ಆ್ಯಪ್ನಗರ

ಶ್ರೀ ಗಿಂಡಿ ದೇವಿ ಜಾತ್ರಾ ಮಹೋತ್ಸವ 22ರಿಂದ

ಕಾರವಾರ : ನಗರದ ಹಬ್ಬುವಾಡಾದ ಬಾಡನ ಹಬ್ಬಸ್ಥಾನ ಕ್ಷೇತ್ರದ ಜಾಗೃತ ಶಕ್ತಿ ದೇವತೆ ಶ್ರೀ ಗಿಂಡಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಾ.22 ರಿಂದ ಏ.6ರ ತನಕ ನಡೆಯಲಿದೆ.

Vijaya Karnataka 19 Mar 2019, 5:00 am
ಕಾರವಾರ : ನಗರದ ಹಬ್ಬುವಾಡಾದ ಬಾಡನ ಹಬ್ಬಸ್ಥಾನ ಕ್ಷೇತ್ರದ ಜಾಗೃತ ಶಕ್ತಿ ದೇವತೆ ಶ್ರೀ ಗಿಂಡಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಾ.22 ರಿಂದ ಏ.6ರ ತನಕ ನಡೆಯಲಿದೆ.
Vijaya Karnataka Web sri gindi devi jatra jubilee is from 22nd
ಶ್ರೀ ಗಿಂಡಿ ದೇವಿ ಜಾತ್ರಾ ಮಹೋತ್ಸವ 22ರಿಂದ


ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಮಾ.22 ರಂದು ಕಲಾಭಿವೃದ್ಧಿ ಹೋಮ, ಏ.3 ರಂದು ಬೆಳಗ್ಗೆ 11ಗಂಟೆಗೆ ದೇವಿಯ ಗದ್ದುಗೆ ಪ್ರತಿಷ್ಠಾಪನೆ ನಡೆಯುವುದು. ಮಾ.6 ರಂದು ಯುಗಾದಿ ದಿನ ವಿಶೇಷ ವಾರ್ಷಿಕ ಜಾತ್ರೆ ನಡೆಯಲಿದೆ.

ಅಂದು ಬೆಳಗ್ಗೆ 11 ಗಂಟೆಯಿಂದ ತುಲಾಭಾರ, ದೇವಿಗೆ ಉಡಿ ತುಂಬುವುದು, ಮಾರಿ ಅಮ್ಮಗೆ ಉಡಿ ತುಂಬಲಾಗುವುದು. ಮಧ್ಯಾಹ್ನ 12 ಗಂಟೆಗೆ ತುಪ್ಪದ ದೀಪದಾರತಿ ಬೆಳಗಲಾಗುವುದು. ಬಳಿಕ ಪೂಜೆ, ತೀರ್ಥ, ಪ್ರಸಾದ, ಬೇವು-ಬೆಲ್ಲ ವಿತರಣೆಯಾಗಲಿದೆ. ಆನಂತರ ದೇವಿಯ ಪಲ್ಲಕ್ಕಿ ಮೆರವಣಿಗೆ ನಂತರ ರಾತ್ರಿ 9 ಗಂಟೆಗೆ ಮಹಾಮಂಗಳಾರತಿ, ಫಲ-ಫಲಾವಳಿಗಳ ಲೀಲಾವು ನಡೆಯಲಿದೆ. ಅದೇ ದಿನ ರಾತ್ರಿ 10 ಗಂಟೆಗೆ ಸ್ವರ ಸಂಗೀತ ಇವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ