Please enable javascript.ಸಿದ್ದಿಗಳಿಗೆ ಸಿದ್ಧಿಸಿದ ಕ್ರೀಡೆ - Something siddigalige Sports - Vijay Karnataka

ಸಿದ್ದಿಗಳಿಗೆ ಸಿದ್ಧಿಸಿದ ಕ್ರೀಡೆ

ವಿಕ ಸುದ್ದಿಲೋಕ 5 Mar 2016, 4:00 am
Subscribe

ಹಳಿಯಾಳ : ಭಾರತೀಯ ಕ್ರೀಡಾ ಪ್ರಾಧಿಕಾರವು ತಾಲೂಕಿನ ದಾಂಡೇಲಿಯ ಭಾಗದಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಸಿದ್ದಿ ಸಮುದಾಯದ ಕ್ರೀಡಾ ಪ್ರತಿಭೆ ಗುರುತಿಸುವ ದಷ್ಟಿಯಿಂದ ರಾಷ್ಟ್ರ ಮಟ್ಟದ ಕ್ರೀಡಾ ತರಬೇತಿ ಕೇಂದ್ರ ಆರಂಭಿಸಲು ಮುಂದಾಗಿರುವುದು ಸಿದ್ದಿ ಸಮುದಾಯಕ್ಕೆ ಸಿಹಿ ಸುದ್ದಿ.

something siddigalige sports
ಸಿದ್ದಿಗಳಿಗೆ ಸಿದ್ಧಿಸಿದ ಕ್ರೀಡೆ
ಹಳಿಯಾಳ : ಭಾರತೀಯ ಕ್ರೀಡಾ ಪ್ರಾಧಿಕಾರವು ತಾಲೂಕಿನ ದಾಂಡೇಲಿಯ ಭಾಗದಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಸಿದ್ದಿ ಸಮುದಾಯದ ಕ್ರೀಡಾ ಪ್ರತಿಭೆ ಗುರುತಿಸುವ ದಷ್ಟಿಯಿಂದ ರಾಷ್ಟ್ರ ಮಟ್ಟದ ಕ್ರೀಡಾ ತರಬೇತಿ ಕೇಂದ್ರ ಆರಂಭಿಸಲು ಮುಂದಾಗಿರುವುದು ಸಿದ್ದಿ ಸಮುದಾಯಕ್ಕೆ ಸಿಹಿ ಸುದ್ದಿ. ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ನಮ್ಮ ಮಕ್ಕಳ ಕ್ರೀಡಾ ಪ್ರತಿಭೆ ಗುರುತಿಸುವುದಲ್ಲದೇ ಅವರಿಗೆ ಸೂಕ್ತ ತರಬೇತಿ ನೀಡುವುದಾದರೇ ತಮ್ಮ ಮಕ್ಕಳು ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಪತಾಕೆ ಹಾರಿಸುವ ದಿನಗಳೂ ಕಣ್ಣು ಮುಂದೆ ಕಾಣುತ್ತಿವೆ ಎಂದು ಸಿದ್ದಿ ಸಮುದಾಯದವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

1991-92 ಅವಧಿಯಲ್ಲಿ ಸಿದ್ದಿ ಸಮುದಾಯದ ಕ್ರೀಡಾ ಪಟುಗಳು ಅತ್ಯಂತ ವೇಗವಾಗಿ ಕ್ರೀಡಾ ಕ್ಷೇತ್ರದಲ್ಲಿ ತಮ್ಮದೆ ಛಾಪು ಒತ್ತಲು ಆರಂಭಿಸಿದ್ದರ ಪರಿಣಾಮ ಸಿದ್ದಿ ಸಮುದಾಯದ ವಿಶೇಷ ಕ್ರೀಡಾ ಪಟುಗಳ ಶೋಧನಾ ಕಾರ್ಯಯೋಜನೆ ಕೆ ಬಿಟ್ಟಿದರಿಂದ ಕ್ರೀಡಾಪಟುಗಳ ಜೀವನ ಅತಂತ್ರವಾಯಿತು. ಅಂದಿನಿಂದ ತಾವು ಈ ಯೋಜನೆಯನ್ನು ಮತ್ತೆ ಆರಂಭಿಸುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರದೊಂದಿಗೆ ಪತ್ರವ್ಯವಹಾರ ಮಾಡುವುದಲ್ಲದೇ ಸತತ ಸಂಪರ್ಕದ ಕಾರಣ ಮತ್ತು ಸ್ಥಳೀಯ ಸಚಿವ ದೇಶಪಾಂಡೆ ದಿಲ್ಲಿ ಮಟ್ಟದಲ್ಲಿ ನಡೆಸಿದ ಪ್ರಯತ್ನದ ಫಲವಾಗಿ ಮತ್ತೆ ಕೇಂದ್ರಿಯ ಕ್ರೀಡಾ ತರಬೇತಿ ಕೇಂದ್ರವನ್ನು ತಾಲೂಕಿನಲ್ಲಿ ಆರಂಭಿಸುತ್ತಿರುವುದು ಅಭಿವದ್ಧಿ ಸಂಕೇತವಾಗಿದೆ ಎಂದು ಸಿದ್ದಿ ಸಮುದಾಯ ಹರ್ಷ ವ್ಯಕ್ತ ಪಡಿಸಿದೆ.

ಕಹಿ ದಿನಗಳ ಮೆಲುಕು? : ಸುಮಾರು 1988 - 89 ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದವರು ಇದೇ ರೀತಿಯಲ್ಲಿ ದೂರದ ದಿಲ್ಲಿಯಿಂದ ಸಿದ್ದಿಗಳು ಹೆಚ್ಚಾಗಿ ವಾಸಿಸುವು ಹಳಿಯಾಳ ತಾಲೂಕಿನ ಸಿದ್ದಿ ವಾಡಾ ಮತ್ತು ಯಲ್ಲಾಪುರ ತಾಲೂಕಿನ ಕೆಲವು ಗ್ರಾಮಗಳಿಗೆ ಭೇಟಿ ನೀಡಿತ್ತು. ಕಾಡಿನಲ್ಲಿ ಅಡಗಿದ್ದ ನೂರಾರು ಕ್ರೀಡಾ ಪ್ರತಿಭೆ ಗುರುತಿಸಿ ಅದರಲ್ಲಿ ಸುಮಾರು 40 ಕ್ಕೂ ಅಧಿಕ ಅರ್ಹ ಕ್ರೀಡಾ ಪ್ರತಿಭೆ ಆರಿಸಿ ಎರಡು ಹಂತ (ಬ್ಯಾಚ್) ಗಳಲ್ಲಿ ಅವರನ್ನು ದೂರದ ದಿಲ್ಲಿಗೆ ಕರೆದುಕೊಂಡು ಹೋಗಿ ಉತ್ತಮ ತರಬೇತಿ ನೀಡಿದ ಪರಿಣಾಮ ಅವರು ಬಹುಬೇಗನೆ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗುವಂತೆ ಮಾಡಿದ್ದರು. ಆದರೆ ಭಾರತೀಯ ಕ್ರೀಡಾ ಪ್ರಾಧಿಕಾರವು ಕೇವಲ 2 ವರ್ಷಗಳ ಕಡಿಮೆ ಅವಧಿಯಲ್ಲಿ ಈ ವಿಶೇಷ ಕ್ರೀಡಾ ಯೋಜನೆ ಕೆ ಬಿಟ್ಟಿದ್ದರಿಂದ ಅರಳುವ ಹತ್ತಾರು ಪ್ರತಿಭೆಗಳು ಬೀದಿಗೆ ಬರುವಂತಾಗಿತ್ತು. 1988 ರಲ್ಲಿ ಆರಂಭಿಸಿದ್ದ ಸಿದ್ದಿ ಕ್ರೀಡಾ ಪ್ರತಿಭೆಗಳ ಯೋಜನೆಯು 1991 ರಲ್ಲಿ ನೆಲಕಚ್ಚಿತು. ಮುಂದೆ 1995 ರಲ್ಲಿ ಇದು ಸಂಪೂರ್ಣ ಮುಚ್ಚಲಾಯಿತು. ಪರಿಣಾಮ ಬಹಳಷ್ಟು ಸಿದ್ದಿ ಕ್ರೀಡಾಪಟುಗಳ ಜೀವನ ದುಸ್ತರವಾಗಿದ್ದನ್ನು ಅಂದಿನ ಕೆಲ ವಂಚಿತ ಕ್ರೀಡಾ ಪಟುಗಳು ತಮಗೆ ಆದ ಕಹಿ ನೆನಪು ಮೆಲುಕು ಹಾಕುತ್ತಾರೆ.

ಸಿಹಿ ಸುದ್ದಿ ; 1988 ರಿಂದ 1990 ರ ಅವಧಿಯ ಎರಡು ವರುಷಗಳಲ್ಲಿ ಹಳ್ಳಿಗಳಿಂದಲೇ ನೇರವಾಗಿ ಆಯ್ಕೆಗೊಂಡು ದಿಲ್ಲಿಯ ನೆಹರು ಸ್ಟೇಡಿಯಂ ತಲುಪಿದ್ದ ಸಿದ್ದಿ ಕ್ರೀಡಾ ಪಟುಗಳು ಬಹಳ ಕಡಿಮೆ ಅವಧಿಯಲ್ಲಿ ತಮ್ಮ ಪರಿಶ್ರಮ ಮತ್ತು ಸೂಕ್ತ ತರಬೇತಿ ಹಾಗೂ ಅನುಭವಿ ಕೋಚ್‌ಗಳ ಸಹಾಯದಿಂದ ರಾಜ್ಯ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಹ ಸದುಪಯೋಗ ಪಡಿಸಿಕೊಂಡು ತಮ್ಮ ಕ್ರೀಡಾ ಸಾಮ್ಯರ್ಥ್ಯವನ್ನು ಇಡೀ ದೇಶಕ್ಕೆ ತೊರಿಸಿಕೊಟ್ಟಿದ್ದರು. ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಸ್ಪೋಟ್ಸ್ ಕೋಟಾದಡಿ ಉತ್ತಮ ಉದ್ಯೋಗ ಪಡೆದು ಸುಖವಾಗಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರವು ಅಂದು ನೀಡಿದ ತರಬೇತಿ ಪರಿಣಾಮ ಮಾಲಾ ಸಿದ್ದಿ ಅಥ್ಲೆಟಿಕ್ಸ್ ದಲ್ಲಿ ರಾಷ್ಟ್ರ ಮಟ್ಟದಲ್ಲಿ ಓಡುವುದರ ಮೂಲಕ ಉತ್ತಮ ಓಟಗಾರ್ತಿಯಾದರು. ಜತೆಗೆ ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಗಿಟಿಸ್ಟಿಕೊಳ್ಳುವಲ್ಲಿ ಯಶಸ್ವಿಯಾದರು. ಇವರ ಸಹ ಕ್ರೀಡಾ ಪಟು ರೂಪಾ ಸಿದ್ದಿ ಸಹ ಇದೇ ವಿಭಾಗದಲ್ಲಿ ಯಶ ಸಾಧಿಸಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿ ಇದೀಗ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ತರಬೇತಿ ಪಡೆದ ಜುಡೋ ಕ್ರೀಡಾ ಪಟು ಅಗ್ನೇಲ್ ಸಿದ್ದಿ, ಬಾಕ್ಸಿಂಗ್ ಪಟು ಲಾರೇನ್ಸ್ ಸಿದ್ದಿ, ಖ್ಯಾತ ಅಥ್ಲೆಟ್ಸ್‌ಗಳಾದ ಪಿಲಿಫ್ ಸಿದ್ದಿ, ಕಮಲಾ ಸಿದ್ದಿ, ಲೂಯಿಸ್ ಸಿದ್ದಿ, ಸುರೇಶ ಸಿದ್ದಿ, ಗೋವಿಂದ ಸಿದ್ದಿ ಸರಕಾರಿ ನೌಕರಿ ಪಡೆದಿದ್ದಾರೆ. ಕೆಲ ಅಥ್ಲೆಟಿಕ್ಸ್‌ಗಳಾದ ಪ್ರಾನಿಸ್ಸ್ ಸಿದ್ದಿ, ರೋಬರ್ಟ್ ಸಿದ್ದಿ ಮತ್ತು ಮೇರಿ ಗರಿಭಾಚೇಸಿದ್ದಿ ಸೇರಿದಂತೆ ಇನ್ನಿತರರು ತಮ್ಮ ಗ್ರಾಮಗಳಿಗೆ ಮರಳಿ ಕೃಷಿಯಲ್ಲಿ ನಿರತರಾಗಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ