ಆ್ಯಪ್ನಗರ

ಮಳೆ ನೀರಿಗೆ ಪುಟ್ಟ ಕೆರೆಯಂತಾದ ರಸ್ತೆ

ಗೋಕರ್ಣ: ಇಲ್ಲಿನ ಬಸ್‌ ನಿಲ್ದಾಣಕ್ಕೆ ಹೋಗುವ ಗಂಜಿಗದ್ದೆ ರಸ್ತೆಯು ಜೋರಾಗಿ ಸುರಿದ ಮಳೆಯಿಂದಾಗಿ ನೀರು ತುಂಬಿ ಪುಟ್ಟ ಕೆರೆಯಂತೆ ಗೋಚರಿಸುತ್ತಿದೆ.

Vijaya Karnataka 23 Jul 2019, 5:00 am
ಗೋಕರ್ಣ: ಇಲ್ಲಿನ ಬಸ್‌ ನಿಲ್ದಾಣಕ್ಕೆ ಹೋಗುವ ಗಂಜಿಗದ್ದೆ ರಸ್ತೆಯು ಜೋರಾಗಿ ಸುರಿದ ಮಳೆಯಿಂದಾಗಿ ನೀರು ತುಂಬಿ ಪುಟ್ಟ ಕೆರೆಯಂತೆ ಗೋಚರಿಸುತ್ತಿದೆ.
Vijaya Karnataka Web KWR-22 GKN 1 A


ಬೆಳಗ್ಗಿನಿಂದ ಸಂಜೆಯವರೆಗೂ ಬೀಳುವ ಮಳೆಗೆ ರಸ್ತೆಯಲ್ಲಿ ಮೊಣಕಾಲಿನವರೆಗೆ ನೀರು ನಿಲ್ಲುತ್ತಿದೆ. ಹೀಗೆ ನೀರು ತುಂಬಿದಾಗ ರಸ್ತೆ ಮತ್ತು ಚರಂಡಿ ಕಣ್ಣಿಗೆ ಕಾಣದಾಗಿ ಎಷ್ಟೋ ಜನ ಹಾಗೂ ಜಾನುವಾರುಗಳು ಚರಂಡಿಗೆ ಬಿದ್ದ ಘಟನೆಗಳು ಸಾಕಷ್ಟು ವರದಿಯಾಗಿವೆ. ಈ ರಸ್ತೆಯಲ್ಲಿ ಜನರು ಸಂಚರಿಸಲು ಭಯಪಡುವಂತಾಗಿದೆ. ರಸ್ತೆಯ ಹತ್ತಿರದಲ್ಲೇ ಇರುವ ಕಾಲುವೆಗೆ ದನವೊಂದು ಬಿದ್ದು ಕಾಲುವೆಯಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಬಾರಿ ಮಳೆಗಾಲದ ಮುಂಚೆ ಚರಂಡಿ ಹೂಳೆತ್ತುವ ಕಾರ್ಯವೂ ನಡೆದಿಲ್ಲ.

ಗೋಕರ್ಣದ ಮುಖ್ಯ ರಸ್ತೆಯ ಸ್ಥಿತಿ ಹೀಗಾದರೂ ಸಂಬಂಧಿಸಿದ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ. ಶೀಘ್ರವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಜನರ ಅಭಿಪ್ರಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ