ಆ್ಯಪ್ನಗರ

ತಿಂಡಿ, ಹಣ್ಣು ಮಾರಿ ಸಂಭ್ರಮಿಸಿದ ಮಕ್ಕಳು

ಅಂಕೋಲಾ : 'ಹಾಡುಹಕ್ಕಿಗಳೇ ಹಾರಿ ಬಾನಿಗೆ' ಬೇಸಿಗೆ ಶಿಬಿರದ ಮಕ್ಕಳು ಇಲ್ಲಿಯ ನಗರದ ಪೊಲೀಸ್‌ ಠಾಣೆ ವೃತ್ತದಿಂದ ಪೋಸ್ಟ್‌ ಆಫೀಸ್‌ ವರೆಗೆ ಮಕ್ಕಳು ಮನೆಯಿಂದ ತಯಾರಿಸಿ ತಂದ ವಿವಿಧ ತಿಂಡಿ, ತಂಪು ಪಾನೀಯ, ಹಣ್ಣು ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು.

Vijaya Karnataka 16 May 2019, 5:00 am
ಅಂಕೋಲಾ : 'ಹಾಡುಹಕ್ಕಿಗಳೇ ಹಾರಿ ಬಾನಿಗೆ' ಬೇಸಿಗೆ ಶಿಬಿರದ ಮಕ್ಕಳು ಇಲ್ಲಿಯ ನಗರದ ಪೊಲೀಸ್‌ ಠಾಣೆ ವೃತ್ತದಿಂದ ಪೋಸ್ಟ್‌ ಆಫೀಸ್‌ ವರೆಗೆ ಮಕ್ಕಳು ಮನೆಯಿಂದ ತಯಾರಿಸಿ ತಂದ ವಿವಿಧ ತಿಂಡಿ, ತಂಪು ಪಾನೀಯ, ಹಣ್ಣು ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು.
Vijaya Karnataka Web KWR-14ANK2


ಮಹಿಳಾ ಮತ್ತು ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉತ್ತರ ಕನ್ನಡ, ಶಿಶು ಅಭಿವೃದ್ಧಿ ಯೋಜನೆ ಅಂಕೋಲಾ ಹಾಗೂ ಸಂಗಾತಿ ರಂಗಭೂಮಿ (ರಿ) ಅಂಕೋಲಾ ಇವರ ಆಶ್ರಯದಲ್ಲಿ ಆಯೋಜಿಸಿದ 12 ದಿನಗಳ ಮಕ್ಕಳ ವಿಶೇಷ ಬೇಸಿಗೆ ಶಿಬಿರದ ಪ್ರಯುಕ್ತ ಮಕ್ಕಳ ಸಂತೆಯನ್ನು ಅರ್ಥಪೂರ್ಣವಾಗಿ ಸಂಘಟಿಸಲಾಗಿತ್ತು.

ಮಕ್ಕಳ ಸಂತೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ ನಾಯ್ಕ ಅವರು ಉದ್ಘಾಟಿಸಿ ಮಾತನಾಡಿ, ಶಿಬಿರವು ಮಕ್ಕಳಲ್ಲಿ ಉತ್ಸಾಹ ಮತ್ತು ವ್ಯವಹಾರದ ಜ್ಞಾನಕ್ಕೆ ಉತ್ತೇಜನ ನೀಡಿದೆ. ಮಕ್ಕಳೊಂದಿಗೆ ಪಾಲಕರು ಸಹ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಕ್ಕಳಿಗೆ ಮಾರ್ಗದರ್ಶನ ಮಾಡುವ ಈ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥ ಕಂಡುಕೊಳ್ಳಲಿದೆ ಎಂದರು.

ಹಿರಿಯ ಚಿಂತಕ ಕೆ.ಎನ್‌.ನಾಯಕ, ನ್ಯಾಯವಾದಿ ಸುರೇಶ ಬಾನಾವಳಿಕರ, ಶಿಕ್ಷ ಕರಾದ ರಾಯಾ ನಾಯ್ಕ, ತಿಮ್ಮಣ್ಣ ಭಟ್ಟ, ಉದಯಕುಮಾರ ನಾಯ್ಕ, ಶ್ರೀಕಾಂತ ದುರ್ಗೇಕರ, ವಿನಾಯಕ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದÜರು.

ಮಕ್ಕಳು ಸಂತೆಯಲ್ಲಿ ತಿಂಡಿ-ತಿನಿಸು, ಮಾವು, ಕಲ್ಲಂಗಡಿ, ಅರಣ್ಯದಲ್ಲಿ ಸಿಗುವ ಹಣ್ಣು-ಹಂಪಲುಗಳು, ತರಕಾರಿ, ಚಿಕನ್‌ ಬಿರಿಯಾನಿ, ಕಬಾಬ್‌, ಕೋಕಂ ಹೀಗೆ ಹಲವು ರೀತಿಯ ಸಾಮಗ್ರಿಗಳನ್ನು ತಂದು ಮಾರಾಟ ಮಾಡಿ ಗಮನ ಸೆಳೆದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ