ಆ್ಯಪ್ನಗರ

ಮುಂಡಗೋಡ: 15 ದಿನ ಸಲೂನ್‌ ಬಂದ್‌ಗೆ ನಿರ್ಧಾರ

​​ಜು.11ರಿಂದ 25ರ ವರೆಗೆ ತಾಲೂಕಿನಲ್ಲಿನ ಎಲ್ಲ ಹೇರ್‌ ಕಟಿಂಗ್‌ ಶಾಪ್‌ಗಳನ್ನು ಬಂದ್‌ ಮಾಡುತ್ತಿದ್ದು ಮುಂದೆ ಶಾಪ್‌ಗಳನ್ನು ಆರಂಭಿಸುವ ವೇಳೆ ನಮಗೆ ಪಿಪಿಇ ಕಿಟ್‌ಗಳನ್ನು ಸರಕಾರದಿಂದ ಉಚಿತವಾಗಿ ನೀಡಬೇಕು

Vijaya Karnataka Web 11 Jul 2020, 7:59 pm
ಮುಂಡಗೋಡ: ತಾಲೂಕಿನಲ್ಲಿಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಹದಿನೈದು ದಿನ ಕಟಿಂಗ್‌ ಶಾಪ್‌(ಸಲೂನ್‌)ಗಳನ್ನು ಬಂದ್‌ ಮಾಡಲಾಗುವುದು ಎಂದು ಹಡಪದ ಸಮಾಜದವರು ತಹಸೀಲ್ದಾರ್‌ಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.
Vijaya Karnataka Web ಕಟಿಂಗ್
ಕಟಿಂಗ್‌


ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳಳು ಹೆಚ್ಚಾಗುತ್ತಿದ್ದು ಇದರಿಂದ ನಮಗೆ ಭಯವಾಗುತ್ತೀದೆ ನಾವು ಬಡ ಕುಟುಂಬದವರಿದ್ದು ಈ ಉದ್ಯೋಗದಿಂದಲೇ ನಮ್ಮ ಕುಟುಂಬಗಳ ನಿರ್ವಹಣೆ ಮಾಡುತ್ತಿದ್ದೇವೆ.ಆದರೆ ಕೋವಿಡ್‌ ಕಾಯಿಲೆ ಹತೋಟಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲಆದ್ದರಿಂದ ನಾವು ಸದ್ಯ ಹದಿನೈದು ದಿನ ನಮ್ಮ ಕಟಿಂಗ್‌ ಶಾಪ್‌ಗಳನ್ನು ಬಂದ್‌ ಮಾಡಲು ನಿರ್ಧರಿಸಿದ್ದೆವೆ.

ಜು.11ರಿಂದ 25ರ ವರೆಗೆ ತಾಲೂಕಿನಲ್ಲಿನ ಎಲ್ಲ ಹೇರ್‌ ಕಟಿಂಗ್‌ ಶಾಪ್‌ಗಳನ್ನು ಬಂದ್‌ ಮಾಡುತ್ತಿದ್ದು ಮುಂದೆ ಶಾಪ್‌ಗಳನ್ನು ಆರಂಭಿಸುವ ವೇಳೆ ನಮಗೆ ಪಿಪಿಇ ಕಿಟ್‌ಗಳನ್ನು ಸರಕಾರದಿಂದ ಉಚಿತವಾಗಿ ನೀಡಬೇಕು ಎಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಹಡಪದ ಸಮಾಜದ ಜಿಲ್ಲಾಧ್ಯಕ್ಷ ಸಿದ್ದಪ್ಪ ಹಡಪದ, ಮಂಜುನಾಥ ಹಡಪದ, ಮಹೇಶ ಹಡಪದ, ಮಂಜುನಾಥ, ಮಲ್ಲಿಕಾರ್ಜುನ ಜಗದೀಶ ಮುಂತಾವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ