ಆ್ಯಪ್ನಗರ

ಲೈಂಗಿಕ ದೌರ್ಜನ್ಯ ಯತ್ನ

ಹದಿನೇಳು ವರ್ಷದ ಬಾಲಕನೊಬ್ಬ ನಾಲ್ಕೂವರೆ ವರ್ಷದ ಹೆಣ್ಣುಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ನಡೆದಿದೆ...

Vijaya Karnataka 28 Nov 2018, 5:00 am
ಮುಂಡಗೋಡ: ಹದಿನೇಳು ವರ್ಷದ ಬಾಲಕನೊಬ್ಬ ನಾಲ್ಕೂವರೆ ವರ್ಷದ ಹೆಣ್ಣುಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web sexual assault attempt
ಲೈಂಗಿಕ ದೌರ್ಜನ್ಯ ಯತ್ನ


17 ವರ್ಷದ ಬಾಲಕನೊಬ್ಬ ಪಕ್ಕದ ಮನೆಯ ಹೆಣ್ಣುಮಗುವನ್ನು ತನ್ನ ಮನೆಯ ಒಳಗೆ ಕರೆದುಕೊಂಡು ಹೋಗಿ ಮನೆಯ ಬಾಗಿಲು ಹಾಕಿ ಬಾಲಕಿಯ ಒಳ ಉಡುಪನ್ನು ತೆಗೆದಾಗ ಬಾಲಕಿ ಹೆದರಿ ಚೀರಾಡಲು ಆರಂಭಿಸಿದ್ದಾಳೆ. ಅದೇ ವೇಳೆಗೆ ಕೂಲಿ ಕೆಲಸ ಮಾಡಿ ಮನೆಗೆ ಬಂದ ಪಾಲಕರು ತಮ್ಮ ಮಗಳು ಮನೆಯಲ್ಲಿ ಇಲ್ಲದಿರುವುದನ್ನು ನೋಡಿ, ಅಕ್ಕ-ಪಕ್ಕದ ಮನೆಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಬಾಲಕಿ ಕೂಗಿದ ಶಬ್ದ ಕೇಳಿ ಬಂದಿದೆ. ಆಗ ಬಾಗಿಲು ಬಡಿದು ನೋಡಿದಾಗ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವಾಗಿರುವುದು ಕಂಡು ಬಂದಿದ್ದು, ನಂತರ ಮಗುವಿನ ಪಾಲಕರು ಮುಂಡಗೋಡ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ