ಆ್ಯಪ್ನಗರ

ರೋಟಾ ವೈರಸ್‌ ಲಸಿಕೆ ವಿತರಣೆ ಇಂದಿನಿಂದ

ಕಾರವಾರ : ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿರೋಟಾ ವೈರಸ್‌ ಲಸಿಕೆಯನ್ನು ಪರಿಚಯಿಸಲಾಗುತ್ತಿದ್ದು, ಇದು ರೋಟಾ ವೈರಸ್‌ನಿಂದ ಆಗುವ ಗಂಭೀರ ಸ್ವರೂಪದ ಬೇಧಿಯಿಂದ ಮಕ್ಕಳಿಗೆ ರಕ್ಷಣೆ ನೀಡುತ್ತದೆ ಎಂದು ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

Vijaya Karnataka 5 Sep 2019, 5:00 am
ಕಾರವಾರ : ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿರೋಟಾ ವೈರಸ್‌ ಲಸಿಕೆಯನ್ನು ಪರಿಚಯಿಸಲಾಗುತ್ತಿದ್ದು, ಇದು ರೋಟಾ ವೈರಸ್‌ನಿಂದ ಆಗುವ ಗಂಭೀರ ಸ್ವರೂಪದ ಬೇಧಿಯಿಂದ ಮಕ್ಕಳಿಗೆ ರಕ್ಷಣೆ ನೀಡುತ್ತದೆ ಎಂದು ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.
Vijaya Karnataka Web rota virus vaccine delivery from today
ರೋಟಾ ವೈರಸ್‌ ಲಸಿಕೆ ವಿತರಣೆ ಇಂದಿನಿಂದ

ರೋಟಾ ವೈರಸ್‌ ಲಸಿಕೆ ಬಾಯಿಯ ಮೂಲಕ ನೀಡುವ ಲಸಿಕೆಯಾಗಿದ್ದು, ಮಗು ಜನಿಸಿದ ನಂತರ 6, 10 ಮತ್ತು 14ನೇ ವಾರದಲ್ಲಿಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿಈಗಾಗಲೇ ನೀಡುತ್ತಿರುವ ಲಸಿಕೆಗಳೊಂದಿಗೆ ಈ ಲಸಿಕೆಯನ್ನು ಕೂಡಾ ನೀಡಲಾಗುವುದು.

ಜಿಲ್ಲೆಯಲ್ಲಿಜಿಲ್ಲಾಹಾಗೂ ತಾಲೂಕು ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಮಟ್ಟದ ಲಸಿಕಾ ಕೇಂದ್ರಗಳಲ್ಲಿಅರ್ಹ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಸೆ.5ರಿಂದ ಹಮ್ಮಿಕೊಳ್ಳಲಾಗಿದೆ. ಪಾಲಕರು ಉಳಿದ ಲಸಿಕೆಗಳನ್ನು ಹಾಕಿಸುವಾಗ ತಮ್ಮ ಶಿಶುಗಳಿಗೆ ಕಡ್ಡಾಯವಾಗಿ ರೋಟಾ ವೈರಸ್‌ ಲಸಿಕೆ ಹಾಕಿಸುವಂತೆ ಡಿಎಚ್‌ಒ ಡಾ. ಜಿ.ಎನ್‌ ಅಶೋಕ ಕುಮಾರ ವಿನಂತಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ