಶೀಘ್ರ ಶಾಲೆಯ ದುರವಸ್ಥೆಯನ್ನು ಸರಿಪಡಿಸಬೇಕು. ಯಾವುದೇ ಅನಾಹುತವಾದರೆ ಸಂಬಂಧಪಟ್ಟ ಇಲಾಖೆಯೇ ಹೊಣೆ ಹೊರಬೇಕು. ಕೂಡಲೇ ಸರಕಾರ ಎಚ್ಚೆತ್ತು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿವೇದಿಕೆಯ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿತಿಳಿಸಲಾಗಿದೆ.

ಈ ವೇಳೆ ಗೋಕರ್ಣ ಕರವೇ ಅಧ್ಯಕ್ಷ ರವಿ ಹೊಸ್ಕಟ್ಟ, ಜಿಲ್ಲಾಕಾರ್ಯದರ್ಶಿ ಸುಜಯ ಶೆಟ್ಟಿ, ತಾಲೂಕಾ ಅಧ್ಯಕ್ಷ ನಾಗರಾಜ ಶೇಟ್‌, ನಿರಂಜನ ಭಂಡಾರಿ, ಶೈಲೇಶ ನಾಯ್ಕ, ಧನರಾಜ ಆಚಾರಿ, ವಾಸು ಅಡ್ಪೇಕರ್‌, ದತ್ತ ಪೆಡ್ನೇಕರ್‌, ಮಂಜು ಮುಕ್ರಿ, ನಾಗರಾಜ ಹರಿಕಂತ್ರ, ಆಕಾಶ ಮುಕ್ರಿ, ಬಾಲು ಮೈಡಂಗಿ, ರವಿ ರಾಯ್ಕರ್‌ ಮುಂತಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ