ಆ್ಯಪ್ನಗರ

ಸಮಾಜ ಸೇವೆಯೇ ನಿಜವಾದ ಗುರು ಸೇವೆ

ಸಿದ್ದಾಪುರ : ಕಳೆದ 25 ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿಸೇವೆಸಲ್ಲಿಸುತ್ತಿರುವ ಕಾನಸೂರಿನ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ರಜತ ಮಹೋತ್ಸವ ಸಂಪನ್ನಗೊಂಡಿತು.

Vijaya Karnataka 26 Dec 2019, 5:00 am
ಸಿದ್ದಾಪುರ : ಕಳೆದ 25 ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿಸೇವೆಸಲ್ಲಿಸುತ್ತಿರುವ ಕಾನಸೂರಿನ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ರಜತ ಮಹೋತ್ಸವ ಸಂಪನ್ನಗೊಂಡಿತು.
Vijaya Karnataka Web social service is the true teacher service
ಸಮಾಜ ಸೇವೆಯೇ ನಿಜವಾದ ಗುರು ಸೇವೆ


ಕಾನಸೂರಿನ ರುದ್ರಾಂಜನೇಯ ಸಭಾಂಗಣದಲ್ಲಿಬುಧವಾರ ನಡೆದ ಬೆಳ್ಳಿ ಹಬ್ಬದ ಸಭಾ ಕಾರ್ಯಕ್ರಮವನ್ನು ಸತ್ಯ ಸಾಯಿ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ರಾಮದಾಸ ಜೆ. ಆಚಾರಿ ಉದ್ಘಾಟಿಸಿದರು. ಭಗವಾನ್‌ ಸತ್ಯಸಾಯಿ ಅವರ ಆಶಯದಂತೆ ಸಮಿತಿ ಕೆಲಸ ಮಾಡುತ್ತಿದೆ. ಸಮಾಜ ಸೇವೆಯೇ ನಿಜವಾದ ಗುರು ಸೇವೆ ಎಂದರು.

ಪ್ರಶಾಂತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಆರ್‌.ಜಿ. ಪೈ ಮಾತನಾಡಿ, ಇಂದಿನ ಯುವ ಸಮುದಾಯ ಗುರು ಭಕ್ತಿ ಕಳೆದುಕೊಂಡಿದೆ. ಧಾರ್ಮಿಕ ಬದುಕಿನೊಂದಿಗೆ ಸಮಾಜಿಕ ಜೀವನದಲ್ಲಿತೊಡಗಿಕೊಳ್ಳುವ ಸಂಘಟನೆಗೆ ಜನ ಬೆಂಬಲ ಸಿಗಬೇಕಿದೆ ಎಂದರು. ಹಿರಿಯ ಸದಸ್ಯ ನಾಗೇಶ್‌ ಶೇಟ್‌ ಮಾತನಾಡಿ, ಸಮಿತಿ ಕಳೆದ 25 ವರ್ಷಗಳಿಂದ ಉಚಿತ ಆರೋಗ್ಯ ಶಿಬಿರಗಳು, ಮಹಿಳೆಯರಿಗೆ ಹೊಲಿಗೆ ತರಬೇತಿ, ಗ್ರಾಮದಲ್ಲಿಸ್ವಚ್ಛತಾ ಕಾರ್ಯಕ್ರಮ, ಮನೆ ಮನೆಯಲ್ಲಿಭಜನೆ, ಅರಿಶಿಣ ಕುಂಕುಮ ಕಾರ್ಯಕ್ರಮ, ಪ್ರತಿ ತಿಂಗಳ 19 ರಂದು ಮಹಿಳಾ ಕಾರ್ಯಕ್ರಮ ನಡೆಸುತ್ತ ಬಂದಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದ ನಿಮಿತ್ತ ಅನ್ನಸಂತರ್ಪಣೆ, ಭಜನೆ ಹಾಗೂ ಸಾಯಿ ದರ್ಶನ ಯಕ್ಷಗಾನ ಪ್ರದರ್ಶನ ನಡೆಯಿತು. ವೇದಿಕೆಯಲ್ಲಿಬ್ಯಾಂಕ್‌ ನಿವೃತ್ತ ಅಧಿಕಾರಿ ಕಾಶಿನಾಥ ಎಂ ದಿವಾಕರ, ನಿವೃತ್ತ ಪ್ರಾಧ್ಯಾಪಕ ಡಿ.ಎನ್‌. ಶೇಟ್‌, ಅಂಚೆ ಸಹಾಯಕಿ ಸವಿತಾ ಭಟ್‌, ಸಂಘಟಕರಾದ ಶಂಕರ ಭಟ್‌, ಪಿ.ವಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ