Please enable javascript.ವೈಜ್ಞಾನಿಕ ಕೃಷಿಯಿಂದ ಯಶ ಗಳಿಸಲು ಸಾಧ್ಯ - Scientific agriculture can gain success - Vijay Karnataka

ವೈಜ್ಞಾನಿಕ ಕೃಷಿಯಿಂದ ಯಶ ಗಳಿಸಲು ಸಾಧ್ಯ

ವಿಕ ಸುದ್ದಿಲೋಕ 4 Jun 2016, 4:00 am
Subscribe

ಶಿರಸಿ : ಎಂಟು ವರ್ಷಗಳ ಹಿಂದೆ ಈ ಭಾಗದಲ್ಲಿ ಅಗರ್‌ವುಡ್‌ ಕೃಷಿ ಪರಿಚಿತವಾಗಿದ್ದು ನಾಟಿ ಮಾಡಿದ ಸಸಿಗಳು ಇದೀಗ ಕೆಲವೆಡೆ ಬೆಳೆದು ನಿಂತಿವೆ. ಇವುಗಳ ಬೆಳವಣಿಗೆ, ಗುಣಮಟ್ಟದ ದೃಷ್ಟಿಯಿಂದ ಕಟಾವಿಗೂ ಕೆಲ ತಿಂಗಳ ಮೊದಲು ಮಾಡುವ ಇನಾಕ್ಯುಲೇಶನ್‌ ಕಾರ್ಯಕ್ಕೆ ತಾಲೂಕಿನ ಶಿಗೇಹಳ್ಳಿಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

scientific agriculture can gain success
ವೈಜ್ಞಾನಿಕ ಕೃಷಿಯಿಂದ ಯಶ ಗಳಿಸಲು ಸಾಧ್ಯ

ಶಿರಸಿ : ಎಂಟು ವರ್ಷಗಳ ಹಿಂದೆ ಈ ಭಾಗದಲ್ಲಿ ಅಗರ್‌ವುಡ್‌ ಕೃಷಿ ಪರಿಚಿತವಾಗಿದ್ದು ನಾಟಿ ಮಾಡಿದ ಸಸಿಗಳು ಇದೀಗ ಕೆಲವೆಡೆ ಬೆಳೆದು ನಿಂತಿವೆ. ಇವುಗಳ ಬೆಳವಣಿಗೆ, ಗುಣಮಟ್ಟದ ದೃಷ್ಟಿಯಿಂದ ಕಟಾವಿಗೂ ಕೆಲ ತಿಂಗಳ ಮೊದಲು ಮಾಡುವ ಇನಾಕ್ಯುಲೇಶನ್‌ ಕಾರ್ಯಕ್ಕೆ ತಾಲೂಕಿನ ಶಿಗೇಹಳ್ಳಿಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ವನದುರ್ಗಿ ಸಂಸ್ಥೆಯು ಇಲ್ಲಿ ಕದಂಬ ಫೌಂಡೇಶನ್‌ ಸಹಯೋಗದಲ್ಲಿ ಜಿಲ್ಲೆಯ ಸಾವಿರಾರು ರೈತರಿಗೆ ಲಕ್ಷ ಸಂಖ್ಯೆಯಲ್ಲಿ ಅಗರ್‌ವುಡ್‌ ಸಸಿಗಳನ್ನು ವಿತರಿಸಿದೆ. ಹೀಗೆ ನಾಟಿ ಮಾಡಿದ ಕೆಲವೆಡೆ ಅಗರ್‌ವುಡ್‌ ಮರಗಳು ಇನಾಕ್ಯುಲೇಶನ್‌ ಹಂತಕ್ಕೆ ಬಂದು ತಲುಪಿದೆ. 2ಅಡಿ ಸುತ್ತಳತೆಯ ಅಗರ್‌ವುಡ್‌ ಮರಕ್ಕೆ ಔಷಧ ಇಂಜೆಕ್ಟ್ ಮಾಡಬೇಕಿದೆ. ನಂತರ 6 ತಿಂಗಳ ನಂತರ ಮತ್ತೆ ಔಷಧ ಇಂಜೆಕ್ಟ್ ಮಾಡಿದಾಗ ಮರ ಕಟಾವಿಗೆ ಬರುತ್ತದೆ ಎಂದು ಇದೇ ಸಂದರ್ಭದಲ್ಲಿ ವನದುರ್ಗಿ ಸಂಸ್ಥೆಯ ಅಗರ್‌ವುಡ್‌ನ ಧರ್ಮೆಂದ್ರ ತಿಳಿಸಿದರು.

ಈ ಕಾರ್ಯಕ್ಕೆ ಸಂಸದ ಅನಂತಕುಮಾರ ಹೆಗಡೆ ಚಾಲನೆ ನೀಡಿ, ಕೈಗಾರಿಕೆಗಳಿಗೆ ಹಲವು ಒಳದಾರಿಗಳಿವೆ. ಆದರೆ ಒಬ್ಬ ಕೃಷಿಕ ಮಣ್ಣಿನಲ್ಲೆ ಬೆಳೆ ಬೆಳೆಯಬೇಕೆ ಹೊರತು ಇನ್ಯಾವುದೇ ಒಳದಾರಿಗಳಿಲ್ಲ. ಪ್ರತಿನಿತ್ಯ ಜಗತ್ತಿನ ಜನರು ಬಳಸುವ ಪದಾರ್ಥಗಳನ್ನು ಬೆಳೆಯಲು ಕೃಷಿಕನಿಂದ ಮಾತ್ರ ಸಾಧ್ಯ. ಇದೇ ಕಾರಣದಿಂದ ಟಾಟಾ, ಟೊಯೋಟಾ ಇಂತಹ ಹಲವು ದೊಡ್ಡ ಕಂಪನಿಗಳು ಕೃಷಿಗಾಗಿ ಸಾವಿರಾರು ಕೋಟಿ ಹಣ ಹೂಡಿಕೆ ಮಾಡುತ್ತಿದ್ದಾರೆ. ವೈಜ್ಞಾನಿಕವಾಗಿ ರೈತರು ಕೃಷಿಯಲ್ಲಿ ತೊಡಗಿದಾಗ ಮಾತ್ರ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯ ಎಂದರು.

ಹಿಂದೊಮ್ಮೆ ವೆನಿಲ್ಲಾ ಬೆಳೆ ಬೆಳೆದು ರೈತರು ಬೆಲೆ ಇಳಿಕೆಯಾದಾಗ ತೋಟದಲ್ಲಿ ಬಳ್ಳಿಗಳನ್ನು ಕಿತ್ತೊಗೆದರು. ಈ ಪರಿಣಾಮ ಈಗ ತೋಟದಲ್ಲಿ ವೆನಿಲ್ಲಾ ಬೆಳೆ ಕಿಂಚಿತ್‌ ಪ್ರಮಾಣದಲ್ಲೂ ಇಲ್ಲ. ಇದು ಉತ್ತಮ ಕೃಷಿಕನ ಲಕ್ಷ ಣವಲ್ಲ. ಈ ಬಾರಿ ಜುಲೈನಿಂದ ವೆನಿಲ್ಲಾ ಬೆಳೆ ಜಿಲ್ಲೆಯಲ್ಲಿ ಪ್ರಾರಂಭಿಸೋಣ, ನಿಧಾನವಾಗಿ ರೋಗ ಮುಕ್ತವನ್ನಾಗಿ ಮಾಡಿಕೊಂಡು 4-5ವರ್ಷಗಳ ನಂತರ ಮತ್ತೆ ಮಾರುಕಟ್ಟೆಯಲ್ಲಿ ಮೊದಲ ಸ್ಥಾನ ಪಡೆಯುವ ಗುರಿ ಇಟ್ಟುಕೊಳ್ಳಬೇಕು ಎಂದರು.

ಕೃಷಿ ಒಂದು ಸಂಸ್ಕೃತಿಯೇ ಹೊರತು ಹೊಟ್ಟೆಪಾಡಲ್ಲ. ಮುಂದನ ಪೀಳಿಗೆಗೆ ಶ್ರಮವಿಲ್ಲದ ಕೃಷಿ ನೀಡುವ ಪರಿಸ್ಥಿತಿ ಬಂದಿದೆ. ಇದಕ್ಕೆ ಅಗರವುಡ್‌ ಸಹಾಯವಾಗುತ್ತದೆ ಹಾಗ ಜಗತ್ತಿನೆಲ್ಲೆಡೆಯಲ್ಲಿ ಉತ್ತಮ ಮಾರುಕಟ್ಟೆಯನ್ನು ಅಗರ್‌ವುಡ್‌ ಹೊಂದಿದೆ ಎಂದರು.

ಜಿಲ್ಲೆಯ ರೈತರಿಗೆ ಬೆಟ್ಟ ಭೂಮಿ ಹಿರಿಯರಿಂದ ಬಳುವಳಿಯಾಗಿ ಬಂದಿದೆ. ಇದು ಕೃಷಿಕರ ಸೊತ್ತಾಗಿದೆ ಹೊರತು ಅನ್ಯರದ್ದಲ್ಲ. ಈ ಹಿನ್ನಲೆಯಲ್ಲಿ ಮುಂದೊಂದು ದಿನ ಬೆಟ್ಟ ಭೂಮಿಯನ್ನು ರೈತರಿಂದ ಸಂಪೂರ್ಣವಾಗಿ ಕಿತ್ತುಕೊಳ್ಳುವ ಅವಕಾಶಗಳಿದ್ದು ಬೆಟ್ಟ ಬಳಕೆದಾರರ ಅಥವಾ ವಹಿವಾಟುದಾರರ ಸಂಘ ರಚನೆ ಮಾಡಿಕೊಳ್ಳಬೇಕಾದ ಸಮಯ ಇದಾಗಿದೆ ಎಂದು ಸಂಸದ ಹೆಗಡೆ ಹೇಳಿದರು.

ಜಿಪಂ ಸದಸ್ಯರಾದ ಜಿ.ಎನ್‌ ಹೆಗಡೆ ಮುರೇಗಾರ, ಉಷಾ ಹೆಗಡೆ, ಕೃಷಿಕ ಸೀತಾರಾಮ ಹೆಗಡೆ ನೀರ್ನಳ್ಳಿ, ಶೋಭಾ ನಾಯ್ಕ, ಸಾಲ್ಕಣಿ ಗ್ರಾಪಂ ಅಧ್ಯಕ್ಷೆ ಅನಸೂಯಾ ಹೆಗಡೆ ಕಡಬಾಳ, ವಿಶ್ವನಾಥ ಹೆಗಡೆ ಶೀಗೆಹಳ್ಳಿ ಉಪಸ್ಥಿತರಿದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ