ಆ್ಯಪ್ನಗರ

22 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ

ಕಾರವಾರ : ಜಿಲ್ಲೆಯಾದ್ಯಂತ ಕಳೆದ ಜೂನ್‌ನಿಂದ ಈವರೆಗೆ ವಶಪಡಿಸಿಕೊಂಡಿದ್ದ 22 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಶನಿವಾರ ಇಲ್ಲಿನ ಮಾಜಾಳಿ ಅರಣ್ಯ ಪ್ರದೇಶದಲ್ಲಿ ನಾಶ ಮಾಡಿದರು.

Vijaya Karnataka 25 Nov 2018, 5:00 am
ಕಾರವಾರ : ಜಿಲ್ಲೆಯಾದ್ಯಂತ ಕಳೆದ ಜೂನ್‌ನಿಂದ ಈವರೆಗೆ ವಶಪಡಿಸಿಕೊಂಡಿದ್ದ 22 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಶನಿವಾರ ಇಲ್ಲಿನ ಮಾಜಾಳಿ ಅರಣ್ಯ ಪ್ರದೇಶದಲ್ಲಿ ನಾಶ ಮಾಡಿದರು.
Vijaya Karnataka Web rs 22 lakhs illegal alcohol extraction worth
22 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ


ವಿಧಾನಸಭೆ ಚುನಾವಣೆಯ ಬಳಿಕವೂ ಅಕ್ರಮ ಮದ್ಯದ ವಿರುದ್ಧ ತೀವ್ರ ಕಾರ್ಯಾಚರಣೆ ಮುಂದುವರೆಸಿರುವ ಅಬಕಾರಿ ಇಲಾಖೆಯವರು ಜೂನ್‌ನಿಂದ ಈವರೆಗೆ 56 ಪ್ರಕರಣಗಳನ್ನು ದಾಖಲಿಸಿದ್ದು ಒಟ್ಟು 4591.35 ಲೀ. ಅಕ್ರಮ ಗೋವಾ ಮದ್ಯ ಮತ್ತು ಬೀರ್‌ ವಶಪಡಿಸಿಕೊಂಡಿದ್ದರು.

ಇವುಗಳನ್ನು ಮಾಜಾಳಿಯ ಅಬಕಾರಿ ಇಲಾಖೆ ಚೆಕ್‌ಪೋಸ್ಟ್‌ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ನಾಶ ಮಾಡಲಾಯಿತು. ಅಬಕಾರಿ ಉಪ ಆಯುಕ್ತ ಎಲ್‌. ಎ. ಮಂಜುನಾಥ ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿಗಳು ಸಿಬ್ಬಂದಿ ಈ ಸಂದರ್ಭದಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ