ಆ್ಯಪ್ನಗರ

ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಕುಮಟಾ (ಉತ್ತರ ಕನ್ನಡ) : ಕುಮಟಾ ಅರಣ್ಯ ವಲಯದ ಕೀರ್ತಿಗದ್ದೆ ನರ್ಸರಿಗೆ ಪ್ರಾಯೋಗಿಕ ತರಬೇತಿಗೆ ಬಂದಿದ್ದ ಕೊಡಗಿನ ಪೊನ್ನಂಪೇಟೆಯ ಸರಕಾರಿ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ನರ್ಸರಿ ಪಕ್ಕದ ಅಘನಾಶಿನಿ ಹೊಳೆಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಇನ್ನಿಬರು ವಿದ್ಯಾರ್ಥಿಗಳನ್ನು ನರ್ಸರಿ ವಾಚರ್‌ ರಕ್ಷಿಸಿದ್ದಾರೆ.

Vijaya Karnataka 21 Mar 2019, 5:00 am
ಕುಮಟಾ (ಉತ್ತರ ಕನ್ನಡ) : ಕುಮಟಾ ಅರಣ್ಯ ವಲಯದ ಕೀರ್ತಿಗದ್ದೆ ನರ್ಸರಿಗೆ ಪ್ರಾಯೋಗಿಕ ತರಬೇತಿಗೆ ಬಂದಿದ್ದ ಕೊಡಗಿನ ಪೊನ್ನಂಪೇಟೆಯ ಸರಕಾರಿ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ನರ್ಸರಿ ಪಕ್ಕದ ಅಘನಾಶಿನಿ ಹೊಳೆಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಇನ್ನಿಬರು ವಿದ್ಯಾರ್ಥಿಗಳನ್ನು ನರ್ಸರಿ ವಾಚರ್‌ ರಕ್ಷಿಸಿದ್ದಾರೆ.
Vijaya Karnataka Web student death drowned in the river
ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು


ಮೂಲತಃ ಬಳ್ಳಾರಿಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದ ನಿವಾಸಿ ಅಭಿಷೇಕ ರೇವಪ್ಪ ಬಣಕಾರ್‌ (21) ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ. ನೀರಿನಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ವಿವೇಕ ಎಂ. ಕೆ. ಹಾಗೂ ದರ್ಶನ ಎಚ್‌. ಎಂ. ಎಂಬವರನ್ನು ಕೀರ್ತಿಗದ್ದೆ ನರ್ಸರಿ ವಾಚರ್‌ ಜಟ್ಟಿ ತಿಪ್ಪಯ್ಯ ನಾಯ್ಕ ರಕ್ಷ ಣೆ ಮಾಡಿದ್ದಾರೆ.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ 54 ವಿದ್ಯಾರ್ಥಿಗಳು ಅಂತಿಮ ವರ್ಷದ ಪ್ರಾಯೋಗಿಕ ತರಬೇತಿಗಾಗಿ ಮಾರ್ಚ್‌ 14 ರಂದು ಕುಮಟಾಕ್ಕೆ ಆಗಮಿಸಿದ್ದರು. ಇವರನ್ನು 3 ತಂಡಗಳನ್ನಾಗಿ ವಿಂಗಡಿಸಿ ಹೊನ್ನಾವರ ಅರಣ್ಯ ವಿಭಾಗದ ಭಟ್ಕಳ, ಗೇರಸೊಪ್ಪ ಹಾಗೂ ಕುಮಟಾ ವಲಯ ವ್ಯಾಪ್ತಿಯ ನರ್ಸರಿಗಳಿಗೆ ಪ್ರಾಯೋಗಿಕ ತರಬೇತಿಗಾಗಿ ಕಳುಹಿಸಲಾಗಿತ್ತು.

ಈ ಪೈಕಿ ಒಂದು ತಂಡದ 13 ವಿದ್ಯಾರ್ಥಿಗಳು ಅಘನಾಶಿನಿ ನದಿಗೆ ಈಜಲು ಹೋಗಿದ್ದರು. ಅಭಿಷೇಕ ನೀರಿನಲ್ಲಿ ಮುಳುಗುತ್ತಿದ್ದನ್ನು ಕಂಡ ಆದರ್ಶ ಹಾಗೂ ವಿವೇಕ ರಕ್ಷಿಸಲು ಹೋಗಿ ನೀರಿನಲ್ಲಿ ಮುಳುಗಿದ್ದಾರೆ. ಅದನ್ನು ಕಂಡ ಉಳಿದ ವಿದ್ಯಾರ್ಥಿಗಳು ಚೀರಿಕೊಂಡರು. ಆಗ ನರ್ಸರಿ ವಾಚರ್‌ ಜಟ್ಟಿ ತಿಪ್ಪಯ್ಯ ನಾಯ್ಕ ಆದರ್ಶ ಹಾಗೂ ವಿವೇಕ ಅವರನ್ನು ರಕ್ಷಿಸಿದರು. ಆದರೆ ವಾಚರ್‌ ತೀವ್ರ ಆಯಾಸಗೊಂಡಿದ್ದರಿಂದ ಅಭಿಷೇಕನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಬಳಿಕ ಗಜಾನನ ನಾಯ್ಕ ಅವರ ಮೂಲಕ ಸ್ಥಳೀಯರ ಸಹಕಾರದಲ್ಲಿ ಅಭಿಷೇಕನ ಶವ ಮೇಲೆತ್ತಲಾಯಿತು.

ಅರಣ್ಯ ಇಲಾಖೆಯ ಡಿಎಫ್‌ಒ ವಸಂತ ರೆಡ್ಡಿ, ಎಸಿಎಫ್‌ಗಳಾದ ಪ್ರವೀಣಕುಮಾರ, ನಂದೀಶ ಎಲ್‌, ಆರ್‌ಎಫ್‌ಒಗಳಾದ ವರದರಂಗನಾಥ, ಅಜಯಕುಮಾರ, ಸಿಪಿಐ ಸಂತೋಷ ಶೆಟ್ಟಿ, ಪಿಎಸ್‌ಐ ಸಂಪತ್‌ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕುಮಟಾ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅರಣ್ಯ ಅಧಿಕಾರಿಗಳು ಮೃತ ಅಭಿಷೇಕನಿಗೆ ಗೌರವ ಸಲ್ಲಿಸಿದರು. ಸ್ಥಳಕ್ಕೆ ಆಗಮಿಸಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಹಪಾಠಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳು ಕಣ್ಣೀರಕೋಡಿ ಹರಿಸಿದರು. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ