ಆ್ಯಪ್ನಗರ

ಕಾರವಾರದಲ್ಲಿ 80 ಲಕ್ಷ ರೂ. ವಿದೇಶಿ ಕರೆನ್ಸಿ ಸಾಗಣೆ ಪ್ರಕರಣ: ಇಡಿಗೆ ವರ್ಗಾವಣೆ

ಕಾರವವಾರ ಬಸ್‌ ನಿಲ್ದಾಣದಲ್ಲಿ ವಿದೇಶಿ ಕರೆನ್ಸಿ ಕೊಂಡೊಯ್ಯುತ್ತಿದ್ದ ಆರೋಪಿಗಳನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಈ ಪ್ರಕರಣವನ್ನು ಸ್ಥಳೀಯ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿದ್ದಾರೆ.

Vijaya Karnataka 15 Nov 2019, 12:27 pm
ಕಾರವಾರ: ನಗರದ ಬಸ್‌ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಶಹರ ಠಾಣೆ ಪೊಲೀಸರು 80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಂಡ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ (ಇಡಿ) ವರ್ಗಾಯಿಸಲಾಗಿದೆ.
Vijaya Karnataka Web ವಿದೇಶಿ ಕರೆನ್ಸಿ
ವಿದೇಶಿ ಕರೆನ್ಸಿ


ಈ ಸುದ್ದಿ ಓದಿ: 80ಲಕ್ಷ ರೂ. ಮೌಲ್ಯದ ವಿದೇಶ ಹಣ ವಶ

ಭಟ್ಕಳ ಮೂಲದ ಅಬ್ದುಲ್‌ ನಜೀರ್‌ ಹಾಗೂ ಸಿರಾಜ್‌ ಎಂಬುವರು ಒಟ್ಟು 80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಬಸ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಕರೆನ್ಸಿ ವಶಪಡಿಸಿಕೊಂಡು ಇಬ್ಬರನ್ನೂ ವಿಚಾರಣೆ ನಡೆಸಿದ್ದರು. ಆದರೆ ವಿದೇಶಿ ಕರೆನ್ಸಿಗಳಾದ ಯುಎಸ್‌ ಡಾಲರ್ಸ್, ಯುರೋ ಹಾಗೂ ಆಫ್ರಿಕಾ ದೇಶದ ನೋಟುಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಇದು ಅಂತಾರಾಷ್ಟ್ರೀಯ ಸಂಬಂಧಗಳನ್ನು ಹೊಂದಿದ್ದು, ವಿಸ್ತೃತ ತನಿಖೆ ನಡೆಯಬೇಕಾಗಿದೆ. ಈ ಹಣ ಏಕೆ ಕೊಂಡೊಯ್ಯಲಾಗಿತ್ತು ಎಂಬ ಬಗ್ಗೆ ಹಲವು ರಾಜ್ಯ ಹಾಗೂ ದೇಶಗಳಲ್ಲಿ ತನಿಖೆಯ ಅವಶ್ಯಕತೆ ಇರುವುದರಿಂದ ಪ್ರಕರಣವನ್ನು ಇಡಿ ವಿಚಾರಣೆಗೆ ವಹಿಸಲು ನಿರ್ಧರಿಸಲಾಯಿತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೈಗಾದಲ್ಲಿ ಕೈ ತುತ್ತು ತಿನ್ನುವ ಕಾಡುಹಂದಿ: ಮನುಷ್ಯ - ವನ್ಯ ಜೀವಿಯ ಅಪರೂಪದ ನಂಟು ಈ ರಾಮು!

ಅಬ್ದುಲ್‌ ನಜೀರ್‌ ಹಾಗೂ ಸಿರಾಜ್‌ ಮುಂಬೈನಿಂದ ವಿದೇಶಿ ಕರೆನ್ಸಿ ಪಡೆದು ರೈಲಿನ ಮೂಲಕ ಗೋವಾ ತಲುಪಿದ್ದಾರೆ. ಅಲ್ಲಿಂದ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಕಾರವಾರಕ್ಕೆ ಬಂದಿದ್ದಾರೆ.

ಕೋಸ್ಟ್‌ಗಾರ್ಡ್‌ಗೆ ಸ್ವಂತ ಕಟ್ಟಡ

ಬಸ್‌ ನಿಲ್ದಾಣ ಬಳಿಯ ಸುಭಾಷ ಸರ್ಕಲ್‌ನಲ್ಲಿ ಇವರ ಅನುಮಾನಾಸ್ಪದ ವರ್ತನೆಗಳನ್ನು ಗಮನಿಸಿದ ಹವಾಲ್ದಾರ ಒಬ್ಬರು ಸಿಪಿಐ ಸಂತೋಷ ಕುಮಾರ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಠಾಣೆಗೆ ಕರೆತಂದ ಪೊಲೀಸರು ಇವರಿಬ್ಬರ ಬಳಿ ಇದ್ದ ಲಕ್ಷಾಂತರ ರೂ. ವಿದೇಶಿ ಕರೆನ್ಸಿ ಕಂಡು ಅಕ್ಷರಶಃ ದಂಗಾಗಿದ್ದರು.

ಸದ್ಯ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮಾಹಿತಿಯನ್ನು ಇಡಿಗೆ ನೀಡಲಾಗುತ್ತದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ