ಆ್ಯಪ್ನಗರ

ಗಂಟಲುದ್ರವ ಸಂಗ್ರಹಣೆ ಆರಂಭ

ಗೋಕರ್ಣ : ಕೋವಿಡ್‌ 19 ತಡೆಯಲು ಇಲ್ಲಿನ ಗೋಕರ್ಣ ಹಾಗೂ ಬಂಕಿಕೊಡ್ಲಪ್ರಾಥಮಿಕ ಆರೋಗ್ಯ ಕೇಂದ್ರಗಳ ಏಳು ಉಪಕೇಂದ್ರಗಳಲ್ಲಿಶಂಕಿತರ ಗಂಟಲು ದ್ರವ ತೆಗೆದು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಕಳುಹಿಸಿಕೊಡಲಾಗುತ್ತಿದೆ.

Vijaya Karnataka 9 Jul 2020, 5:00 am
ಗೋಕರ್ಣ : ಕೋವಿಡ್‌ 19 ತಡೆಯಲು ಇಲ್ಲಿನ ಗೋಕರ್ಣ ಹಾಗೂ ಬಂಕಿಕೊಡ್ಲಪ್ರಾಥಮಿಕ ಆರೋಗ್ಯ ಕೇಂದ್ರಗಳ ಏಳು ಉಪಕೇಂದ್ರಗಳಲ್ಲಿ ಶಂಕಿತರ ಗಂಟಲು ದ್ರವ ತೆಗೆದು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಕಳುಹಿಸಿಕೊಡಲಾಗುತ್ತಿದೆ.
Vijaya Karnataka Web start of throat fluid collection
ಗಂಟಲುದ್ರವ ಸಂಗ್ರಹಣೆ ಆರಂಭ


ಕೆಲ ದಿನಗಳ ಹಿಂದೆ ಇಬ್ಬರು ಕೊರೊನಾ ಸೋಂಕಿತರು ಕೆಲವೆಡೆ ಬಂದು ಹೋದ ಮೇಲೆ ತೆಗೆದ ಪ್ರಥಮ ಸೋಂಕಿತರ ಗಂಟಲು ದ್ರವ ಪರೀಕ್ಷೆ ನೆಗೆಟಿವ್‌ ಬಂದಿತ್ತು. ಆದರೂ ಜನ ಒಂದು ರೀತಿಯ ಭಯದಲ್ಲೇ ಇದ್ದು ಫೀವರ್‌ ಕ್ಲಿನಿಕ್‌ಗೆ ಜ್ವರ ಬಂದವರು ಕುಮಟಾ ಅಂಕೋಲಾ ತೆರಳಿದಾಗ ಅಲ್ಲಿ ಆವತ್ತಿನ ಪರೀಕ್ಷಾ ಅವಧಿ ಮುಗಿದಿರುವುದರಿಂದ ವಾಪಸ್‌ ಬಂದವರಿದ್ದರು. ಹಾಗಾಗಿ ಫೀವರ್‌ ಕ್ಲಿನಿಕ್‌ ಇಲ್ಲೇ ತೆರೆದರೆ ಅನುಕೂಲವಾಗುತ್ತಿತ್ತು ಅಂತ ಗಮನಕ್ಕೆ ತಂದಿದ್ದರು. ಈಗ ಹತ್ತಿರವೇ ಮೊಬೈಲ್‌ ಗಂಟಲು ದ್ರವ ಪರೀಕ್ಷೆ ತಂಡ ಬಂದು ಸಂಗ್ರಹಣೆ ಮಾಡುವ ಕಾರ್ಯ ಮಾಡಿದ್ದು, ಇದು ಸಾರ್ವಜನಿಕರಿಗೆ ತುಸು ನೆಮ್ಮದಿ ತಂದಿದೆ.

ಸರಕಾರಿ ಆದೇಶದಂತೆ ಪ್ರತಿ ದಿವಸ ಆಶಾ ಕಾರ್ಯಕರ್ತೆಯರು, ಕಿರಿಯ ಮಹಿಳಾ ಸಹಾಯಕಿಯರು ಮನೆ ಮನೆ ಭೇಟಿ ಮಾಡಿ ಅದರಲ್ಲಿಯಾರಾದರೂ ಕೆಮ್ಮು ,ಜ್ವರ, ಉಸಿರಲ್ಲಿತೊಂದರೆ ಉಬ್ಬುಸ ಇದ್ದವರ ವಿವರ, ಮಕ್ಕಳ, ಗರ್ಭಿಣಿ, ವೃದ್ಧರ, ರೋಗಿಗಳ ವಿವರ ಪಡೆಯುತ್ತಾರೆ.ಜತೆಗೆ ವಿವಿಧ ಮನೆಗಳಿಗೆ ಹೊರ ರಾಜ್ಯ, ಜಿಲ್ಲೆ,ಹೊರ ರಾಷ್ಟ್ರ ಗಳಿಂದ ಬಂದವರ ವಿವರ, ವಸತಿ ಗೃಹ, ಹೋಂ ಸ್ಟೇ , ರೆಸಾರ್ಟ್‌ ಗಳಲ್ಲಿತಂಗಿರುವವರ ವಿವರ ಸಂಗ್ರಹಿಸುತ್ತಿದ್ದಾರೆ.

ಆರೋಗ್ಯ ಇಲಾಖೆ ಕಾರ್ಯ ಯಶಸ್ವಿ : ವೈದ್ಯರ ತಂಡ ನಿರೀಕ್ಷೆಗೂ ಮೀರಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರಥಮ ಪ್ರಯತ್ನ ಯಶ ಕಂಡಿದೆ. ಬಿಜ್ಜೂರು , ತದಡಿ ,ಬೆಲೆಖಾನ್‌ ಸೇರಿದಂತೆ ವಿವಿಧ ಭಾಗದ 20ಜನರು ಮತ್ತು ಬಂಕಿಕೊಡ್ಲದ ಭಾಗದಿಂದ ಒಟ್ಟು 30 ಜನರ ಹಾಗೂ ಸೋಮವಾರ ನಾಡುಮಾಸ್ಕೇರಿ, ಹನೇಹಳ್ಳಿ , ಗೋಕರ್ಣ ಭಾಗದವರ 78 ಜನರ ಗಂಟಲುದ್ರವ ಪಡೆಯಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ