ಆ್ಯಪ್ನಗರ

ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿಗೆ ಮನವಿ

ಭಟ್ಕಳ : ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ತನ್ನ ಆರೋಗ್ಯ ಕಾರ್ಡ್‌ ಆರಂಭಿಸಿ 19 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಈ ವರ್ಷದಿಂದ ಸಾರ್ವಜನಿಕರಿಗೆ ಹಲವು ಹೊಸ ಸೇವೆಗಳನ್ನು ಪರಿಚಯಿಸಲಾಗುತ್ತಿದೆ ಎಂದು ಕೆಎಂಸಿ ಮಾರ್ಕೆಟಿಂಗ್‌ ವಿಭಾಗದ ಪ್ರಮುಖ ರವಿಕಿರಣ ಪೈ ಹೇಳಿದರು.

Vijaya Karnataka 13 Jul 2019, 5:00 am
ಭಟ್ಕಳ : ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ತನ್ನ ಆರೋಗ್ಯ ಕಾರ್ಡ್‌ ಆರಂಭಿಸಿ 19 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಈ ವರ್ಷದಿಂದ ಸಾರ್ವಜನಿಕರಿಗೆ ಹಲವು ಹೊಸ ಸೇವೆಗಳನ್ನು ಪರಿಚಯಿಸಲಾಗುತ್ತಿದೆ ಎಂದು ಕೆಎಂಸಿ ಮಾರ್ಕೆಟಿಂಗ್‌ ವಿಭಾಗದ ಪ್ರಮುಖ ರವಿಕಿರಣ ಪೈ ಹೇಳಿದರು.
Vijaya Karnataka Web request for manipal health card registration
ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿಗೆ ಮನವಿ


ಅವರು ಬುಧವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷದಿಂದ 2 ವರ್ಷದ ಕಾಲಾವಧಿ ಸೌಲಭ್ಯ ಇರುವ ಮಣಿಪಾಲ ಆರೋಗ್ಯ ಕಾರ್ಡ್‌ನ್ನು ಪರಿಚಯಿಸಲಾಗುವುದು ಎಂದು ವಿವರಿಸಿದರು.

ಜೊತೆಗೆ ಮಣಿಪಾಲ ಗೋವಾ ಆಸ್ಪತ್ರೆಯನ್ನು ಆರೋಗ್ಯ ಕಾರ್ಡಿನ ವ್ಯಾಪ್ತಿಗೆ ತರಲಾಗಿದೆ. ಈ ಬಾರಿ ಕುಟುಂಬ ಯೋಜನೆಯೂ ಜಾರಿಗೆ ಬಂದಿದ್ದು, ಕಾರ್ಡುದಾರ, ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು ತಂದೆ, ತಾಯಿ, ಅತ್ತೆ, ಮಾವರನ್ನು ಒಳಗೊಂಡಂತೆ ನಾಲ್ವರು ಪೋಷಕರು 650 ರೂ. ಸದಸ್ಯತ್ವ ಶುಲ್ಕದೊಂದಿಗೆ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. 2 ವರ್ಷಕ್ಕೆ 850 ರೂ. ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಆರೋಗ್ಯ ಕಾರ್ಡ್‌ ಹೊಂದಿದವರಿಗೆ ವೈದ್ಯರ ಸಮಾಲೋಚನೆಗೆ ಶೇ.50, ಪ್ರಯೋಗಾಲಯದ ಪರೀಕ್ಷೆಗೆ ಶೇ.30, ಸಿಟಿ, ಎಂಆರ್‌ಐ, ಅಲ್ಟ್ರಾಸೌಂಡ್‌, ಹೊರರೋಗಿ ವಿಧಾನಗಳಲ್ಲಿ ಶೇ.20, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದರೆ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ ಶೇ.25, ಔಷಧಾಲಯಗಳಲ್ಲಿ ಶೇ.12 ರಿಯಾಯತಿಯನ್ನು ನೀಡಲಾಗುತ್ತದೆ. ಮಣಿಪಾಲ ಆರೋಗ್ಯ ಕಾರ್ಡನ್ನು ಒಂದು ಅಥವಾ ಎರಡು ವರ್ಷದ ಅವಧಿಗೆ ಎಷ್ಟು ಬಾರಿಯಾದರೂ ಉಪಯೋಗಿಸಬಹುದಾಗಿದೆ.

2019ರ ನೋಂದಣಿಗಾಗಿ ಸಾರ್ವಜನಿಕರು ಸೈಂಟ್‌ ಮಿಲಾಗ್ರಿಸ್‌ ಸೌಹಾರ್ದ ಭಟ್ಕಳ (ಮೊ.9538894590), ಗೌರಿಶಂಕರ್‌ ಮೊಗೇರ (ಮೊ.8722540496), ರಾಧಾಕೃಷ್ಣ ಭಟ್‌ (ಮೊ.9448221117), ಸೈಂಟ್‌ ಮಿಲಾಗ್ರೆಸ್‌ ಸೌಹಾರ್ದ ಮುರುಡೇಶ್ವರ (ಮೊ.9538020303), ಸೈಂಟ್‌ ಮಿಲಾಗ್ರೆಸ್‌ ಸೌಹಾರ್ದ ಶಿರಾಲಿ (ಮೊ.8277099156), ಕವಿತಾ ಶೇಟ್‌ (ಮೊ.8310910797)ಸಂಪರ್ಕಿಸಬಹುದಾಗಿದೆ ಎಂದರು.

ಸೆಂಟ್‌ ಮಿಲಾಗ್ರೀಸ್‌ನ ತಿಮ್ಮಪ್ಪ ಮೊಗೇರ, ಶ್ರೀನಿವಾಸ ಭಾಗ್ವತ್‌, ತುಳಸಿದಾಸ ದೇವಡಿಗ, ರಾಜೇಂದ್ರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

14ಕ್ಕೆ ಹೊನ್ನಾವರದಲ್ಲಿ ಆರೋಗ್ಯ ಶಿಬಿರ : ಭಟ್ಕಳ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಆಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ, ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌, ಜಿಎಸ್‌ಬಿ ಯುವವಾಹಿನಿ ಮತ್ತು ಮಹಿಳಾ ವಾಹಿನಿ, ಹೊನ್ನಾವರ ಟೆಂಪೋ ಚಾಲಕರು ಮತ್ತು ಮಾಲಿಕರ ಸಂಘ, ಔಷಧ ವ್ಯಾಪಾರಸ್ಥರ ಸಂಘ ಮತ್ತು ಆಟೋ ಮಾಲಿಕರ ಸಂಘ, ಹೊನ್ನಾವರ ಇವರ ಸಹಭಾಗಿತ್ವದಲ್ಲಿ ಜು.14ರಂದು ಹೊನ್ನಾವರ ಮಾರಥೋಮಾ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಹೃದ್ರೋಗ, ನರರೋಗ, ಸಾಮಾನ್ಯ ವೈದ್ಯಕೀಯ ವಿಭಾಗ, ಮೂತ್ರಶಾಸ್ತ್ರ, ಮೂತ್ರಪಿಂಡಶಾಸ್ತ್ರ, ರೇಡಿಯೋಥೆರಫಿ ಮತ್ತು ಕ್ಯಾನ್ಸರ್‌ ಚಿಕಿತ್ಸಾ ವಿಭಾಗ, ಶ್ವಾಸಕೋಶ ಚಿಕಿತ್ಸೆ, ಕಿವಿ ಮೂಗು ಮತ್ತು ಗಂಟಲು, ಚರ್ಮರೋಗ, ಮಕ್ಕಳ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ವೈದ್ಯರು ಲಭ್ಯರಿರುವರು. ಶಿಬಿರದಲ್ಲಿ ಉಚಿತವಾಗಿ ಇಸಿಜಿ, ರಕ್ತದ ಸಕ್ಕರೆ ಅಂಶ ಮತ್ತು ಬಿಪಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ