ಆ್ಯಪ್ನಗರ

ಶಹಬಾಜ್‌ ನೂರಿಗೆ ಬ್ಯಾಂಕಾಕ್‌ನಲ್ಲಿ ಪ್ರಶಸ್ತಿ

ಶಿರಸಿ : ಬ್ಯಾಂಕಾಕ್‌ನಲ್ಲಿ ನಡೆದ ಅತ್ಯುತ್ತಮ ವೈಜ್ಞಾನಿಕ ಕಾಗದದ ಪ್ರಸ್ತುತಿ ನೀಡಿಕೆಗೆ ಇಲ್ಲಿಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಶಹಬಾಜ್‌ ನೂರಿ ಅವರಿಗೆ ಪ್ರಶಸ್ತಿ ಲಭಿಸಿದೆ.

Vijaya Karnataka 8 Jul 2019, 5:00 am
ಶಿರಸಿ : ಬ್ಯಾಂಕಾಕ್‌ನಲ್ಲಿ ನಡೆದ ಅತ್ಯುತ್ತಮ ವೈಜ್ಞಾನಿಕ ಕಾಗದದ ಪ್ರಸ್ತುತಿ ನೀಡಿಕೆಗೆ ಇಲ್ಲಿಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಶಹಬಾಜ್‌ ನೂರಿ ಅವರಿಗೆ ಪ್ರಶಸ್ತಿ ಲಭಿಸಿದೆ.
Vijaya Karnataka Web SRS-7SRS2


ಬ್ಯಾಂಕಾಕ್‌ನಲ್ಲಿ ನಡೆದ ಎರಡನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ 'ಗ್ಲೋಬಲ್‌ ಇನಿಶಿಯೇಟಿವ್ಸ್‌ ಫಾರ್‌ ಸಸ್ಟೇನೇಬಲ್‌ ಡವಲಪ್‌ಮೆಂಟ್‌: ಇಶ್ಸೂಸ್‌ ಆಂಡ್‌ ಸ್ಟ್ರಾಟಜೀಸ್‌' ಎನ್ನುವ ವಿಷಯ ಮಂಡಿಸಿ ಈ ಸಾಧನೆ ಮಾಡಿದ್ದಾರೆ.

ಇಲ್ಲಿಯ ಅರಣ್ಯ ಕಾಲೇಜಿನ ಅರಣ್ಯ ಬೇಸಾಯ ಹಾಗೂ ಬೇಸಾಯ ಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಅರಣ್ಯ ಮಹಾವಿದ್ಯಾಲಯ ಅರಣ್ಯ ಯುವ ಸಂಘದ ಅಧ್ಯಕ್ಷ ರಾಗಿ ಹಲವಾರು ಅರಣ್ಯ ಚಟುವಟಿಕೆ ನಡೆಸುತ್ತಿದ್ದಾರೆ. ಹೊಸಬೆಳೆ ಹವಾಮಾನ ಕೀಟ ಡೈನಾಮಿಕ್ಸ್‌ ಮತ್ತು ನವೀನ ಕೃಷಿ ಮತ್ತು ತಳಿ ಎಂಬ ವಿಷಯದಲ್ಲಿ ಅತ್ಯುತ್ತಮ ಭಾಷಣಕಾರರಾಗಿ ಆಯ್ಕೆಯಾಗಿದ್ದಾರೆ. ಈ ಪ್ರಬಂಧವು ರಬ್ಬರ್‌ ಉತ್ಪಾದಕತೆಯ ಮೇಲೆ ಪ್ರಭಾವ ಬೀರುವ ಸ್ಥಾನಿಕ ಅಂಶಗಳು ಮತ್ತು ವಯಸ್ಸು ವ್ಯತ್ಯಯಗಳ ಬಗ್ಗೆ ತಿಳಿಸಿಕೊಡುತ್ತದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು ಎಂದು ಮಹಾವಿದ್ಯಾಲಯದ ಡೀನ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ