ಆ್ಯಪ್ನಗರ

ಶಾಂತಿಯುತ ಮತದಾನಕ್ಕೆ ಸಿಬ್ಬಂದಿ ಸಿದ್ಧ

ಹಳಿಯಾಳ : ಏ.23ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು ಸಾವಿರಾರು ಸಿಬ್ಬಂದಿ ಮತ್ತು ನೂರಾರು ವಿದ್ಯುನ್ಮಾನ ಮತ ಯಂತ್ರಗಳನ್ನು ಸಿದ್ಧಗೊಳಿಸಲಾಗಿದ್ದು ಅತ್ಯಂತ ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ತಾಲೂಕಾಡಳಿತ ಸಿದ್ಧಗೊಂಡಿದೆ ಎಂದು ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ ತಿಳಿಸಿದರು.

Vijaya Karnataka 14 Apr 2019, 5:00 am
ಹಳಿಯಾಳ : ಏ.23ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು ಸಾವಿರಾರು ಸಿಬ್ಬಂದಿ ಮತ್ತು ನೂರಾರು ವಿದ್ಯುನ್ಮಾನ ಮತ ಯಂತ್ರಗಳನ್ನು ಸಿದ್ಧಗೊಳಿಸಲಾಗಿದ್ದು ಅತ್ಯಂತ ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ತಾಲೂಕಾಡಳಿತ ಸಿದ್ಧಗೊಂಡಿದೆ ಎಂದು ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ ತಿಳಿಸಿದರು.
Vijaya Karnataka Web staff ready for a peaceful vote
ಶಾಂತಿಯುತ ಮತದಾನಕ್ಕೆ ಸಿಬ್ಬಂದಿ ಸಿದ್ಧ


ಶನಿವಾರ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ತಾಲೂಕಾ ನೋಡಲ್‌ ಅಧಿಕಾರಿ ವಿನಾಯಕ ಪಾಲನಕರ ಮತ್ತು ತಹಶೀಲದಾರ ಶಿವಾನಂದ ಉಳ್ಳೇಗಡ್ಡಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳಿಯಾಳ ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಿ 217 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ವಿಶೇಷಚೇತನರು ಮತ್ತು ವಯೋವೃದ್ದ ಹಿರಿಯರಿಗೆ ಪ್ರತಿಯೊಂದು ಮತಗಟ್ಟೆಗಳಲ್ಲಿ ವೀಲ್‌ಚೇರ್‌ ಕಲ್ಪಿಸಲಾಗಿದ್ದು, 12 ವರ್ನಲೇಬಲ್‌ ಮತ್ತು 21 ಕ್ರಿಟಿಕಲ್‌ ಮತಗಟ್ಟೆಗಳೆಂದು ಗುರುತಿಸಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ 1,19,602 ಪುರುಷ ಮತ್ತು 1,17,063 ಮಹಿಳೆಯರು ಸೇರಿದಂತೆ ಒಟ್ಟು 2,36,665 ಮತದಾರರು ಇವರೊಂದಿಗೆ 3 ತೃತೀಯ ಲಿಂಗದವರು ಸಹ ತಮ್ಮ ಮತಾಧಿಕಾರ ಚಲಾಯಿಸಲಿದ್ದಾರೆ. ಅಲ್ಲದೇ ಈ ಬಾರಿ 1303 ಮತದಾರರು ಹೆಚ್ಚಾಗಿದ್ದಾರೆ ಎಂದು ತಿಳಿಸಿದರು.

ಪಟ್ಟಣದ ಅಂಚಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್‌ ಮತ್ತು ಡಿ ಮಸ್ಟರಿಂಗ್‌ ಕೇಂದ್ರಗಳನ್ನು ತೆರೆಯಲಾಗಿದೆ. ಸ್ವೀಪ್‌ ಕಾರ್ಯಕ್ರಮದ ಮೂಲಕ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮತದಾನ ಜಾಗ್ರತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಮತದಾನದ ಮಹತ್ವವನ್ನು ಸಾರಲಾಗಿದೆ. ಅಲ್ಲದೇ 15,707 ಅಣಕು ಮತದಾನ ಮಾಡಲಾಗಿದ್ದು, ಏ.16ರಂದು ನಡೆಯುವ ತರಬೇತಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಮತಗಟ್ಟೆ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಅಧಿಕಾರಿಗಳ ತಂಡ : ಶಾಂತಿಯುತ ಹಾಗೂ ಯಶಸ್ವಿ ಚುನಾವಣೆಗಾಗಿ 24 ಸೆಕ್ಟರ್‌ ಅಧಿಕಾರಿಗಳು, 7 ಫ್ಲೈಯಿಂಗ್‌ ಸ್ಕ್ವಾಡ್‌, 5 ವಿ.ಎಸ್‌.ಟಿ, 1 ವಿ.ವಿ.ಟಿ ಮತ್ತು ಅಕೌಂಟಿಂಗ್‌ ತಂಡಗಳ ಜೊತೆಗೆ ಒಂದು ಸಹಾಯಕ ವೆಚ್ಚ ಪರಿಶೀಲನಾ ತಂಡ ಮತ್ತು 36 ಎಸ್‌.ಎಸ್‌.ಟಿ ತಂಡಗಳನ್ನು ನೇಮಿಸುವುದರ ಮೂಲಕ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ವಿವರಿಸಿದರು.

ಈಗಾಗಲೇ ಮಾದರಿ ನೀತಿ ಸಂಹಿತೆಯ ಕುರಿತು ಪೊಲೀಸ್‌, ಕಂದಾಯ ಮತ್ತು ಅಬಕಾರಿ ಇಲಾಖೆಯೊಂದಿಗೆ ವಿಶೇಷ ಸಭೆಯನ್ನು ಮಾಡುವುದರ ಮೂಲಕ ಶಿಸ್ತು ಕ್ರಮಕ್ಕೆ ಸೂಚಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮತ್ತು ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಈಗಾಗಲೇ 11 ಲಕ್ಷ ಕ್ಕೂ ಅಧಿಕ ದಾಖಲೆಯಿಲ್ಲದ ನಗದನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ಅಕ್ರಮವಾಗಿ ಮಧ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಸಹ ಜಪ್ತ ಮಾಡಲಾಗಿದ್ದು, ಮತದಾರರಿಗೆ ಉಡುಗೊರೆ ರೂಪದಲ್ಲಿ ನೀಡಲು ಸಾಗಾಟ ಮಾಡುತ್ತಿದ್ದ ಬಟ್ಟೆಗಳನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಅಕ್ರಮ ಮಧ್ಯ ಮಾರಾಟ ಮತ್ತು ಸಾಗಾಟದ ಮೇಲೆ ಹದ್ದಿನ ಕಣ್ಣು ಇಡಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ